More

    ವಿಶ್ವದ ಅತ್ಯುತ್ತಮ ಪಾಕಪದ್ಧತಿಗಳ ಪಟ್ಟಿಯಲ್ಲಿ ಭಾರತಕ್ಕೆ 5ನೇ ಸ್ಥಾನ..!

    ಬೆಂಗಳೂರು: ಟೇಸ್ಟ್ ಅಟ್ಲಾಸ್ ತಯಾರು ಮಾಡಿರುವ ಪಟ್ಟಿಯಲ್ಲಿ 2022ರ ಅತ್ಯುತ್ತಮ ಪಾಕಪದ್ಧತಿಗಳ ಜಾಗತಿಕ ಪಟ್ಟಿಯಲ್ಲಿ ಭಾರತವು ಐದನೇ ಸ್ಥಾನ ಪಡೆದಿದೆ. ಈ ಪಟ್ಟಿ, ಪ್ರೇಕ್ಷಕರ ಮತಗಳನ್ನು ಆಧಾರದ ಮೇಲೆ ಭಕ್ಷ್ಯಗಳು ಮತ್ತು ಪಾನೀಯಗಳನ್ನು ರೇಟ್​ ಮಾಡಿದೆ. ಇಟಲಿಯ ಆಹಾರವು ಮೊದಲ ಸ್ಥಾನದಲ್ಲಿದ್ದು ಎರಡು ಮತ್ತು ಮೂರನೇ ಸ್ಥಾನದಲ್ಲಿ ಗ್ರೀಸ್​ ಮತ್ತು ಸ್ಪೇನ್​ನ ಆಹಾರ ಪದ್ಧತಿ ಇದೆ. 4ನೇ ಸ್ಥಾನ ಜಪಾನ್​ ಪಡೆದುಕೊಂಡಿದ್ದು 5ನೇ ಸ್ಥಾನವನ್ನು ಭಾರತ ಪಡೆದುಕೊಂಡಿದೆ.

    ಭಾರತ 4.54 ಅಂಕಗಳನ್ನು ಪಡೆದುಕೊಂಡಿದ್ದು ಅತ್ಯುತ್ತಮ ರೇಟಿಂಗ್​ ಪಡೆದುಕೊಂಡ ಆಹಾರಗಳಲ್ಲಿ “ಗರಂ ಮಸಾಲಾ, ಮಲಾಯ್​, ತುಪ್ಪ, ಬೆಣ್ಣೆ ಬೆಳ್ಳುಳ್ಳಿ ನಾನ್, ಕೀಮಾ” ಸೇರಿವೆ. ಭಾರತದ ಪಟ್ಟಿಯಲ್ಲಿ ಒಟ್ಟು 460 ಐಟಂಗಳು ಇದ್ದು. ಭಾರತೀಯ ಶೈಲಿಯ ಅತ್ಯುತ್ತಮ ರೆಸ್ಟೋರೆಂಟ್‌ಗಳೆಂದರೆ ಶ್ರೀ ಠಾಕರ್ ಭೋಜನಾಲಯ್​ (ಮುಂಬೈ), ಕರಾವಳಿ (ಬೆಂಗಳೂರು), ಬುಖಾರಾ (ನವದೆಹಲಿ), ದಮ್ ಪುಖ್ತ್ (ನವದೆಹಲಿ), ಕೊಮೊರಿನ್ (ಗುರುಗ್ರಾಮ್) ಇತ್ಯಾದಿ.

    ಜಪಾನ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಟರ್ಕಿ, ಫ್ರಾನ್ಸ್ ಮತ್ತು ಪೆರು ಕೂಡ ಅತ್ಯುತ್ತಮ ಪಾಕಪದ್ಧತಿಯನ್ನು ಹೊಂದಿರುವ ಟಾಪ್ 10 ದೇಶಗಳಲ್ಲಿ ಸೇರಿವೆ. ಪ್ರಪಂಚದ ಅತ್ಯಂತ ಜನಪ್ರಿಯವಾಗಿರುವ ಚೈನೀಸ್ ಪಾಕಪದ್ಧತಿಯು ಪಟ್ಟಿಯಲ್ಲಿ 11 ನೇ ಸ್ಥಾನ ಪಡೆದಿದೆ.

    ಈ ಬಗೆಗಿನ ಟ್ವೀಟ್ ಅಂತರ್ಜಾಲದಲ್ಲಿ ಅನೇಕರನ್ನು ಸೆಳೆದಿದ್ದು 15,000 ಕ್ಕೂ ಹೆಚ್ಚು ಕಾಮೆಂಟ್‌ಗಳೊಂದಿಗೆ 36 ಮಿಲಿಯನ್ ವ್ಯೂಗಳನ್ನು ಸಂಗ್ರಹಿಸಿದೆ. ಕೆಲವರು ತಮ್ಮ ದೇಶದ ಪಾಕಪದ್ಧತಿಯು ಇತರ ಅಡುಗೆಗಳಿಗಿಂತ ಉತ್ತಮವಾಗಿದೆ ಎಂದು ಹೇಳಿದರು,

    ವೆಬ್

    ಒಬ್ಬ ಬಳಕೆದಾರನು ಹೀಗೆ ಬರೆದಿದ್ದಾನೆ, “ನೀವು ಎಂದಿಗೂ ಆಹಾರವನ್ನು ಸೇವಿಸದಿದ್ದರೆ ನೀವು ಮಾಡುವ ಪಟ್ಟಿ ಇದು.”

    ಇನ್ನೊಬ್ಬ, “ಹಾಯ್, ಇಲ್ಲಿ ಏನೋ ಸಮಸ್ಯೆ ಇದೆ ಎಂದು ನಾನು ಭಾವಿಸುತ್ತೇನೆ. ಇಂಗ್ಲೆಂಡ್ ಯಾಕೆ ಈ ಪಟ್ಟಿಯಲ್ಲಿದೆ?” ಎಂದು ಕೇಳಿದ್ದಾನೆ.

    “ಸಂಪೂರ್ಣ ಅಸಂಬದ್ಧ,” ಇನ್ನೊಬ್ಬ ವ್ಯಕ್ತಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts