More

    ಮಹಿಳೆಯರ ವಿಶ್ವಕಪ್‌ನಲ್ಲಿ ಭಾರತಕ್ಕೆ ಇಂದು ಬಾಂಗ್ಲಾ ಎದುರು ಮಾಡು-ಮಡಿ ಸವಾಲು

    ಹ್ಯಾಮಿಲ್ಟನ್: ಅಸ್ಥಿರ ನಿರ್ವಹಣೆಯಿಂದಾಗಿ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಮಿಶ್ರ ಫಲ ಎದುರಿಸಿರುವ ಭಾರತ ತಂಡ ಇದೀಗ ಮಾಡು ಇಲ್ಲವೆ ಮಡಿ ಒತ್ತಡಕ್ಕೆ ಸಿಲುಕಿದೆ. ಮಿಥಾಲಿ ರಾಜ್ ಬಳಗಕ್ಕೆ ಮಂಗಳವಾರ ಬಾಂಗ್ಲಾದೇಶ ತಂಡದ ಸವಾಲು ಎದುರಾಗಲಿದ್ದು, ಸೆಮಿಫೈನಲ್ ಆಸೆ ಜೀವಂತ ಉಳಿಸಿಕೊಳ್ಳಲು ಗೆಲುವು ಅನಿವಾರ‌್ಯವೆನಿಸಿದೆ.

    ಭಾರತ ತಂಡ ಟೂರ್ನಿಯಲ್ಲಿ ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 2 ಜಯ, 3 ಸೋಲಿನೊಂದಿಗೆ 4 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ನಿರ್ಣಾಯಕ ಅಂತಿಮ ಲೀಗ್ ಪಂದ್ಯಕ್ಕೆ ಮುನ್ನ ಸೆಮಿಫೈನಲ್ ರೇಸ್‌ನಲ್ಲಿ ಅವಕಾಶ ಹೆಚ್ಚಿಸಿಕೊಳ್ಳಲು ಭಾರತಕ್ಕೆ ಬಾಂಗ್ಲಾದೇಶ ವಿರುದ್ಧ ದೊಡ್ಡ ಗೆಲುವು ಬೇಕಾಗಿದೆ. ರನ್‌ರೇಟ್ ಸುಧಾರಣೆಗೂ ಇದು ನೆರವಾಗಲಿದೆ. ಬಾಂಗ್ಲಾದೇಶ ತಂಡ ಆಡಿದ 4ರಲ್ಲಿ 3 ಸೋಲು ಕಂಡು ಸೆಮೀಸ್ ರೇಸ್‌ನಿಂದ ಬಹುತೇಕ ಹೊರಬಿದ್ದಿದ್ದರೂ, ಪಾಕಿಸ್ತಾನ ವಿರುದ್ಧ ಅಚ್ಚರಿಯ ಗೆಲುವು ದಾಖಲಿಸಿದ ಆತ್ಮವಿಶ್ವಾಸ ಹೊಂದಿದೆ. ಅಲ್ಲದೆ ಇತರ ಪಂದ್ಯಗಳಲ್ಲೂ ನಿಕಟ ಸೋಲನ್ನೇ ಕಂಡಿತ್ತು. ಹೀಗಾಗಿ ಮಿಥಾಲಿ ಪಡೆ ಎಚ್ಚರಿಕೆಯಿಂದಲೇ ಬಾಂಗ್ಲಾ ಸವಾಲು ಎದುರಿಸಬೇಕಾಗಿದೆ. ಬಾಂಗ್ಲಾ ವಿರುದ್ಧ ಮುಗ್ಗರಿಸಿದರೆ ಭಾರತ ತಂಡ, ಅಂತಿಮ ಲೀಗ್ ಪಂದ್ಯಕ್ಕೆ ಮೊದಲೇ ಸೆಮೀಸ್ ಆಸೆಯನ್ನೇ ಕೈಚೆಲ್ಲಬೇಕಾಗುತ್ತದೆ.

    ಬಲಿಷ್ಠ ಆಸ್ಟ್ರೇಲಿಯಾ ಮತ್ತು ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಅನುಭವಿಸಿರುವ ಸತತ 2 ಸೋಲುಗಳು ಸದ್ಯ ಭಾರತ ತಂಡದ ಲಯ ತಪ್ಪಿಸಿವೆ. ಈ ಪೈಕಿ ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ವಿಭಾಗ ಕೈಕೊಟ್ಟಿದ್ದರೆ, ಆಸೀಸ್ ವಿರುದ್ಧ 278 ರನ್‌ಗಳ ಬೃಹತ್ ಮೊತ್ತ ಪೇರಿಸಿದ್ದರೂ ಅದನ್ನು ರಕ್ಷಿಸಿಕೊಳ್ಳಲು ಬೌಲರ್‌ಗಳಿಂದ ಸಮರ್ಥ ನಿರ್ವಹಣೆ ಬರಲಿಲ್ಲ.

    ಸ್ಮತಿ ಮಂದನಾ, ಹರ್ಮಾನ್‌ಪ್ರೀತ್ ಜತೆಗೆ ಕಳೆದ ಪಂದ್ಯದಲ್ಲಿ ನಾಯಕಿ ಮಿಥಾಲಿ ರಾಜ್ ಕೂಡ ರನ್ ಬರ ನೀಗಿಸಿಕೊಂಡಿರುವುದು ಸಮಾಧಾನಕರ ಅಂಶ. ಬೌಲಿಂಗ್ ವಿಭಾಗದಲ್ಲಿ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಹೊರತಾಗಿ ಇತರ ಬೌಲರ್‌ಗಳಿಂದ ಸ್ಥಿರ ನಿರ್ವಹಣೆ ಬರಬೇಕಾಗಿದೆ.

    ಮುಖಾಮುಖಿ: 4
    ಭಾರತ: 4
    ಬಾಂಗ್ಲಾದೇಶ: 0

    ಇಂದಿನ ಪಂದ್ಯಗಳು
    ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ
    ಆರಂಭ: ಬೆಳಗ್ಗೆ 3.30
    ಭಾರತ-ಬಾಂಗ್ಲಾದೇಶ
    ಆರಂಭ: ಬೆಳಗ್ಗೆ 6.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಐಪಿಎಲ್ ತಂಡಗಳಿಗೆ ಫಿಟ್ನೆಸ್ ತಲೆನೋವು; ಸಿಎಸ್‌ಕೆ, ಡೆಲ್ಲಿ, ಮುಂಬೈಗೆ ಸಂಕಷ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts