More

    ಕದಬಹಳ್ಳಿ ಹೆಬ್ಬಳದ ಅರಸಮ್ಮ ದೇವಸ್ಥಾನದ ದಾಸೋಹ ಭವನ ಉದ್ಘಾಟನೆ

    ಮಳವಳ್ಳಿ: ತಾಲೂಕಿನ ಕಲ್ಯಾಣಿಕೊಪ್ಪಲು, ದೊಡ್ಡಬೂಹಳ್ಳಿ, ಕ್ಯಾತನಹಳ್ಳಿ ನಡುವೆ ಇರುವ ಮೂರು ಗ್ರಾಮಗಳಿಗೆ ಸೇರಿದ ಗ್ರಾಮ ದೇವತೆ ಕದಬಹಳ್ಳಿ ಹೆಬ್ಬಳದ ಅರಸಮ್ಮ ಹಾಗೂ ಬಲಿ ಅರಸಮ್ಮ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದಾಸೋಹ ಭವನವನ್ನು ದೊಡ್ಡಬೂಹಳ್ಳಿ ಹಾಗೂ ಹಂಗ್ರಾಪುರ ಮಠದ ಮಠಾಧ್ಯಕ್ಷ ಶ್ರೀ ಶಿವಪ್ಪ ಸ್ವಾಮೀಜಿ ಹಾಗೂ ಶ್ರೀ ಬಸವಲಿಂಗದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಉದ್ಘಾಟಿಸಲಾಯಿತು.


    ದೇವಸ್ಥಾನದ ಪ್ರಧಾನ ಅರ್ಚಕ ಮಾಳಗಯ್ಯ ಮಾತನಾಡಿ, ಇಲ್ಲಿನ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಸುತ್ತಲಿನ ಮೂರು ಗ್ರಾಮಸ್ಥರ ನಂಬುಗೆಯ ಆರಾಧ್ಯ ದೇವತೆಯೂ ಹೆಬ್ಬಳದ ಅರಸಮ್ಮ ದೇವಿಯಾಗಿದೆ. ಪ್ರತಿ ವರ್ಷ ಶಿವರಾತ್ರಿ ಹಬ್ಬದ ನಂತರದ ಆಸುಪಾಸಿನಲ್ಲಿ ಈ ಗ್ರಾಮಗಳಲ್ಲಿ ಹೆಬ್ಬಳದ ಅರಸಮ್ಮ ದೇವಿಯ ಎತ್ನಟ್ಟಿ ಹಬ್ಬವೆಂದು 15 ದಿನಗಳ ಕಾಲ ಶ್ರದ್ಧೆ ಭಕ್ತಿಯಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಇಲ್ಲಿನ ದೇವಸ್ಥಾನಕ್ಕೆ ಪ್ರತಿ ಮಂಗಳವಾರ ಹಾಗೂ ವಾರ್ಷಿಕ ಹಬ್ಬದ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನೆರೆಯುವ ಭಕ್ತರು ದಾಸೋಹ ವ್ಯವಸ್ಥೆ ಮಾಡಿಸುತ್ತಿದ್ದರು. ಆ ದಿನಗಳಲ್ಲಿ ಆಹಾರ ಸಿದ್ಧತೆಗೆ ತೊಡಕುಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಭಕ್ತರು ನೀಡಿದ ದೇಣಿಗೆ ಸಹಕಾರದಲ್ಲಿ ದಾಸೋಹ ಭವನ ನಿರ್ಮಾಣಗೊಂಡಿದೆ ಎಂದರು.


    ರಾಜ್ಯ ಪ್ರಶಸ್ತಿ ಪುರಸ್ಕೃತ ಶಿವಕುಮಾರಶಾಸ್ತ್ರಿ ಅವರು ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಕ್ಯಾತನಹಳ್ಳಿ ಗ್ರಾ.ಪಂ.ಅಧ್ಯಕ್ಷ ಬಿ.ಎಂ. ವಸಂತ್ ಕುಮಾರ್(ರವಿ), ಸದಸ್ಯ ಅಶೋಕ್ ಕುಮಾರ್, ಅರ್ಚಕ ಅಶ್ವತ್ಥ್‌ಗೌಡ, ಮುಖಂಡರಾದ ದೊಡ್ಡಬೂಹಳ್ಳಿ ರಾಜೇಶ್, ಮಹೇಶ್, ಪ್ರಸಾದ್ ಸೇರಿದಂತೆ ಮೂರೂ ಗ್ರಾಮಗಳ ಯಜಮಾನರು, ಯುವ ಮುಖಂಡರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts