More

    ಇಂದಿರಾ ಕ್ಯಾಂಟೀನ್ ಊಟದ ಮೇಲೇಕೆ ಪಾಲಿಕೆ ಸದಸ್ಯರ ಕಣ್ಣು? ನಿಯಮ ಉಲ್ಲಂಘಿಸಿ ಅವರು ಮಾಡುತ್ತಿರುವುದಾದರೂ ಏನು?

    ಬೆಂಗಳೂರು: ಇಂದಿರಾ ಕ್ಯಾಂಟೀನ್ ವತಿಯಿಂದ ಬಡಜನರಿಗೆ ಹಾಗೂ ನಿರ್ಗತಿಕರಿಗೆ ನೀಡಲಾಗುತ್ತಿರುವ ಆಹಾರ ಪೊಟ್ಟಣಗಳನ್ನು ಪಾಲಿಕೆಯ ಕೆಲವು ಸದಸ್ಯರು ತಾವೇ ವಿತರಿಸುತ್ತಿರುವಂತೆ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಜತೆಗೆ 100ರಿಂದ 150 ಆಹಾರ ಪೊಟ್ಟಣಗಳನ್ನು ವಾರ್ಡ್​ಗಳಲ್ಲಿ ಹಂಚಿಕೆ ಮಾಡಲು ತಮಗೆ ನೀಡುವಂತೆ ಒತ್ತಡ ಹೇರುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ.

    ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಬಸವನಗುಡಿ ವಾರ್ಡ್​ನ ಇಂದಿರಾ ಕ್ಯಾಂಟೀನ್ ಊಟವನ್ನು ಬೇರೆಡೆ ಹಂಚುತ್ತಿದ್ದಾರೆ ಎನ್ನಲಾಗಿರುವ ವಿಡಿಯೋ ಈಗ ವೈರಲ್ ಆಗಿದೆ. ಜತೆಗೆ ಮತ್ತಿಕೆರೆ ವಾರ್ಡ್, ಗುಟ್ಟಹಳ್ಳಿ ವಾರ್ಡ್ ಹಾಗೂ ಉಳ್ಳಾಳು ವಾರ್ಡ್ ಸೇರಿ ಹಲವೆಡೆ ಪಾಲಿಕೆ ಸದಸ್ಯರು ಈ ರೀತಿ ಊಟ ಹಂಚುತ್ತಿರುವ ಬಗ್ಗೆ ದೂರು ಕೇಳಿಬಂದಿವೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

    ಪಾಲಿಕೆ ನಿಯಮ ಉಲ್ಲಂಘನೆ: ಲಾಕ್​ಡೌನ್ ವೇಳೆ ಬಡವರು, ಕೂಲಿ ಕಾರ್ವಿುಕರು ಮತ್ತು ನಿರ್ಗತಿಕರಿಗೆ ಯಾರೇ ಆಹಾರ ಹಂಚಿಕೆ ಮಾಡುವ ಮೊದಲು ಪಾಲಿಕೆಯಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಆದೇಶ ವಿದೆ. ಆದರೆ ಕೆಲವು ಪಾಲಿಕೆ ಸದಸ್ಯರು ಮತ್ತು ಸಂಘ- ಸಂಸ್ಥೆಗಳು ನಿಯಮ ಪಾಲಿಡುತ್ತಿಲ್ಲ. ಇದರಿಂದ ಒಂದೆಡೆ ಕೆಲವು ಪಾಲಿಕೆ ಸದಸ್ಯರು ಇಂದಿರಾ ಕ್ಯಾಂಟೀನ್ ಊಟ ನೀಡುತ್ತ ಪ್ರಚಾರ ಪಡೆದರೆ, ಕೆಲವರು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ.

    ಇಂದಿರಾ ಕ್ಯಾಂಟೀನ್ ಊಟವನ್ನು ಪಾಲಿಕೆ ಸದಸ್ಯರು ಹಂಚಿಕೆ ಮಾಡುತ್ತಿರುವ ವಿಚಾರದ ಬಗ್ಗೆ ಪೂರ್ಣ ಮಾಹಿತಿಯಿಲ್ಲ. ಊಟದ ಪೊಟ್ಟಣಗಳನ್ನು ಕಾಪೋರೇಟರ್​ಗಳಿಗೆ ಕೊಡುವ ಮೊದಲು ಅಧಿಕಾರಿಗಳು ಜಾಗೃತರಾಗಿರಬೇಕು. ಇಲ್ಲದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು
    | ಎಂ. ಗೌತಮ್ ಕುಮಾರ್ ಮೇಯರ್

    ಸೇಂಟ್​ಜಾನ್ಸ್ ಆಸ್ಪತ್ರೆಯಲ್ಲಿ 200 ಹಾಸಿಗೆಗಳ ವ್ಯವಸ್ಥೆ, ಸಹಾಯವಾಣಿಗೂ ಸಿಕ್ಕಿದೆ ಚಾಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts