More

    ದಕ್ಷಿಣ ಆಫ್ರಿಕಾ ಎದುರು ಏಕದಿನ ಸರಣಿಯಲ್ಲೂ ಸೋಲನುಭವಿಸಿದ ಭಾರತ ತಂಡ

    ಪಾರ್ಲ್: ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ಸಂಘಟಿತ ಹೋರಾಟದ ಎದುರು ಸಂಪೂರ್ಣ ಮಂಕಾದ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲೂ 7 ವಿಕೆಟ್‌ಗಳಿಂದ ಸೋಲು ಕಂಡಿತು. ಇದರಿಂದ 3 ಪಂದ್ಯಗಳ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಕೆಎಲ್ ರಾಹುಲ್ ಬಳಗ 0-2 ಸರಣಿ ಕೈಚೆಲ್ಲಿತು. ಟೆಸ್ಟ್ ಸರಣಿ ಸೋಲಿಗೆ ಪ್ರತಿಕಾರವಾಗಿ ಏಕದಿನ ಸರಣಿ ಗೆಲುವಿನ ಹಂಬಲದಲ್ಲಿದ್ದ ರಾಹುಲ್ ದ್ರಾವಿಡ್ ಮಾರ್ಗದರ್ಶನದ ತಂಡಕ್ಕೆ 2022ರ ಮೊದಲ ತಿಂಗಳಲ್ಲೇ ಸತತ 2 ಸರಣಿ ಸೋಲಿನ ನಿರಾಸೆ ಎದುರಾಯಿತು.

    ಬೊಲ್ಯಾಂಡ್ ಪಾರ್ಕ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ರಿಷಭ್ ಪಂತ್ (85 ರನ್, 71 ಎಸೆತ, 10 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಹಾಗೂ ನಾಯಕ ಕೆಎಲ್ ರಾಹುಲ್ (55ರನ್, 79 ಎಸೆತ, 4 ಬೌಂಡರಿ) ಜವಾಬ್ದಾರಿಯುತ ಆಟದ ಫಲವಾಗಿ 6 ವಿಕೆಟ್‌ಗೆ 287 ರನ್ ಕಲೆಹಾಕಿತು. ಈ ಸವಾಲು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ, ಜಾನೆಮನ್ ಮಲಾನ್ (91 ರನ್, 108 ಎಸೆತ, 8 ಬೌಂಡರಿ, 1 ಸಿಕ್ಸರ್) ಹಾಗೂ ಕ್ವಿಂಟನ್ ಡಿಕಾಕ್ (78 ರನ್, 66 ಎಸೆತ, 7 ಬೌಂಡರಿ, 3 ಸಿಕ್ಸರ್) ಆರಂಭಿಕ ಹಂತದಲ್ಲಿ ಭದ್ರಬುನಾದಿಯ ನೆರವಿನಿಂದ 48.1 ಓವರ್‌ಗಳಲ್ಲಿ 3 ವಿಕೆಟ್‌ಗೆ 288 ರನ್‌ಗಳಿಸಿ ಜಯದ ನಗೆ ಬೀರಿತು.

    ಭಾರತ: 6 ವಿಕೆಟ್‌ಗೆ 287 (ರಿಷಭ್ ಪಂತ್ 85, ಕೆಎಲ್ ರಾಹುಲ್ 55, ಶಿಖರ್ ಧವನ್ 29, ಕೊಹ್ಲಿ 0, ಶಾರ್ದೂಲ್ ಠಾಕೂರ್ 40*, ಆರ್.ಅಶ್ವಿನ್ 25*, ತಬರೇಜ್ ಶಮ್ಸಿ 57ಕ್ಕೆ 2, ಕೇಶವ್ ಮಹಾರಾಜ್ 52ಕ್ಕೆ 1, ಏಡನ್ ಮಾರ್ಕ್ರಮ್ 34ಕ್ಕೆ 1). ದಕ್ಷಿಣ ಆಫ್ರಿಕಾ: 48.1 ಓವರ್‌ಗಳಲ್ಲಿ 3 ವಿಕೆಟ್‌ಗೆ 288 (ಜಾನ್ನೆಮನ್ 91, ಕ್ವಿಂಟನ್ ಡಿ ಕಾಕ್ 78, ಟೆಂಬಾ ಬವುಮಾ 35, ಏಡನ್ ಮಾರ್ಕ್ರಮ್ 37*, ಡುಸೆನ್ 37*, ಬುಮ್ರಾ 37ಕ್ಕೆ 1, ಯಜುವೇಂದ್ರ ಚಾಹಲ್ 47ಕ್ಕೆ 1)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts