More

    ನೂತನ ಅವಿಷ್ಕಾರ ಬಳಸಿ ಅಭಿವೃದ್ಧಿ ಸಾಧಿಸಿ

    ಇಂಡಿ: ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವರ್ಷಾ ಟೆಕ್ನಾಲಾಜಿ ಕಂಪನಿ ವತಿಯಿಂದ ಡ್ರೋಣ ಮೂಲಕ ತೊಗರಿ ಬೆಳೆಗೆ ಕೀಟನಾಶಕ ಸಿಂಪಡಣೆ ಕುರಿತು ಪ್ರಾತ್ಯಕ್ಷಿಕೆ ನಡೆಸಲಾಯಿತು.
    ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ ಮಾತನಾಡಿ, ರೈತರಿಗೆ ಯಾವುದೇ ಕಷ್ಟವಾಗಕೂಡದು ಎಂದು ಕೃಷಿ ಚಟುವಟಿಕೆಯಲ್ಲಿ ಹೊಸ ಅವಿಷ್ಕಾರಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ರೈತರು ತೊಡಗಿ ಆರ್ಥಿಕ ಭದ್ರತೆ ಹೊಂದಲಿ ಎಂಬ ಸರ್ಕಾರದ ಸದಾಶೆಯಾಗಿದೆ.
    ತೊಗರಿ ಬೆಳೆಯಲ್ಲಿ ಕೀಟ ಬಾಧೆಯಿಂದ ಮುಕ್ತಿ ಹೊಂದಲು ಔಷಧ ಸಿಂಪಡಣೆ ಮಾಡಬೇಕಾಗುತ್ತದೆ. ಆದರೆ, 5 ರಿಂದ 6 ಅಡಿಯಷ್ಟು ಎತ್ತರಕ್ಕೆ ತೊಗರಿ ಬೆಳೆಗಳು ಬೆಳೆದಾಗ ಔಷಧ ಸಿಂಪಡಿಸುವುದು ಕಷ್ಟವಾಗುತ್ತದೆ. ಅದಕ್ಕಾಗಿ ನೂತನ ತಂತ್ರಜ್ಞಾನ ಬಳಕೆ ಮಾಡಿಕೊಂಡು ರೈತರು ತೊಗರಿ ಬೆಳೆಗೆ ಔಷಧ ಸಿಂಪಡನೆ ಮಾಡಿ ಕೀಟಬಾಧೆಯಿಂದ ಮುಕ್ತಿ ಹೊಂದಬಹುದಾಗಿದೆ ಎಂದರು.
    ತಾ.ಪಂ. ಅಧ್ಯಕ್ಷ ಅಣ್ಣಾರಾಯ ಬಿದರಕೋಟಿ, ತಾ.ಪಂ. ಸದಸ್ಯ ಗಣಪತಿ ಬಾಣಿಕೋಲ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ತಾ.ಪಂ. ಸದಸ್ಯ ಜೀತಪ್ಪ ಕಲ್ಯಾಣಿ, ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ರಾಜೀವ ನೆಗಳೂರ ಸೇರಿದಂತೆ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts