More

    ನಾಯಕ ಜೋ ರೂಟ್ ದ್ವಿಶತಕದಾಟ, ಬೃಹತ್ ಮೊತ್ತ ಪೇರಿಸಿದ ಇಂಗ್ಲೆಂಡ್ ತಂಡ

    ಚೆನ್ನೈ: ನಾಯಕ ಜೋ ರೂಟ್ (218ರನ್, 377 ಎಸೆತ, 19 ಬೌಂಡರಿ, 2 ಸಿಕ್ಸರ್) ಭರ್ಜರಿ ದ್ವಿಶತಕದಾಟದ ನೆರವಿನಿಂದ ಪ್ರವಾಸಿ ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಚೆಪಾಕ್ ಅಂಗಳದ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 3 ವಿಕೆಟ್‌ಗೆ 263 ರನ್‌ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ, ರೂಟ್ ದ್ವಿಶತಕದಾಟ ಹಾಗೂ ಬೆನ್ ಸ್ಟೋಕ್ಸ್ (82ರನ್, 118 ಎಸೆತ, 10 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಲವಾಗಿ ಎರಡನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್‌ಗೆ 555 ರನ್ ಪೇರಿಸಿದೆ. ಸತತ ಎರಡನೇ ದಿನವೂ ಕ್ರೀಸ್‌ನಲ್ಲಿ ನಿಂತ ಇಂಗ್ಲೆಂಡ್ ಆಟಗಾರರು ಪಂದ್ಯದಲ್ಲಿ ಸದ್ಯದ ಮಟ್ಟಿಗೆ ಮೇಲುಗೈ ಸಾಧಿಸಿದ್ದಾರೆ.

    ಇದನ್ನೂ ಓದಿ: ಕನ್ನಡಿಗ ಜಾವಗಲ್ ಶ್ರೀನಾಥ್ ದಾಖಲೆ ಹಿಂದಿಕ್ಕಿದ ಜಸ್‌ಪ್ರೀತ್ ಬುಮ್ರಾ..!

    * ತಪ್ಪಿದ ಭಾರತೀಯರ ಬೌಲಿಂಗ್ ‘ರೂಟ್’
    128 ರನ್ ಗಳಿಸಿದ್ದ ಜೋ ರೂಟ್‌ಗೆ ದಿನದಾಟದಲ್ಲಿ ಕೂಡಿಕೊಂಡ ಬೆನ್ ಸ್ಟೋಕ್ಸ್ ಉತ್ತಮ ಸಾಥ್ ನೀಡಿದರು. ಈ ಜೋಡಿ ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಭಾರತೀಯ ಬೌಲರ್‌ಗಳಿಗೆ ಸವಾಲಾಯಿತು. ಭೋಜನ ವಿರಾಮದವರೆಗೂ ಈ ಜೋಡಿ ವಿಕೆಟ್ ಕಾಯ್ದುಕೊಂಡಿತು. ಎಂದಿನ ಶೈಲಿಯಲ್ಲಿ ಬ್ಯಾಟಿಂಗ್ ಮುಂದುವರಿಸಿದ ನಾಯಕ ರೂಟ್ ಭಾರತೀಯ ಬೌಲರ್‌ಗಳನ್ನು ಎರಡನೇ ದಿನದಾಟದಲ್ಲೂ ಬೆಂಡೆತ್ತಿದರು. ಈ ಜೋಡಿ 4ನೇ ವಿಕೆಟ್‌ಗೆ 124 ರನ್ ಕಲೆಹಾಕುವ ಮೂಲಕ ಬೃಹತ್ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಭಾರತೀಯ ಬೌಲರ್‌ಗಳಿಗೆ ತಲೆನೋವಾಗಿದ್ದ ಈ ಜೋಡಿಗೆ ಶಾಬಾದ್ ನದೀಂ ಬ್ರೇಕ್ ಹಾಕಿದರು.

    ನಾಯಕ ಜೋ ರೂಟ್ ದ್ವಿಶತಕದಾಟ, ಬೃಹತ್ ಮೊತ್ತ ಪೇರಿಸಿದ ಇಂಗ್ಲೆಂಡ್ ತಂಡಬಳಿಕ ಒಲಿ ಪೊಪ್ (34) ಜತೆಗೂಡಿದ ರೂಟ್ 6ನೇ ವಿಕೆಟ್‌ಗೆ 86 ರನ್ ಗಳಿಸಿದರು. ಜತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 5ನೇ ದ್ವಿಶತಕ ಸಿಡಿಸುವ ಮೂಲಕ ಚೆಪಾಕ್ ಅಂಗಣದಲ್ಲಿ ದಿನದ ಗೌರವ ಸಂಪಾದಿಸಿದರು. ಎರಡೂ ಓವರ್‌ಗಳ ಅಂತರದಲ್ಲಿ ರೂಟ್ ಹಾಗೂ ಪೊಪ್ ಕ್ರಮವಾಗಿ ನದೀಂ ಹಾಗೂ ಅಶ್ವಿನ್‌ಗೆ ನೀಡಿದರು. ಚಹಾ ವಿರಾಮದ ಬಳಿಕ ಭಾರತೀಯ ಬೌಲರ್‌ಗಳು ಕೊಂಚ ಮೇಲುಗೈ ಸಾಧಿಸಿದಂತೆ ಕಂಡರು. ಇಶಾಂತ್ ಶರ್ಮ, ಜೋಸ್ ಬಟ್ಲರ್ (30) ಹಾಗೂ ಜೋಫ್ರಾ ಆರ್ಚರ್‌ಗೆ (0) ಸತತ ಎರಡು ಎಸೆತಗಳಲ್ಲಿ ಪೆವಿಲಿಯನ್ ದಾರಿ ತೋರಿದರು. ಡಾಮ್ ಬೆಸ್ (28*ರನ್, 84 ಎಸೆತ, 5 ಬೌಂಡರಿ) ಹಾಗೂ ಜಾಕ್ ಲೀಚ್ (6*ರನ್, 28 ಎಸೆತ) ಎಚ್ಚರಿಕೆ ನಿರ್ವಹಣೆಯೊಂದಿಗೆ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡರು.

    ಇಂಗ್ಲೆಂಡ್: 180 ಓವರ್‌ಗಳಲ್ಲಿ 8 ವಿಕೆಟ್‌ಗೆ 555 (ಜೋ ರೂಟ್ 218, ಬೆನ್ ಸ್ಟೋಕ್ಸ್ 82, ಒಲಿ ಪೊಪ್ 34, ಜೋಸ್ ಬಟ್ಲರ್ 30, ಇಶಾಂತ್ ಶರ್ಮ 52ಕ್ಕೆ 2, ಜಸ್‌ಪ್ರೀತ್ ಬುಮ್ರಾ 81ಕ್ಕೆ 2, ಆರ್.ಅಶ್ವಿನ್ 132ಕ್ಕೆ 2, ಶಾಬಾಜ್ ನದೀಂ 167ಕ್ಕೆ 2)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts