More

    ಅಶುದ್ಧ ನೀರು ಸರಬರಾಜು

    ಸಿದ್ದಾಪುರ: ಸಿದ್ದಾಪುರ ಗ್ರಾ.ಪಂ. ಗ್ರಾಮಸ್ಥರಿಗೆ ಕಲುಷಿತ ನೀರು ಪೂರೈಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಟ್ಯಾಂಕರ್‌ಗೆ ಕುಡಿಯಲು ಯೋಗ್ಯವಲ್ಲದ ಕಾಲುವೆ ನೀರು ತುಂಬಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
    ಶುದ್ಧ ಕುಡಿಯುವ ನೀರಿನ ಬದಲಾಗಿ ಕೃಷಿಗಾಗಿ ಬಳಸಲ್ಪಡುವ ವಾರಾಹಿ ಕಾಲುವೆಯ ಅಶುದ್ಧ ನೀರು ಪೂರೈಸಲಾಗುತ್ತಿದೆ ಎಂಬುದು ಜನರ ಆರೋಪ. ಕಾಲುವೆ ನೀರನ್ನು ಟ್ಯಾಂಕರ್‌ಗೆ ತುಂಬಿಸುವ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಶುಕ್ರವಾರ ಹರಿಯಬಿಟ್ಟಿದ್ದಾರೆ.

    ಮನೆ ಮನೆಗಳಿಗೆ ಒದಗಿಸುವ ಟ್ಯಾಂಕರ್ ಶುದ್ಧ ಕುಡಿಯುವ ನೀರಿನ ಯೋಜನೆಯ ಟೆಂಡರ್ ಪಡೆದ ವ್ಯಕ್ತಿಯೊಬ್ಬರಿಂದ ಗ್ರಾ.ಪಂ. ಸದಸ್ಯರೊಬ್ಬರು ನೀರು ಪೂರೈಕೆ ನಿರ್ವಹಿಸುತ್ತಿದ್ದಾರೆ. ಆದರೆ ಟೆಂಡರ್ ಪಡೆದ ಗುತ್ತಿಗೆದಾರರು ಯೋಗ್ಯವಲ್ಲದ ನೀರು ತುಂಬಿಸಿ ವಿತರಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಗುತ್ತಿಗೆದಾರರು ಟ್ಯಾಂಕರ್‌ಗೆ ಕಲುಷಿತ ವಾರಾಹಿ ಕಾಲುವೆಯ ನೀರು ತುಂಬಿಸಿ ಕೊಡುತ್ತಿರುವ ಬಗ್ಗೆ ದೂರು ಬಂದಿದೆ. ಈ ಬಗ್ಗೆ ಗ್ರಾಪಂ ಸೂಚನೆಯಂತೆ ವಾರಾಹಿ ಕಾಲುವೆ ನೀರು ಪೂರೈಸುವುದನ್ನು ನಿಲ್ಲಿಸಿದ್ದಾರೆ. ಗ್ರಾಮಸ್ಥರಿಗೆ ನೀರು ಸರಬರಾಜು ಮಾಡಿದ ಮೇಲೆ ಬೇರೆ ಕಾಮಗಾರಿಗೆ ಗುತ್ತಿಗೆದಾರರು ಅದೇ ಟ್ಯಾಂಕರ್‌ನಿಂದ ನೀರು ಕೊಡುತ್ತಾರೆ. ಹೀಗೆ ಬೇರೆ ಕಾಮಗಾರಿಗೆ ವಾರಾಹಿ ಕಾಲುವೆಯ ನೀರನ್ನು ಟ್ಯಾಂಕರ್‌ಗೆ ತುಂಬಿಸುವಾಗ ಸ್ಥಳೀಯರು ಫೋಟೊ ಹಾಗೂ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
    ರವೀಂದ್ರ ರಾವ್ ಪ್ರಭಾರ ಅಭಿವೃದ್ಧಿ ಅಧಿಕಾರಿ ಸಿದ್ದಾಪುರ ಗ್ರಾ.ಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts