More

    ಆರೋಗ್ಯಕ್ಕಾಗಿ ನೀರಿನ ಘಟಕ ಸ್ಥಾಪನೆ

    ಕೆ.ಎಂ.ದೊಡ್ಡಿ: ಕಲುಷಿತ ನೀರು ಸೇವನೆಯಿಂದ ಗ್ರಾಮೀಣ ಭಾಗದ ಬಹುತೇಕ ಜನ ವಿವಿಧ ರೋಗಗಳಿಗೆ ತುತ್ತಾಗುವುದನ್ನು ತಪ್ಪಿಸುವ ಉದ್ದೇಶದಿಂದ ನಮ್ಮ ಟ್ರಸ್ಟ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸುತ್ತಿದ್ದೇವೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.

    ಸಮೀಪದ ಮುಡಿನಹಳ್ಳಿ, ಎಚ್.ಹೊಸಹಳ್ಳಿ ಗ್ರಾಮಗಳಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸುಮಾರು 8ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಸಾರ್ವಜನಿಕ ಸ್ವತ್ತಾಗಿದ್ದು, ಜನತೆ ಶುದ್ಧ ನೀರು ಕುಡಿಯುವ ಮೂಲಕ ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಿ ಎಂದು ಕಿವಿಮಾತು ಹೇಳಿದರು.

    ಶ್ರೀಮಂತರು ಮಾತ್ರ ಶುದ್ಧ ನೀರು ಕುಡಿದರೆ ಸಾಲದು, ಬಡವರಿಗೆ ಆ ವ್ಯವಸ್ಥೆ ಸಿಗಬೇಕು. ಬಾಟಲ್‌ಗಳಲ್ಲಿ ಸಿಗುವ ನೀರಿಗೆ 20 ರೂ. ವ್ಯಯಿಸಬೇಕಿದೆ. ಈ ಹಿನ್ನೆಲೆಯಲ್ಲಿ ಬಡವರಿಗಾಗಿ ಉಚಿತವಾಗಿ ನೀರು ಸಿಗಬೇಕೆಂದು ಘಟಕ ನಿರ್ಮಿಸಿದ್ದು, ಅದರ ಸದುಪಯೋಗ ಪಡೆದುಕೊಳ್ಳಿ, ಘಟಕದ ಸುತ್ತಲೂ ನೈರ್ಮಲ್ಯ ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದರು. ಜಿಪಂ ಮಾಜಿ ಸದಸ್ಯರಾದ ಚಂದೂಪುರ ಪಾಪಣ್ಣ, ಎ.ಎಸ್,ರಾಜೀವ್, ಅಪ್ಪಾಜಿ, ರಾಜು, ಶಿವರಾಜು ಯೋಗೇಂದ್ರ, ಕೃಷ್ಣ, ಬೀರೇಶ್, ಕುಮಾರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts