More

    ಈ ಕುಗ್ರಾಮದ ಪ್ರತಿ ಮನೆಯ ಪ್ರತಿ ಮಹಿಳೆಯ ವಿರುದ್ಧ ಪೊಲೀಸ್​ ಕೇಸ್​, ಕಾರಣ ತೀರಾ ಕ್ಷುಲ್ಲಕ

    ಶಿಮ್ಲಾ: ಹಿಮಾಚಲ ಪ್ರದೇಶದ ಸ್ಪಿತಿ ಬಳಿಯ ಖಾಜಾ ಎಂಬ ಕುಗ್ರಾಮದ ಪ್ರತಿಯೊಂದು ಮನೆಯ ತಲಾ ಒಬ್ಬ ಮಹಿಳೆಯ ವಿರುದ್ಧ ಪೊಲೀಸ್​ ಪ್ರಕರಣ ದಾಖಲಾಗಿದೆ. ಕೋವಿಡ್​-19 ಪಿಡುಗು ಹಿನ್ನೆಲೆಯಲ್ಲಿ ಗ್ರಾಮ ಪ್ರವೇಶಿಸದಂತೆ ಸಚಿವರನ್ನು ತಡೆದು, ಕಡ್ಡಾಯ ಕ್ವಾರಂಟೈನ್​ಗೆ ಹೋಗುವಂತೆ ಆಗ್ರಹಿಸಿದ್ದು ಇದಕ್ಕೆ ಕಾರಣವಾಗಿದೆ!

    ಈ ಹಿನ್ನೆಲೆಯಲ್ಲಿ ಪೊಲೀಸರು ಗ್ರಾಮದ 200 ಮಹಿಳೆಯರ ವಿರುದ್ಧ ಭಾರತೀಯ ದಂಡಸಂಹಿತೆ 341, 143, ಮತ್ತು 188ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಕೆಲದಿನಗಳಿಂದ ಈ ಮಹಿಳೆಯರಿಗೆಲ್ಲ ನೋಟಿಸ್​ ಬರಲು ಆರಂಭಿಸಿದ ಹಿನ್ನೆಲೆಯಲ್ಲಿ ಗ್ರಾಮದ ಮಹಿಳಾ ಮಂಡಳದ ಪ್ರತಿಯೊಬ್ಬ ಸದಸ್ಯರ ಹೆಸರನ್ನು ಪೊಲೀಸರಿಗೆ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರೆಲ್ಲರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಆಗಿದ್ದು ಏನೆಂದರೆ, ದೇಶಾದ್ಯಂತ ಕೋವಿಡ್​-19 ಪಿಡುಗು ಹೆಚ್ಚಾಗುತ್ತಿರುವಂತೆ ಗ್ರಾಮದಿಂದ ಹೊರಗಿರುವವರನ್ನು ನೇರವಾಗಿ ಗ್ರಾಮದೊಳಗೆ ಬಿಟ್ಟುಕೊಳ್ಳದೆ, ಕಡ್ಡಾಯ ಕ್ವಾರಂಟೈನ್​ಗೆ ಕಳುಹಿಸಬೇಕು ಎಂದು ಸ್ಪಿತಿಯ 5 ಗೋಂಪಾಗಳು (ಸ್ಥಳೀಯ ಸಮಿತಿ) ನಿರ್ಧರಿಸಿದ್ದವು. ಸರ್ಕಾರಿ ಆದೇಶಕ್ಕಿಂತಲೂ ಸ್ಥಳೀಯವಾಗಿ ಹೆಚ್ಚಿನ ಮಹತ್ವವನ್ನು ಗೋಂಪಾಗಳ ನಿರ್ಧಾರ ಹೊಂದಿರುವ ಕಾರಣ ಗ್ರಾಮದ ಮಹಿಳೆಯರು, ಯುವಕರು, ವ್ಯಾಪಾರಸ್ಥರು ಸೇರಿ ವಿವಿಧ ಮಂಡಳಿಗಳನ್ನು ರಚಿಸಿಕೊಂಡು ಗ್ರಾಮದ ಹೆಬ್ಬಾಗಿಲುಗಳಲ್ಲಿ ಕಾವಲು ಕಾಯಲು ನಿರ್ಧರಿಸಿದ್ದರು.

    ಅದರಂತೆ ಯಾರೇ ಆದರೂ ಗ್ರಾಮದೊಳಗೆ ಪ್ರವೇಶಿಸಲು ಅಥವಾ ಗ್ರಾಮಕ್ಕೆ ಮರಳಲು ಬಯಸಿದರೆ ಅವರನ್ನು 14 ದಿನಗಳ ಕಡ್ಡಾಯ ಕ್ವಾರಂಟೈನ್​ಗೆ ಒಳಪಡಿಸುವ ಜವಾಬ್ದಾರಿಯನ್ನು ಈ ಮಂಡಳಿಗಳು ವಹಿಸಿಕೊಂಡಿದ್ದವು.

    ಇದನ್ನೂ ಓದಿ: ದೆಹಲಿ ಬಂಗಲೆ ಖಾಲಿ ಮಾಡಿ ಲಖನೌನತ್ತ ಮುಖ ಮಾಡಿದ ಪ್ರಿಯಾಂಕಾ?

    ಹಿಮಾಚಲ ಪ್ರದೇಶ ಕೃಷಿ ಸಚಿವರೂ ಆಗಿರುವ ಲಾಹುಲ್​-ಸ್ಪಿತಿ ವಿಧಾನಸಭಾ ಕ್ಷೇತ್ರದ ಶಾಸಕ ರಾಮ್​ಲಾಲ್​ ಮಾರ್ಕಂಡ್​ ಜೂ.9ರಂದು ಖಾಜಾ ಗ್ರಾಮದ ಭೇಟಿಗೆ ಬಂದಿದ್ದರು. ಊರ ಹೆಬ್ಬಾಗಿಲಲ್ಲೇ ಅವರನ್ನು ತಡೆದಿದ್ದ ಮಹಿಳಾ ಮಂಡಳಿಯ 200 ಸದಸ್ಯರು ಕಡ್ಡಾಯ ಕ್ವಾರಂಟೈನ್​ಗೆ ಒಳಪಟ್ಟು ಗ್ರಾಮದೊಳಗೆ ಪ್ರವೇಶಿಸುವಂತೆ ತಾಕೀತು ಮಾಡಿದ್ದರು. ತಾವು ಸಚಿವರು ಎಂದು ಹೇಳಿದರೂ ಕೇಳದ ಮಹಿಳಾ ಮಂಡಳಿ ಸದಸ್ಯರು ಗ್ರಾಮ ಪ್ರವೇಶಿಸದಂತೆ ಅವರನ್ನು ತಡೆದಿದ್ದರು. ಇದರಿಂದ ಬೇಸರಗೊಂಡ ಸಚಿವರು ಅಂದು ಗ್ರಾಮಕ್ಕೆ ಭೇಟಿ ನೀಡದೆ ಹಾಗೆಯೇ ಮರಳಿದ್ದರು.

    ಆದರೆ, ಗ್ರಾಮ ಪ್ರವೇಶಿಸದಂತೆ ಸಚಿವರನ್ನು ತಡೆದ ಆರೋಪದ ಹಿನ್ನೆಲೆಯಲ್ಲಿ ಮಹಿಳಾ ಮಂಡಳಿಯ ಸದಸ್ಯರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ಆರಂಭಿಸಿದ ಪೊಲೀಸರು, ಜೂ.10ರಿಂದ ನೋಟಿಸ್​ಗಳನ್ನು ರವಾನಿಸಲು ಆರಂಭಿಸಿದರು.

    ಇದರಿಂದ ಸಿಟ್ಟಾದ ಮಹಿಳಾ ಮಂಡಳಿಯ ಅಧ್ಯಕ್ಷೆ ಸೋನಂ ಡೋಲ್ಮಾ, ತಮ್ಮ ಮಂಡಳಿಯ ಸದಸ್ಯರೆಲ್ಲರ ಹೆಸರನ್ನು ಪೊಲೀಸರಿಗೆ ಕೊಟ್ಟು, ಅವರೆಲ್ಲರ ವಿರುದ್ಧವೂ ಪ್ರಕರಣ ದಾಖಲಿಸುವಂತೆ ಸವಾಲು ಹಾಕಿದರು. ಅದರಂತೆ ಪೊಲೀಸರು ಅವರೆಲ್ಲರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲು ಆರಂಭಿಸಿದ್ದಾರೆ. ಇದರ ಲೆಕ್ಕದಲ್ಲಿ ಗ್ರಾಮದಲ್ಲಿರುವ 1,700 ಮನೆಯಗಳ ತಲಾ ಒಬ್ಬ ಮಹಿಳೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎನ್ನಲಾಗಿದೆ.

    ಪೊಲೀಸರ ಡಬಲ್ ಸ್ಟ್ಯಾಂಡರ್ಡ್: ಹಿಂದುಗಳಿಗೊಂದು ನ್ಯಾಯ, ಮುಸ್ಲಿಮರಿಗೊಂದು ನ್ಯಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts