More

    ರಸ್ತೆ ದಾಟಲು ಶಾಲಾ ಮಕ್ಕಳ ಹರಸಾಹಸ

    ಐಮಂಗಲ: ಸಂಚಾರ ದಟ್ಟಣೆ, ಶಾಲೆ ಮುಂಭಾಗದ ಹಂಪ್ಸ್ ತೆರವು, ವಾಹನಗಳ ಅಡ್ಡಾದಿಡ್ಡಿ ನಿಲುಗಡೆ ಇದು ಐಮಂಗಲ- ಹೊರಕೇರಿದೇವರಪುರ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿ.

    ನಾಡಕಚೇರಿ, ಪಶುಚಿಕಿತ್ಸಾಲಯ, ಸರ್ಕಾರಿ ಪ್ರಾಥಮಿಕ ಶಾಲೆ ಇರುವ ರಾಷ್ಟ್ರೀಯ ಹೆದ್ದಾರಿ 48ರ ಈ ಸೇವಾ ರಸ್ತೆ ಸದಾ ಜನಜಂಗುಳಿಯಿಂದ ಕೂಡಿದ್ದರೂ ಅಧಿಕಾರಿಗಳ ನಿರ್ಲಕ್ಷೃಕ್ಕೆ ಗುರಿಯಾಗಿದೆ.

    ಶಾಲೆಗೆ ಬಂದು ಹೋಗುವ ಮಕ್ಕಳು, ಸರ್ಕಾರಿ ಕಚೇರಿಗೆ ಬರುವ ಸಾರ್ವಜನಿಕರು ಈ ಸಂಚಾರ ದಟ್ಟಣೆಯ ರಸ್ತೆ ದಾಟಲು ಹರಸಾಹಸ ಪಡಬೇಕಾಗಿದೆ.

    ವಾಹನಗಳ ವೇಗ ನಿಯಂತ್ರಣಕ್ಕೆ ಹಂಪ್ಸ್ ಇಲ್ಲದೆ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ರಸ್ತೆಯುದ್ದಕ್ಕೂ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದರಿಂದ ಸುಗಮ ಸಂಚಾರ ಕನಸಿನ ಮಾತಾಗಿದೆ.

    ಹೆಚ್ಚಿನ ವಾಹನಗಳಿಂದ ಉಂಟಾಗುವ ಧೂಳು, ಶಬ್ದದಿಂದ ಮಕ್ಕಳು ಪಾಠ ಕೇಳಲು, ಮಧ್ಯಾಹ್ನದ ಬಿಸಿಯೂಟ ಸೇವಿಸಲು ತೊಂದರೆ ಆಗಿದೆ.

    ಹಂಪ್ಸ್ ಅಳವಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಗ್ರಾಮಸ್ಥರಾದ ಬಿ.ಈ. ಆನಂದಪ್ಪ, ಡಿ. ಮೂರ್ತಿ ಇತರರು ದೂರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts