More

    ಧರ್ಮದ ಆಚರಣೆಯಿಂದ ನೆಮ್ಮದಿ

    ಶೃಂಗೇರಿ: ಮನುಷ್ಯನಿಗೆ ತಾನು ಸುಖವಾಗಿರ ಬೇಕು ಎಂಬ ಆಶಯ ಇರುತ್ತದೆ. ಈ ಆಶಯ ಈಡೇರಲು ಧರ್ಮವನ್ನು ಆಚರಣೆ ಮಾಡಿ ಅಧರ್ಮವನ್ನು ಪರಿತ್ಯಾಗ ಮಾಡಬೇಕು ಎಂದು ಶ್ರೀಶಾರದಾ ಪೀಠದ ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

    ತಮ್ಮ 28ನೇ ವರ್ಧಂತಿ ಮಹೋತ್ಸವದ ಪ್ರಯುಕ್ತ ಶನಿವಾರ ಸಾಮಾಜಿಕ ಜಾಲ ತಾಣದ ಮೂಲಕ ಆರ್ಶೀವಚನ ನೀಡಿದ ಅವರು, ಧರ್ಮದ ಆಚರಣೆ ಮಾಡುವಾಗ ಆನೇಕ ಕಷ್ಟ ಬರುತ್ತದೆ. ಅಧರ್ಮ ಮಾಡಿದವರಿಗೆ ಒಳಿತು ಆಗುತ್ತದೆ ಎಂಬುವುದು ತಪ್ಪು ಕಲ್ಪನೆ. ಹಿಂದಿನ ಜನ್ಮದ ಪಾಪ ಕರ್ಮಗಳನ್ನು ನಾವು ಈ ಜನ್ಮದಲ್ಲಿ ಅನುಭವಿಸುತ್ತೇವೆ. ಹಾಗಾಗಿ ಅಧರ್ಮದ ಹಾದಿ ಎಂದಿಗೂ ಒಳಿತನ್ನು ಉಂಟು ಮಾಡುವುದಿಲ್ಲ ಎಂದರು.

    ಪ್ರತಿಯೊಬ್ಬರೂ 25 ವರ್ಷದ ಒಳಗೆ ಜ್ಞಾನವಂತರಾಗ ಬೇಕು. ಒಬ್ಬರಿಗೆ ಸೈನಿಕನಾಗಬೇಕು ಮತ್ತೊಬ್ಬರಿಗೆ ವಿದ್ವಾಂಸರಾಗುವ ಆಶಯವಿರುತ್ತದೆ. ಯಾವುದೇ ವಿದ್ಯೆಯಾದರೂ ಚಿಕ್ಕವಯಸ್ಸಿನಲ್ಲಿ ಹೆಚ್ಚಿನ ಅಧ್ಯಯನ ಮಾಡಿ ಉತ್ತಮ ಕಾರ್ಯ ಮಾಡಬೇಕು. ಸಮಾಜಕ್ಕೆ ಹೆಚ್ಚಿನ ಉಪಕಾರ ಮಾಡಬೇಕು. ನಾವು ಅದರಿಂದ ಉಪಕಾರ ಪಡೆಯಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts