More

    ದುಡ್ಡು ಕೊಟ್ಟರೆ ಹೊಟ್ಟೆ ತುಂಬಲ್ಲ ಅಕ್ಕಿ ಕೊಟ್ಟ್ಟರಷ್ಟೇ ಜನರಿಗೆ ಅನುಕೂಲ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ

    ಭದ್ರಾವತಿ: ಕೇಂದ್ರ ಸರ್ಕಾರ ಜನರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದೀಗ ಕೇವಲ 29 ರೂ.ಗೆ ಒಂದು ಕೆ.ಜಿ. ಅಕ್ಕಿ ನೀಡುತ್ತಿದೆ. ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ. ಈಗಾಗಲೇ ಪಡಿತರ ಅಂಗಡಿಗಳಲ್ಲಿ ಕೊಡುತ್ತಿರುವ 5 ಕೆ.ಜಿ. ಅಕ್ಕಿಯೂ ಕೇಂದ್ರ ಸರ್ಕಾರದ ನರೇಂದ್ರಮೋದಿಯವರ ಕೊಡುಗೆಯಾಗಿದೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಎಂದು ಹೇಳಿದರು.

    ಶನಿವಾರ ಹಳೇ ನಗರದ ಕನಕ ಮಂಟಪ ಮೈದಾನದಲ್ಲಿ ತಾಲೂಕು ಬಿಜೆಪಿ ಘಟಕದಿಂದ ಆಯೋಜಿಸಲಾಗಿದ್ದ ಭಾರತ ಅಕ್ಕಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಕ್ಕಿಯ ಬದಲಾಗಿ ದುಡ್ಡು ಕೊಡುತ್ತಿದೆ. ದುಡ್ಡು ಕೊಟ್ಟರೆ ಹೊಟ್ಟೆ ತುಂಬುವುದಿಲ್ಲ ಬದಲಾಗಿ ಅಕ್ಕಿ ಕೊಟ್ಟರೆ ಜನರಿಗೆ ಅನುಕೂಲವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 29 ರೂ.ಗೆ ಅಕ್ಕಿ ವಿತರಣೆ ಮಾಡುತ್ತಿದ್ದಾರೆ. ಇದೇ ಅಕ್ಕಿಗೆ ಅಂಗಡಿಗೆ ಕೆ.ಜಿ.ಗೆ 50 ರೂ. ಕೊಡಬೇಕಾಗುತ್ತದೆ. ಅಂತಹ ಅಕ್ಕಿಯನ್ನು ಕಡಿಮೆ ದರದಲ್ಲಿ ವಿತರಣೆ ಮಾಡುತ್ತಿರುವ ಪ್ರಧಾನಿ ಅವರ ಯೋಜನೆ, ಯೋಚನೆ ಅದ್ಭುತವಾಗಿದೆ ಎಂದರು.
    ರೈತರ ಮಗನಾದ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲ ಕೊಟ್ಟಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಇನ್ನು ಮುಂದೆ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜತೆಗೂಡಿ ಮತ್ತಷ್ಟು ಅಭಿವೃದ್ಧಿಯ ತೇರನ್ನು ಎಳೆಯುವ ಕೆಲಸ ಮಾಡುತ್ತೇವೆ. ಕ್ಷೇತ್ರದ ಜನತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
    ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿ ಮಾತನಾಡಿ, ಬರಗಾಲದ ಪರಿಸ್ಥಿತಿಯಲ್ಲಿ ಜನರ ಸಂಕಷ್ಟಗಳನ್ನು ಅರಿತು ಕೇವಲ 29 ರೂ.ಗಳಿಗೆ ಒಂದು ಕೆ.ಜಿ.ಅಕ್ಕಿ ಕೊಡುವ ಮೂಲಕ ಕಡಿಮೆ ಖರ್ಚಿನಲ್ಲಿ ಜನರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿರುವ ಪ್ರಧಾನಿ ಅವರ ಕಾರ್ಯವೈಖರಿಗೆ ಜೆಡಿಎಸ್ ಪಕ್ಷ ಅಭಿನಂದನೆ ವ್ಯಕ್ತಪಡಿಸುತ್ತದೆ ಎಂದರು.
    ಬಿಜೆಪಿ ಮಂಡಲದ ಅಧ್ಯಕ್ಷ ಜಿ.ಧರ್ಮಪ್ರಸಾದ್, ಪ್ರಮುಖರಾದ ಮಂಗೋಟೆ ರುದ್ರೇಶ್, ತೀರ್ಥಯ್ಯ, ಕೂಡ್ಲಿಗೆರೆ ಹಾಲೇಶ್, ಮಂಜುನಾಥ್ ಕದಿರೇಶ್, ಬಿ.ಎಸ್.ನಾರಾಯಣಪ್ಪ, ಚನ್ನೇಶ್, ಕರುಣಾಮೂರ್ತಿ, ರಾಮಕೃಷ್ಣ, ಉಮೇಶ್, ಆನಂದ್, ರಾಮಲಿಂಗಯ್ಯ ಇತರರಿದ್ದರು.
    ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ನಾಗರಿಕರು ಸರದಿ ಸಾಲಿನಲ್ಲಿ ನಿಂತು ತಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಂಬರ್ ತಿಳಿಸಿ, ರಿಯಾಯಿತಿ ದರದಲ್ಲಿ 290 ರೂ. ಪಾವತಿಸಿ 10 ಕೆ.ಜಿ. ತೂಕದ ಅಕ್ಕಿಯ ಚೀಲ ಪಡೆದು ಸಂತಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts