More

    ಶುಕ್ರವಾರ ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ : 11 ಸ್ಥಳಗಳಲ್ಲಿ ಪರಿಶೀಲನೆ ನಡೆಸಲಿರುವ ಸಮಿತಿ

    ಗದಗ:
    ಬರಗಾಲ ಹಿನ್ನೆಲೆ ಜಿಲ್ಲೆಯ ವಸ್ತುಸ್ಥಿತಿ ಅರಿಯಲು ಜಿಲ್ಲೆಗೆ ಶುಕ್ರವಾರ ಕೇಂದ್ರ ಅಧ್ಯಯನ ತಂಡ ಆಗಮಿಸಲಿದೆ. ಲಕ್ಷ್ಮೇಶ್ವರ, ಶಿರಹಟ್ಟಿ ಮತ್ತು ಗದಗ ತಾಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ.
    ಬೆಳಗ್ಗೆ 9.40ಕ್ಕೆ ಲಕ್ಷೇಶ್ವರ ತಾಲೂಕಿನ ಗೋಜನೂರಿಗೆ ಭೇಟಿ ನೀಡಿ ಮಕ್ಕೆಜೋಳ, ಹತ್ತಿ ಮತ್ತು ಶೇಂಗಾ ಬೆಳೆಗಳನ್ನು ಪರಿಶೀಲಿಸಲಿದೆ. ಅದೇ ರೀತಿ ಬೆಳಗ್ಗೆ 10 ಗಂಟೆಗೆ ಇಟ್ಟಿಗೇರಿ ಕೆರೆ, ಬರಗಾಲ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಭೇಟಿ ನೀಡಲಿದೆ. 10.30ಕ್ಕೆ ದೊಡ್ಡೂರು ಗ್ರಾಮ, 10.55ಕ್ಕೆ ಸೂರಣಗಿ, 11.15ಕ್ಕೆ ಶಿರಹಟ್ಟಿಯ ಚಿಕ್ಕಸವನೂರು ಹಾಗೂ 11.30ಕ್ಕೆ ಬೆಳ್ಳಟ್ಟಿ ಭೇಟಿ ನೀಡಿ ಮೆಣಸಿನಕಾಯಿ, ಉಳ್ಳಾಗಡ್ಡಿ, ಮೆಕ್ಕೆಜೋಳ ಬೆಳೆ ಕುರಿತು ರೈತರಿಂದ ವರದಿ ಪಡೆಯಲಿದೆ. 12 ಗಂಟೆಗೆ ದೇವಿಹಾಳ ಗ್ರಾಮ, 12.15ಕ್ಕೆ ಚಬ್ಬಿ ಗ್ರಾಮಕ್ಕೆ ಭೇಟಿ ನೀಡಿ ಮೆಕ್ಕೆಜೋಳ ನಾಶ ಕುರಿತು ಹಾಗೂ 12.25ಕ್ಕೆ ಶೆಟ್ಟಿಕೇರಿ ಕ್ರಾಸ್​ ಬಳಿ ಮೆಕ್ಕೆಜೋಳ, ಶೇಂಗಾ ಬೆಳೆ ಕುರಿತು ಸ್ಥಳಿಯರಿಂದ ಮಾಹಿತಿ ಪಡೆಯಲಿದೆ. ತದನಂತರ ಗದಗ ತಾಲೂಕಿನ ಮುಳಗುಂದಕ್ಕೆ ಭೇಟಿ ನೀಡಲಿರುವ ಕೇಂದ್ರ ಅಧ್ಯಯನ ತಂಡವು ಮೆಕ್ಕೆಜೋಳ, ಶೇಂಗಾ ಬೆಳೆ ಪರಿಶೀಲನೆ ನಡೆಸಿ 1.30ಕ್ಕೆ ಕೊಪ್ಪಳ ಪ್ರಯಾಣ ಬೆಳಸಲಿದೆ. ಜಿಲ್ಲೆಯ 11 ಸ್ಥಳಗಳಲ್ಲಿ ಬರಗಾಲ ಕುರಿತು ಅಧ್ಯಯನ ನಡೆಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts