More

    ಭಾರತ ಸಾಂಸ್ಕೃತಿಕ ಶ್ರೀಮಂತಿಕೆಯ ತವರೂರು

    ಬಾಗಲಕೋಟೆ: ಭಾರತವೆಂದರೆ ಕೇವಲ ಭೌಗೋಳಿಕ ಚಿತ್ರಣ ಹೊಂದಿದ ಸಂಪತ್ತಿನಿಂದ ಕೂಡಿದ ಭೂ ಪ್ರದೇಶವಲ್ಲ. ಇದು ಸಂಸ್ಕೃತಿಕ ಶ್ರೀಮಂತಿಕೆಯ ತವರೂರು. ಭಾವ ಸಮೃದ್ಧಿ ಮತ್ತು ಶಾಸ್ತ್ರ ಸಂಪತ್ತುಗಳಿಂದ ಕೂಡಿದ ದೇಶ ಎಂದು ಶಿವಯೋಗ ಮಂದಿರದ ಚಿದಾನಂದಸ್ವಾಮಿ ಹಿರೇಮಠ ಹೇಳಿದರು.

    ನಗರದ ಬಸವೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಹಾಗೂ ಬಾಗಲಕೋಟೆ ಘಟಕಗಳ ಅಡಿಯಲ್ಲಿ ಸೋಮವಾರ ಜರುಗಿದ ವಿದ್ವಾನ್ ಮಹಾಮಹೋಪಾಧ್ಯಾಯ ರಂಗನಾಥ ಶರ್ಮಾರವರ ಹೆಸರಿನಲ್ಲಿ ಕೊಡ ಮಾಡುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.

    ದೇಶದಲ್ಲಿ ವೇದಗಳು, ಶಾಸ್ತ್ರಗಳು, ಪುರಾಣಗಳು ಹಾಗೂ ಆಗಮಿಕತೆಗಳ ಜೊತೆಗೆ ಶರಣರು, ಸಂತರು, ದಾಸರು, ದಾರ್ಶನಿಕರು ಹಾಗೂ ತತ್ವಜ್ಞಾನಿಗಳು ತಾತ್ವಿಕತೆಯ ಹಿನ್ನೆಲೆಯಲ್ಲಿ ದೇಶವನ್ನು ಸಮೃದ್ಧಗೊಳಿಸಿದ್ದಾರೆ ಎಂದರು.

    ಸಂಸ್ಕತ ಭಾಷೆಯಲ್ಲಿ ಪ್ರಖಾಂಡ ಪಾಂಡಿತ್ಯ ಸಾಧಿಸಿದ್ದ ರಂಗನಾಥ ಶರ್ಮವರು ಸಂಸ್ಕತ ಭಾಷೆಯಿಂದ ಅಭಿವ್ಯಕ್ತವಾದ ಎಲ್ಲಾ ರೂಪಗಳಲ್ಲಿ ಸಾಹಿತ್ಯ ಕೃಷಿ ಮಾಡಿದವರು. ಸಾಹಿತ್ಯಿಕ ಚಟುವಟಿಕಗಳಿಗೆ ಪ್ರೇರಕ, ಪೋಷಕ ಮತ್ತು ರಕ್ಷಕರಾಗಿ ಕೆಲಸ ಮಾಡುತ್ತಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಯ ಎಲ್ಲರೂ ಮೆಚ್ಚುವಂತಹದ್ದು ಎಂದು ಹೇಳಿದರು.

    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಸುಮಾ ದೇಸಾಯಿ ಕೌಜಲಗಿ, ಪ್ರಶಸ್ತಿ ಪುರಸ್ಕಾರಗಳು ವ್ಯಕ್ತಿಯ ವ್ಯಕ್ತಿತ್ವವನ್ನು ನಿಕರ್ಷಣೆ ಒಳಪಡಿಸುವ ಸಾಧನಗಳಿದ್ದಂತೆ. ಆ ಸಾಧನಗಳು ವ್ಯಕ್ತಿಯನ್ನು ಮತ್ತಷ್ಟು ಕಾರ್ಯಪ್ರವೃತ್ತವಾಗುವಂತೆ ಪ್ರೇರೇಪಿಸುತ್ತದೆ ಎಂದು ಅಭಿಪ್ರಾಯಪಟ್ಟರು.

    ರಘುನಂದನ ಭಟ್, ಡಾ. ಜಿ.ಬಿ. ದಾನಶೆಟ್ಟಿ, ಶಿವಾನಂದ ದೇಸಾಯಿ, ಅಧ್ಯಕ್ಷತೆ ವಹಿಸಿದ್ದ ಎಸ್.ಜಿ. ಕೋಟಿ ಮಾತನಾಡಿದರು. ಕಲ್ಯಾಣ ಕುಮಾರ ಗೋಗಿ, ಸವಿತಾ ಜೋಶಿ ಸ್ತೋತ್ರ ಸ್ತುತಿಸಿದರು. ಗೀತಾ ದಾನಶೆಟ್ಟಿ ವಚನ ಗಾಯನ ಮಾಡಿದರು. ಡಾ. ಮಾರುತಿ ಪಾಟೊಳ್ಳಿ ಸ್ವಾಗತಿಸಿದರು. ಶಿವಾನಂದ ಆದಾಪುರ ಪರಿಚಯಿಸಿದರು. ಮಾಲಾ ಭಗಿನಿ ಪ್ರಶಸ್ತಿ ಲಕ ವಾಚಿಸಿದರು. ಕಲ್ಯಾಣ ಕುಮಾರ ಕೂಗಿ ಶಾಂತಿಮಂತ್ರ ಪಠಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts