More

    IND vs ENG: ಇಂಗ್ಲೆಂಡ್ ಆಲೌಟ್: ಟೀಮ್ ಇಂಡಿಯಾದ ಮೊದಲ ಇನಿಂಗ್ಸ್ ಆರಂಭ

    ಧರ್ಮಶಾಲಾ: ಇಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಮೊದಲ ದಿನದಾಟದದಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 218 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ.

    ಇದನ್ನೂ ಓದಿ:ರಾಜ್ಯದಲ್ಲಿ ಆ್ಯಸಿಡ್ ನಿಷೇಧ ಕುರಿತು ಚಿಂತನೆ! ಇನ್ನೆರಡು ದಿನದಲ್ಲಿ ಕ್ರಮ: ಡಾ. ಪರಮೇಶ್ವರ್

    ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರ ಝಾಕ್ ಕ್ರಾಲಿ (79 ರನ್​) ಬೆನ್ ಡಕೆಟ್ (27) ರನ್​ಗಳಿಸಿದರು. 27 ರನ್​ಗಳಿಸಿದ ಬೆನ್ ಡಕೆಟ್ ಕುಲ್ದೀಪ್​​ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಒಲೀ ಪೋಪ್ (11) ಕೂಡ ಔಟಾದರು. ಇನ್ನು ಝಾಕ್ ಕ್ರಾಲಿ ಬಿರುಸಿನ 79 ರನ್​ಗಳಿಸಿದರೂ ಹೆಚ್ಚು ಹೊತ್ತು ಕ್ರೀಸ್​ನಲ್ಲಿರಲಿಲ್ಲ ಕುಲ್ದೀಪ್​​ಗೆ ಬೌಲಿಂಗ್​ಗೆ ವಿಕೆಟ್ ಒಪ್ಪಿಸಿದರು.

    ಈ ಹಂತದಲ್ಲಿ ಕಣಕ್ಕಿಳಿದ ಜೋ ರೂಟ್ ಹಾಗೂ ಜಾನಿ ಬೈರ್​ಸ್ಟೋವ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಆದರೆ 29 ರನ್​ಗಳಿಸಿದ ಬೈರ್​ಸ್ಟೋವ್ ಕುಲ್ದೀಪ್​ ಬಿರುಸಿನ ಬೌಲಿಂಗ್​ಗೆ ಔಟ್​ ಆದರು. ರೂಟ್​ (26), ಬೆನ್ ಸ್ಟೋಕ್ಸ್ (0) ಕೂಡ ವಿಕೆಟ್ ಕೈಚೆಲ್ಲಿದರು. ಈ ವೇಳೆ ಕೇವಲ 175 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ತಂಡ ಸಂಕಷ್ಟಕ್ಕೆ ಸಿಲುಕಿತ್ತು.

    ಇನ್ನುಳಿದಂತೆ ಬೆನ್ ಫೋಕ್ಸ್ 24, ಟಾಮ್ ಹಾರ್ಟ್ಲಿ 6, ಹಾಗೂ ಶೋಯಬ್ ಬಷೀರ್ ಅಜೇಯ 11 ರನ್ ಗಳಿಸಿದರು. ಮಾರ್ಕ್ ವುಡ್ ಹಾಗೂ ಜೇಮ್ಸ್ ಆ್ಯಂಡರ್ಸನ್ ಸಹ ಶೂನ್ಯಕ್ಕೆ ಔಟ್ ಆದರು.

    ಕುಲದೀಪ್ ಯಾದವ್ 72 ರನ್ ನೀಡಿ ಐದು ವಿಕೆಟ್ ಗಳಿಸಿ ಮಿಂಚಿದರು. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ 50 ವಿಕೆಟ್ ಪೂರ್ಣಗೊಳಿಸಿದರು. ಮತ್ತೊಂದೆಡೆ 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಅಶ್ವಿನ್ ನಾಲ್ಕು ವಿಕೆಟ್ ಗಳಿಸಿದರು.

    ನಟ ರಾಮ್​ಚರಣ್​ ಜೊತೆ ಮದುವೆ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ಪತ್ನಿ ಉಪಾಸನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts