More

    ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್ ಎದುರು 5 ಪೈಸೆ ಕುಸಿತದೊಂದಿಗೆ ವಹಿವಾಟು ಆರಂಭಿಸಿದ ರೂಪಾಯಿ

    ಮುಂಬೈ: ಷೇರುಪೇಟೆ ವ್ಯವಹಾರ ತಣ್ಣಗೆ ಮುಂದುವರಿದಿರುವಂತೆಯೇ ಕರೆನ್ಸಿ ಮಾರುಕಟ್ಟೆಯಲ್ಲೂ ವಹಿವಾಟು ಹದವಾಗಿ ನಡೆಯುತ್ತಿದ್ದು, ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ 5 ಪೈಸೆ ಕುಸಿತದೊಂದಿಗೆ ವಹಿವಾಟು ಶುರುಮಾಡಿಕೊಂಡಿದೆ.

    ಇಂಟರ್ ಬ್ಯಾಂಕ್ ಫಾರಿನ್ ಎಕ್ಸ್​ಚೇಂಜ್ ಮಾರ್ಕೆಟ್​ನಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ವಹಿವಾಟು 71.34ರ ದರದಲ್ಲಿ ಆರಂಭವಾಯಿತು.ಗುರುವಾರ ಇದು 71.26ರಲ್ಲಿ ವಹಿವಾಟು ಮುಗಿಸಿತ್ತು. ಆದರೆ ಕೂಡಲೇ ಚೇತರಿಕೆ ಕಂಡ ರೂಪಾಯಿ ನಂತರ 71.30ರ ದರದಲ್ಲಿ ವಹಿವಾಟು ಮುಂದುವರಿಸಿತು.

    ಈ ನಡುವೆ ಚೀನಾದ ಕೊರೋನಾ ವೈರಸ್ ಕಾಯಿಲೆಗೆ ಇದುವರೆಗೆ 25 ಮೃತಪಟ್ಟಿದ್ದು, ಕನ್​ಫರ್ಮ್ ಆಗಿರುವ 830 ಕೇಸ್​ಗಳು ವರದಿಯಾಗಿವೆ. ಈ ಅಪಾಯಕಾರಿ ವೈರಸ್ ಹೂಡಿಕೆದಾರರನ್ನು ಆತಂಕಕ್ಕೆ ಈಡುಮಾಡಿರುವುದು ವಹಿವಾಟಿನಲ್ಲೂ ವ್ಯಕ್ತವಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts