ಬೆಳಗಾವಿ: ಕೆಂಗಲ್ ಹನುಮಂತಯ್ಯ ಸಂಸ್ಕೃತಿ ದತ್ತಿ ಪ್ರಶಸ್ತಿ ಸ್ವೀಕರಿಸಿದ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ನಮ್ಮದು ಕನ್ನಡಾಭಿಮಾನದ ಮನೆತನ. ತಂದೆಯವರು ಅಂಕಲಿಯಲ್ಲಿ ಪ್ರಥಮ ಏಕೀಕರಣ ಸಮ್ಮೇಳನವನ್ನು ಬೃಹತ್ ಪ್ರಮಾಣದಲ್ಲಿ ಆಯೋಜಿಸಿದ್ದರು.
ಕನ್ನಡ ಶಾಲೆ ತೆರೆದರು. ಕನ್ನಡ ಸಂಸ್ಕೃತಿಯ ಬೀಜ ಬಿತ್ತಿದರು. ಅವರ ಸಂಸ್ಕಾರದ ಫಲವೇ ಗಡಿಭಾಗದಲ್ಲಿ ನನಗೆ ಕನ್ನಡ ಸೇವೆ ಮಾಡಲು ಸಾಧ್ಯವಾಯಿತು. ಅಖಂಡ ಕರ್ನಾಟಕ ಕನ್ನಡಿಗರ ಮನಸ್ಸು ಇನ್ನೂ ಒಂದಾಗಿಲ್ಲ. ಹಳೇ ಮೈಸೂರು ಬೆಂಗಳೂರು ಭಾಗಕ್ಕೆ ಸೀಮಿತವಾಗಿದೆ.
ಕರ್ನಾಟಕದಲ್ಲಿ ವಾಸಿಸುವ ಎಲ್ಲ ಕನ್ನಡಿಗರ ಮನಸ್ಸು ಒಂದಾಗಬೇಕಿದೆ. ಮೂವತ್ತು ಜಿಲ್ಲೆಗಳ ಸಂಸ್ಕೃತಿ ಮತ್ತು ಸ್ವಾಭಿಮಾನ ಒಂದಾದಾಗ ಮಾತ್ರ ಕರ್ನಾಟಕ ಏಕೀಕರಣದ ಆಶಯ ಇನ್ನೂ ಗಟ್ಟಿಗೊಳ್ಳುತ್ತದೆ. ಕೆಎಲ್‌ಇ ಸಂಸ್ಥೆ ಕಾರ್ಯ ಹಾಗೂ ಸಂಸ್ಥೆಯ ಸ್ಥಾಪನೆಗೆ ಕಾರಣರಾದ ಸಪ್ತ ಋಷಿಗಳ ಶಕ್ತಿಯೇ ನನಗೆ ಈ ಪ್ರಶಸ್ತಿ ಸಿಗಲು ಕಾರಣವಾಗಿದೆ ಎಂದು ಹೇಳಿದರು.