More

    ಮುಸ್ಲಿಮರ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿ

    ರಾಯಚೂರು: ಕಾಂತರಾಜ್ ಆಯೋಗದ ವರದಿಯನ್ನು ಅಂಗೀಕರಿಸಬೇಕು ಮತ್ತು ಮುಸ್ಲಿಮರ 2ಬಿ ಮೀಸಲಾತಿ ಪ್ರಮಾಣವನ್ನು ಶೇ.8ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಎಸ್‌ಡಿಪಿಐನಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
    ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಎಲ್ಲ ಸಮುದಾಯಗಳಿಗೂ ಸರ್ಕಾರದ ಯೋಜನೆಗಳಲಿ ಸಮರ್ಪಕ ಪಾಲು ದೊರೆಯುವಂತಾಗಬೇಕು. ಮುಸ್ಲಿಂ ಸಮುದಾಯದ ಸ್ಥಿತಿಗತಿ ಅರಿತುಕೊಂಡು ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.
    2014ರಲ್ಲಿ ಕಾಂತರಾಜ ಆಯೋಗವನ್ನು ನೇಮಿಸಿ ಜಾತಿಗಣತಿ ನಡೆಸಲಾಗಿದ್ದು, ಆಯೋಗವು 2018ರಲ್ಲಿ ತನ್ನ ವರದಿಯನ್ನು ಸಿದ್ಧಪಡಿಸಿದೆ. ಸಿಎಂ ಸಿದ್ದರಾಮಯ್ಯ ಕಾರಣಾಂತರಗಳಿಂದ ವರದಿಯನ್ನು ಬಹಿರಂಗ ಪಡಿಸಿರಲಿಲ್ಲ. ನಂತರ ಬಂದ ಎರಡೂ ಸರ್ಕಾರಗಳೂ ಅದನ್ನು ಅಂಗೀಕರಿಸುವ ಯಾವುದೇ ಪ್ರಯತ್ನ ಮಾಡಲಿಲ್ಲ.
    ಬಿಹಾರ ಸರ್ಕಾರ ಜಾತಿಗಣತಿಯನ್ನು ಎರಡೇ ವರ್ಷಗಳಲ್ಲಿ ಪುರ್ಣಗೊಳಿಸಿ, ಅದನ್ನು ಅಂಗೀಕರಿಸಿದೆ. ಅದೇ ಮಾದರಿಯಲ್ಲಿ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿ ಯಥಾಸ್ಥಿತಿ ಯಾವುದೇ ಒತ್ತಡಗಳಿಗೆ ಮಣಿಯದೆ ಕಾಂತರಾಜ ಆಯೋಗ ವರದಿಯನ್ನು ತಕ್ಷಣವೇ ಅಂಗೀಕರಿಸಲು ಸರ್ಕಾರ ಮುಂದಾಗಬೇಕು.
    ಕೋಮುವಾದಿ ಬಿಜೆಪಿ ಸರ್ಕಾರ ಸಚಿವ ಸಂಪುಟ ಸಭೆಯ ಮೂಲಕ ಮುಸ್ಲಿಮರ ಮೇಲಿನ ದ್ವೇಷದ ಕಾರಣಕ್ಕೆ 2ಬಿ ಮೂಲಕ ಮುಸ್ಲಿಮರಿಗೆ ಒದಗಿಸಲಾಗಿದ್ದ ಮೀಸಲಾತಿಯನ್ನು ರದ್ದುಪಡಿಸಿದ್ದು, ಸಚಿವ ಸಂಪುಟ ಸಭೆ ನಡೆಸಿ ಮುಸ್ಲಿಮರಿಗೆ ನೀಡಲಾಗುತ್ತಿದ್ದ ಮೀಸಲಾತಿ ಪ್ರಮಾಣ ಶೇ 8ಕ್ಕೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
    ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ತೌಸ್ಿ ಅಹ್ಮದ್, ಪ್ರಧಾನ ಕಾರ್ಯದರ್ಶಿ ಜಿಲಾನಿ ಪಾಷಾ, ಪದಾಕಾರಿಗಳಾದ ಸೈಯದ್ ಇಸಾಕ್ ಹುಸೇನ್, ಗೌಸ್ ಮೊಹಿನುದ್ದೀನ್, ಮತೀನ್ ಅನ್ಸಾರಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts