More

    ಇಳಕಲ್ಲದಲ್ಲಿ ಲಸಿಕೆಗಾಗಿ ಮುಗಿಬಿದ್ದ ಜನ

    ಇಳಕಲ್ಲ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ) ಲಸಿಕೆ ಕೇಂದ್ರದಲ್ಲಿ ಉಂಟಾಗುತ್ತಿರುವ ಜನಜಂಗುಳಿ ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

    ನಿತ್ಯ 200 ಜನರಲ್ಲಿ ಮೊದಲು 50 ಕರೊನಾ ಯೋಧರು ಸೇರಿ ಸರ್ಕಾರಿ ನೌಕರರಿಗೆ, ನಂತರ ಸಾರ್ವಜನಿಕರಿಗೆ ಲಸಿಕೆ ಹಾಕಲಾಗುತ್ತದೆ. ಆದರೆ, ಲಸಿಕೆ ಹಾಕಿಸಿಕೊಳ್ಳಲು ನಿತ್ಯ ಏಳೆಂಟು ನೂರು ಜನರು ಸೇರುತ್ತಿದ್ದಾರೆ. ಅದು ಬೆಳಗ್ಗೆಯಿಂದಲೇ ಸರತಿಯಲ್ಲಿ ಜಮಾಯಿಸುತ್ತಿರುವುದರಿಂದ ಅವರನ್ನು ನಿಯಂತ್ರಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಪರದಾಡುವಂತಾಗಿದೆ.

    ಅಧಿಕಾರಿಗಳು ಲಸಿಕೆ ಲಭ್ಯತೆ ಅನುಸಾರವಾಗಿ ಚೀಟಿ ನೀಡಿ ಉಳಿದವರನ್ನು ಮರುದಿನ ಬರುವಂತೆ ಸೂಚನೆ ನೀಡಿದರೂ ಜನರು ಮಾತ್ರ ಮನೆಗೆ ಹೋಗದೆ ಅಲ್ಲೇ ನಿಲ್ಲುತ್ತಿದ್ದಾರೆ. ಕೆಲವರು ಗುಂಪು ಗುಂಪಾಗಿ ನಿಲ್ಲುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರನ್ನು ನಿಯಂತ್ರಿಸುವುದೇ ಅಧಿಕಾರಿಗಳಿಗೆ ದೊಡ್ಡ ಸವಾಲು ಆಗಿದೆ.
    ಲಸಿಕೆ ಕೇಂದ್ರಕ್ಕೆ ಪಿಎಸ್‌ಐ ಎಸ್.ಬಿ. ಪಾಟೀಲ ಭೇಟಿ ನೀಡಿ, ಸಾರ್ವಜನಿಕರನ್ನು ಚದುರಿಸಿದರು. ವಾಹನದ ಧ್ವನಿವಧರ್ಕದ ಮೂಲಕ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಚೀಟಿ ನೀಡಿದವರು ಮಾತ್ರ ಸರತಿಯಲ್ಲಿ ನಿಲ್ಲಬೇಕು. ಉಳಿದವರು ಮನೆಗೆ ಹೋಗಬೇಕೆಂದು ಮನವಿ ಮಾಡಿದರು.

    ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಶಿರಸ್ತೇದಾರ್ ಈಶ್ವರ ಗಡ್ಡಿ ಸೇರಿ ಅಧಿಕಾರಿಗಳು ಲಸಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರಸಭೆ ವ್ಯವಸ್ಥಾಪಕ ನಬಿಸಾಬ ಕಂದಗಲ್ಲ, ನಗರಸಭೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts