More

    ಭಾರತದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಇಂದು ಉದ್ಘಾಟನೆಗೆ ಸಜ್ಜಾಗಿದೆ!

    ಹೈದರಾಬಾದ್‌: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಇಂದು ಹೈದರಾಬಾದ್​ನಲ್ಲಿ ಇಂದು ಅನಾವರಣಗೊಳಿಸಲಾಗುತ್ತಿದೆ.

    ಈ ಪ್ರತಿಮೆ ವಿಶೇಷತೆ ಏನು?: ಭಾರತದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಎಂದು ಹೇಳಲಾಗುತ್ತದೆ 175-ಅಡಿ ಎತ್ತರವನ್ನು ಹೊಂದಿದೆ. ಪ್ರತಿಮೆಯ ತೂಕ 474 ಟನ್‌ಗಳಾಗಿದ್ದು, ಪ್ರತಿಮೆಯ ಆರ್ಮೇಚರ್ ರಚನೆಗೆ 360 ಟನ್ ಸ್ಟೇನ್‌ಲೆಸ್ ಸ್ಟೀಲ್ ಮತ್ತು 114 ಟನ್ ಕಂಚನ್ನು ಪ್ರತಿಮೆಗೆ ಬಳಸಲಾಗಿದೆ. ಯೋಜನೆಗೆ ಒಟ್ಟಾರೆ ವೆಚ್ಚವನ್ನು 146.50 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

    ಕೆಪಿಸಿ ಪ್ರಾಜೆಕ್ಟ್ ಲಿಮಿಟೆಡ್ ಇದನ್ನು ನಿರ್ಮಿಸಿದೆ. ಪ್ರತಿಮೆಯನ್ನು ಸ್ಥಾಪಿಸಿದ ಪೀಠ ಒಟ್ಟು 26,258 ಚದರ ಅಡಿ ವಿಸ್ತೀರ್ಣದೊಂದಿಗೆ ಮೂರು ಮಹಡಿಗಳನ್ನು ಹೊಂದಿದೆ. ಇದರಲ್ಲಿ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಬಿಂಬಿಸುವ ಶಿಲ್ಪಗಳು, ಚಿತ್ರಗಳನ್ನು ಹೊಂದಿರುವ ವಸ್ತುಸಂಗ್ರಹಾಲಯ ಮತ್ತು 100 ಆಸನಗಳ ಸಭಾಂಗಣ ಇದೆ. ಗ್ರಂಥಾಲಯವನ್ನೂ ನಿರ್ಮಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂರ್ತಿ ಸ್ಥಾಪಿಸಲಾಗಿರುವ 11 ಎಕರೆ ವಿಸ್ತೀರ್ಣದ ಸಂಪೂರ್ಣ ಆವರಣದಲ್ಲಿ ಉದ್ಯಾನ ಹಾಗೂ 450 ಕಾರುಗಳಿಗೆ ಪಾರ್ಕಿಂಗ್ ಸೌಲಭ್ಯ ಇದೆ.

    ಇದನ್ನೂ ಓದಿ: 7 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಕಪ್ಪೆಯನ್ನು ಗುರುತಿಸಿ!
    ಈ ಪ್ರತಿಮೆಯನ್ನು ಉತ್ತರ ಪ್ರದೇಶದ ನೋಯ್ಡಾದ ರಾಮ್ ಸುತಾರ್ ಆರ್ಟ್ ಕ್ರಿಯೇಷನ್ಸ್‌ನ ಹೆಸರಾಂತ ಶಿಲ್ಪಿಗಳಾದ ರಾಮ್ ವಂಜಿ ಸುತಾರ್ (98) ಮತ್ತು ಅವರ ಮಗ ಅನಿಲ್ ರಾಮ್ ಸುತಾರ್ (65) ವಿನ್ಯಾಸಗೊಳಿಸಿದ್ದಾರೆ, ಅವರು ವಿಶ್ವದ ಅತಿ ಎತ್ತರದ ಪ್ರತಿಮೆ ಸೇರಿದಂತೆ ಹಲವಾರು ಸ್ಮಾರಕ ಶಿಲ್ಪಗಳನ್ನು ವಿನ್ಯಾಸಗೊಳಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅಂಬೇಡ್ಕರ್ ಜಯಂತಿಯಂದೇ ಭಾರತದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆಯನ್ನು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಅನಾವರಣಗೊಳಿಸಲಿದ್ದಾರೆ. ಹುಸೇನ್ ಸಾಗರ್ ಸರೋವರದ ಬಳಿ 125 ಅಡಿ ಎತ್ತರದ ಪ್ರತಿಮೆ ತಲೆಯೆತ್ತಿದೆ. ಪ್ರತಿಮೆ ಅನಾವರಣಕ್ಕಾಗಿ ಬೃಹತ್ ಕ್ರೇನ್ ಬಳಕೆ ಮಾಡಲಾಗಿದ್ದು, ಮೂರ್ತಿಯ ಮೇಲಿನ ಪರದೆ ತೆರೆದು ಗುಲಾಬಿ, ಸೇವಂತಿಗೆ ಹಾಗೂ ವಿಳೇದೆಲೆಯ ಹಾರವನ್ನು ಹಾಕಲಾಗುವುದು. ನಂತರ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಲು ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಮಾಡಲಾಗುವುದು.

    ಇದನ್ನೂ ಓದಿ: PUC ಮೊದಲ ವರ್ಷದ ಪಠ್ಯಪುಸ್ತಕದಿಂದ ‘ಮೌಲಾನಾ ಅಬುಲ್ ಕಲಾಂ ಆಜಾದ್’ ಉಲ್ಲೇಖ ಕೈಬಿಟ್ಟ NCERT
    ಪ್ರತಿಮೆ ಅನಾವರಣಕ್ಕಾಗಿ ಬೌಧ್ಧ ಸನ್ಯಾಸಿಗಳನ್ನು ಹಾಗೂ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ನಿರ್ಧಾರದ ನಂತರ ಎರಡು ವರ್ಷಗಳಲ್ಲಿ ಪ್ರತಿಮೆ ತಯಾರಾಗಿದೆ. ಪ್ರತಿಮೆ ಅನಾವದರಣಕ್ಕೆ 35 ಸಾವಿರಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದ್ದು, 750 ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಜನರಿಗೆ ಆಹಾರ, ಸಿಹಿ ತಿಂಡಿ ಹಾಗೂ ನೀರಿನ ಬಾಟೆಲ್ ವ್ಯವಸ್ಥೆ ಇದೆ.

    ಫಾರ್ಮ್‌ನಲ್ಲಿ ಸ್ಫೋಟ ; 18 ಸಾವಿರ ಹಸುಗಳು ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts