More

    ಭಾರತದಲ್ಲಿರುವ ನಿಮ್ಮ ಆಸ್ತಿಗೆ ಮಾತ್ರ ತೆರಿಗೆ ಪಾವತಿಸಿ, ಅಲ್ಲಿನ ದುಡಿಮೆಗಲ್ಲ; ಎನ್​ಆರ್​ಐಗಳಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​

    ನವದೆಹಲಿ: ಭಾರತದಲ್ಲಿ ಗಳಿಸುವ ಆದಾಯದ ಮೇಲೆ ಮಾತ್ರ ತೆರಿಗೆ ವಿಧಿಸಲಾಗುವುದು, ಇದು ಅನಿವಾಸಿ ಭಾರತೀಯರಿಗೆ ಅನ್ವಯವಾಗುವುದಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಸ್ಪಷ್ಟಪಡಿಸಿದ್ದಾರೆ.

    ಅನಿವಾಸಿ ಭಾರತಿಯರಲ್ಲಿ ಗೊಂದಲ ಬೇಡ ಎಂದ ಅವರು, ಅನಿವಾಸಿ ಭಾರತೀಯರು ಇಲ್ಲಿ ಗಳಿಸುವ ಲಾಭಕ್ಕೆ ಮಾತ್ರ ತೆರಿಗೆ ವಿಧಿಸಲಾಗುವುದು. ಅವರು ಬೇರೆ ಕಡೆ ಪಡೆಯುವ ಆದಾಯ ನಮ್ಮದಲ್ಲ ಎಂದರು.

    ಒಂದು ವೇಳೆ ನಿಮ್ಮ ಆಸ್ತಿ ಭಾರತದಲ್ಲಿದೆ ಎಂದಾದರೆ, ನೀವು ನೆಲೆಸಿರುವ ದೇಶಕ್ಕೆ ಅದು ಸಂಬಂಧವಿಲ್ಲ. ಅಲ್ಲಿ ನೀವು ಅದಕ್ಕೆ ತೆರಿಗೆ ಪಾವತಿಸುವುದಿಲ್ಲ. ಆದರೆ ಅದಕ್ಕೆ ಇಲ್ಲಿ ನೀವು ತೆರಿಗೆ ಪಾವತಿಸಬೇಕು ಎಂದರು.

    ನೀವು ದುಬೈಯಲ್ಲಿದ್ದು ಗಳಿಸುವ ಆದಾಯಕ್ಕೆ ನಾನು ತೆರಿಗೆ ನೀಡಿ ಎನ್ನುವುದಿಲ್ಲ. ಆದರೆ ಭಾರತದಲ್ಲಿ ನೀವು ಬಾಡಿಗೆ ನೀಡಿರುವ ಆಸ್ತಿಗೆ ತೆರಿಗೆ ಪಾವತಿಸಬೇಕು. ನೀವು ಅಲ್ಲಿದ್ದೀರಾ ನಿಜ, ಆದರೆ ನಿಮ್ಮ ಆಸ್ತಿ ಮೂಲಕ ನೀವು ಇಲ್ಲಿಂದ ಆದಾಯ ಗಳಿಸಿದರೆ ಅದಕ್ಕೆ ನೀವು ತೆರಿಗೆ ಪಾವತಿಸಲೇ ಬೇಕು ಎಂದರು.

    ಯಾವುದೇ ದೇಶದಲ್ಲಿ ಆತನಿಗೆ ತೆರಿಗೆ ವಿಧಿಸಿಲ್ಲವಾದರೆ ಆತನನ್ನು, ಭಾರತೀಯ ಪ್ರಜೆ ಎಂದು, ಭಾರತದಲ್ಲಿ ವಾಸಿಸುವವನೆಂದು ಪರಿಗಣಿಸಲಾಗುವುದು ಎಂದು ಹಣಕಾಸು ಮಸೂದೆ 2020 ಪ್ರಸ್ತಾಪದಲ್ಲಿ ತಿಳಿಸಲಾಗಿದೆ.

    ಭಾರತದಲ್ಲಿ ತೆರಿಗೆ ಪಾವತಿಸುವುದನ್ನು ತಪ್ಪಿಸಲು ಕೆಲವು ಭಾರತೀಯರು ವಾಸ್ತವ್ಯ ಬದಲಾಯಿಸುತ್ತಿದ್ದಾರೆ. ಅಥವಾ ಅವರು ತೆರಿಗೆ ವ್ಯಾಪ್ತಿಗೆ ಬರುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಇಂತಹ ದುರುಪಯೋಗವನ್ನು ತಡೆಯಲು ಹಣಕಾಸು ಮಸೂದೆ ಪ್ರಸ್ತಾಪಿಸಲಾಗಿದೆ ಎಂದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts