ರಿಷಭ್ ಪಂತ್-ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್; ಇಂಗ್ಲೆಂಡ್ ಎದುರು ಏಕದಿನ ಸರಣಿ ಗೆದ್ದುಕೊಂಡ ಭಾರತ

blank

ಮ್ಯಾಂಚೆಸ್ಟರ್: ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ (125*ರನ್, 113 ಎಸೆತ, 16 ಬೌಂಡರಿ, 2 ಸಿಕ್ಸರ್) ಹಾಗೂ ಹಾರ್ದಿಕ್ ಪಾಂಡ್ಯ (71ರನ್, 55 ಎಸೆತ, 10 ಬೌಂಡರಿ) ಜೋಡಿ ಭರ್ಜರಿ ಜತೆಯಾಟದ ನೆರವಿನಿಂದ ಭಾರತ ತಂಡ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಇದರಿಂದ 3 ಪಂದ್ಯಗಳ ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿತು. ಜತೆಗೆ ಇಂಗ್ಲೆಂಡ್ ನೆಲದಲ್ಲಿ ಮೊದಲ ಬಾರಿಗೆ ಯಾವುದೇ ಸರಣಿ ಸೋಲದೆ ಅಜೇಯವಾಗಿ ತವರಿಗೆ ವಾಪಸಾಯಿತು.

blank

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಹಾರ್ದಿಕ್ ಪಾಂಡ್ಯ (24ಕ್ಕೆ 4) ಮಾರಕ ದಾಳಿಗೆ ನಲುಗಿ 45.5 ಓವರ್‌ಗಳಲ್ಲಿ 259 ರನ್‌ಗಳಿಗೆ ಸರ್ವಪತನ ಕಂಡಿತು. ರೀಸ್ ಟಾಪ್ಲೆ (35ಕ್ಕೆ 3) ಆಘಾತ ನೀಡಿದರೂ ರಿಷಭ್ – ಹಾರ್ದಿಕ್ 5ನೇ ವಿಕೆಟ್‌ಗೆ 133 ರನ್ ಜತೆಯಾಟದ ಫಲವಾಗಿ ಭಾರತ ತಂಡ, 42.1 ಓವರ್‌ಗಳಲ್ಲಿ 5 ವಿಕೆಟ್‌ಗೆ 261 ರನ್‌ಗಳಿಸಿ ಗೆಲುವು ದಾಖಲಿಸಿತು.

ಅಬ್ಬರಿಸಿದ ರಿಷಭ್ ಪಂತ್ – ಪಾಂಡ್ಯ: ರೀಸ್ ಟಾಪ್ಲೆ ಮಾರಕ ದಾಳಿಗೆ ನಲುಗಿದ ಭಾರತ ತಂಡ 38 ರನ್ ಪೇರಿಸುವಷ್ಟರಲ್ಲಿ ನಾಯಕ ರೋಹಿತ್ ಶರ್ಮ (17), ಶಿಖರ್ ಧವನ್ (1) ಹಾಗೂ ವಿರಾಟ್ ಕೊಹ್ಲಿ (17) ವಿಕೆಟ್ ಕಳೆದುಕೊಂಡಿತು. ಸೂರ್ಯಕುಮಾರ್ ಯಾದವ್ (16) ನಿರಾಸೆ ಮೂಡಿಸಿದರು. 72 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಭಾರತ ಸೋಲಿನತ್ತ ಮುಖಮಾಡಿತು. ಈ ವೇಳೆ ಜತೆಯಾದ ಪಾಂಡ್ಯ ಹಾಗೂ ರಿಷಭ್ ಪಂತ್ ಜೋಡಿ ಇಂಗ್ಲೆಂಡ್ ಬೌಲರ್‌ಗಳಿಗೆ ತಿರುಗೇಟು ನೀಡಿತು. ಜಡೇಜಾ (7) ಹಾಗೂ ಪಂತ್ ಮುರಿಯದ 6ನೇ ವಿಕೆಟ್‌ಗೆ 55 ರನ್‌ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇಂಗ್ಲೆಂಡ್: 45.5 ಓವರ್‌ಗಳಲ್ಲಿ 259 (ಜೋಸ್ ಬಟ್ಲರ್ 60, ಮೊಯಿನ್ ಅಲಿ 34, ಕ್ರೇಗ್ ಓವರ್‌ಟನ್ 32, ಹಾರ್ದಿಕ್ ಪಾಂಡ್ಯ 24ಕ್ಕೆ 4, ಯಜುವೇಂದ್ರ ಚಾಹಲ್ 60ಕ್ಕೆ 3, ಮೊಹಮದ್ ಸಿರಾಜ್ 66ಕ್ಕ 2), ಭಾರತ: 42.1 ಓವರ್‌ಗಳಲ್ಲಿ 5 ವಿಕೆಟ್‌ಗೆ 261 (ರಿಷಭ್ ಪಂತ್ 125*, ಹಾರ್ದಿಕ್ ಪಾಂಡ್ಯ 71, ರೀಸ್ ಟಾಪ್ಲೆ 35ಕ್ಕೆ 3).

ರಿಷಭ್ ಪಂತ್-ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್; ಇಂಗ್ಲೆಂಡ್ ಎದುರು ಏಕದಿನ ಸರಣಿ ಗೆದ್ದುಕೊಂಡ ಭಾರತ

Share This Article
blank

ನಿಮ್ಮ ಬೆಳಿಗ್ಗೆಯನ್ನು ಹೀಗೆ ಆರಂಭಿಸಿ.. ಈ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ..! healthy morning

healthy morning: ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಆಲೋಚನೆಗಳು ಮತ್ತು…

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

blank