More

    ಲಾಕ್​ಡೌನ್​ ಹಿನ್ನೆಲೆ; ಭಾರತದಲ್ಲಿ ಟಿವಿ ವೀಕ್ಷಕರ ಸಂಖ್ಯೆ ಎಷ್ಟಾಗಿದೆ ಗೊತ್ತಾ? ಅಚ್ಚರಿಯ ಅಂಕಿ-ಅಂಶ ಹೊರಬಿದ್ದಿದೆ ನೋಡಿ!

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಎಲ್ಲವೂ ಸ್ತಬ್ಧವಾಗಿರುವುದರಿಂದ ದೇಶದ ಜನ ಮನೆಯಲ್ಲಿಯೇ ಕಾಲಕಳೆಯುತ್ತಿದ್ದಾರೆ. ಇಂಥ ಹೊತ್ತಲ್ಲೇ ಮೊಬೈಲ್​ ಫೋನ್​, ಕಂಪ್ಯೂಟರ್​ ಮತ್ತು ಟಿವಿಗಳೇ ಮನರಂಜನೆಯ ಮೂಲ ಸರಕಾಗಿವೆ. ಅದರಲ್ಲೂ ಟಿವಿಯನ್ನು ಅದ್ಯಾವ ಮಟ್ಟಿಗೆ ನೋಡುತ್ತಿದ್ದಾರೆಂದರೆ, ಇಲ್ಲಿಯವರೆಗೂ ಆಗದ ಹೊಸ ದಾಖಲೆಗಳೇ ದಾಖಲಾಗಿವೆ. ಹೌದು, ಬಾರ್ಕ್​ ಇಂಡಿಯಾ ಮತ್ತು ನೀಲ್ಸನ್​ ಸಂಸ್ಥೆ, ಅಂಕಿ ಅಂಶವನ್ನು ಹೊರಹಾಕಿದ್ದು, ಭಾರತೀಯರು ಏ.3ರಿಂದ ಇಲ್ಲಿಯವರೆಗೂ ಬರೋಬ್ಬರಿ 1.27 ಟ್ರಿಲಿಯನ್​ ನಿಮಿಷದ ಅವಧಿಯನ್ನು ಟಿವಿ ನೋಡುವುದರಲ್ಲಿ ಕಾಲ ಕಳೆದಿದ್ದಾರಂತೆ. ಈ ಮೂಲಕ 13ನೇ ವಾರಕ್ಕೆ ಬರೋಬ್ಬರಿ ಶೇ.43 ರಷ್ಟು ಟಿವಿ ವೀಕ್ಷಣೆಯಲ್ಲಿ ಜಿಗಿತ ಕಂಡುಬಂದಿದೆ.
    ಚಾನೆಲ್​ ದೃಷ್ಟಿಯಿಂದ ನೋಡುವುದಾದರೆ, ಕ್ರೀಡೆಗೆ ಸಂಬಂಧಿಸಿದಂತೆ ಯಾವುದೇ ನೇರಪ್ರಸಾರದ ಕಾರ್ಯಕ್ರಮ ಇಲ್ಲದ ಕಾರಣ ಸ್ಪೋಟ್ಸ್​ ಚಾನೆಲ್​ ನೋಡುಗರ ಸಂಖ್ಯೆ ಕುಸಿದಿತ್ತು. ಇತ್ತೀಚಿನ ದಿನಗಳಲ್ಲಿ ಹಳೇ ಕ್ಲಾಸಿಕ್​ ಸರಣಿಗಳನ್ನು ಮರು ಪ್ರಸಾರ ಮಾಡಿದ್ದರಿಂದ ಕೊಂಚ ಚೇತರಿಕೆ ಕಂಡುಬಂದಿದೆ. ಇದನ್ನು ಬದಿಗಿಟ್ಟರೆ, ಸುದ್ದಿವಾಹಿನಿ ಮತ್ತು ಮನರಂಜನಾ ವಾಹಿನಿಗಳ ವೀಕ್ಷಣೆಯಲ್ಲಿ ಏರುಗತಿ ಮುಂದದುವರಿದಿದೆ. ಜನವರಿಯಲ್ಲಿ ಶೇ. 54ರಷ್ಟಿದ್ದ ವೀಕ್ಷಕರ ಸಂಖ್ಯೆ ಈಗ ಅದು ಶೇ.77ಕ್ಕೆ ಏರಿಕೆಯಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts