More

    ಏಷ್ಯನ್ ಚಾಂಪಿಯನ್ಸ್‌ಗೆ ಭಾರತ ತಂಡ ಪ್ರಕಟ: ಪ್ರಮುಖ ಆಟಗಾರರಿಗೆ ಕೊಕ್

    ನವದೆಹಲಿ: ಚೀನಾದ ಹಾಂಗ್‌ರೆೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಪೂರ್ವ ಸಿದ್ಧತಾ ಟೂರ್ನಿ ಎನಿಸಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಗೆ 18 ಆಟಗಾರರ ಭಾರತ ತಂಡವನ್ನು ಮಂಗಳವಾರ ಆಯ್ಕೆ ಮಾಡಲಾಗಿದ್ದು, ಪ್ರಮುಖ ಐವರು ಾರ್ವರ್ಡ್ ಆಟಗಾರರಿಗೆ ಕೊಕ್ ನೀಡಲಾಗಿದೆ. ಆಗಸ್ಟ್ 3 ರಿಂದ 12ರವರೆಗೆ ಚೆನ್ನೈನ ಮೇಜರ್ ರಾಧಾಕೃಷ್ಣ ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜಿಸಲಾಗಿದೆ.

    ಯುರೋಪ್ ಪ್ರವಾಸದ ಭಾರತ ಹಾಕಿ ತಂಡದಲ್ಲಿ ಸ್ಥಾನ ಪಡೆದಿರುವ ಲಲಿತ್ ಉಪಾಧ್ಯಾಯ, ಅಭಿಷೇಕ್, ಪವನ್, ದಿಲ್‌ಪ್ರೀತ್ ಸಿಂಗ್ ಹಾಗೂ ಸಿಮ್ರಾನ್‌ಜೀತ್ ಸಿಂಗ್ ಅವರನ್ನು ಕೈ ಬಿಡಲಾಗಿದೆ. ಹರ್ಮಾನ್‌ಪ್ರೀತ್ ಸಿಂಗ್ ತಂಡವನ್ನು ಮುನ್ನಡೆಸಲಿದ್ದು, ಮಿಡ್ ಫೀಲ್ಡರ್ ಹಾರ್ದಿಕ್ ಸಿಂಗ್ ಉಪನಾಯಕನಾಗಿದ್ದಾರೆ. ಟೂರ್ನಿಯಲ್ಲಿ ಕೊರಿಯಾ, ಮಲೇಷ್ಯಾ, ಪಾಕಿಸ್ತಾನ, ಜಪಾನ್ ಹಾಗೂ ಚೀನಾ ತಂಡಗಳ ಎದುರು ಹರ್ಮಾನ್‌ಪ್ರೀತ್ ಪಡೆ ಸೆಣಸಾಡಲಿದೆ. ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ದೃಷ್ಟಿಯಿಂದ ಏಷ್ಯನ್ ಗೇಮ್ಸ್ ಮಹತ್ವದ್ದಾಗಿದೆ.

    ತಂಡ: ಡಿೆಂಡರ್ಸ್‌: ಜರ್ಮನ್‌ಪ್ರೀತ್ ಸಿಂಗ್, ಸುಮಿತ್, ಜುಗ್ರಾಜ್ ಸಿಂಗ್, ಹರ್ಮಾನ್‌ಪ್ರೀತ್ ಸಿಂಗ್ (ನಾಯಕ), ವರುಣ್ ಕುಮಾರ್, ಅಮಿತ್ ರೋಹಿದಾಸ್. ಮೀಡ್ ಫೀಲ್ಡರ್ಸ್‌: ಹಾರ್ದಿಕ್ ಸಿಂಗ್ (ಉಪ ನಾಯಕ), ವಿವೇಕ್ ಸಾಗರ್ ಪ್ರಸಾದ್, ಮನ್‌ಪ್ರೀತ್ ಸಿಂಗ್, ನೀಲಕಂಠ ಶರ್ಮ, ಶಂಶೀರ್ ಸಿಂಗ್. ಾರ್ವರ್ಡ್: ಆಕಾಶ್‌ದೀಪ್ ಸಿಂಗ್, ಮಂದಿಪ್ ಸಿಂಗ್, ಗುರ್‌ಜಾಂತ್ ಸಿಂಗ್, ಸುಖ್‌ಜೀತ್ ಸಿಂಗ್,ಎಸ್. ಕಾರ್ತಿ. ಗೋಲು ಕೀಪರ್: ಪಿಆರ್ ಶ್ರೀಜೇಶ್, ಕೃಷ್ಣ ಬಹದ್ದೂರ್ ಪಾಠಕ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts