More

    ಹಿಂದು ಸಮಾಜ ಜಾಗೃತವಾದರೆ ಈ ಸರ್ಕಾರ ಉಳಿಯಲ್ಲ

    ಶಿವಮೊಗ್ಗ: ಏನು ಮಾಡಿದರೂ ಸರ್ಕಾರದ ರಕ್ಷಣೆ ನಮಗಿದೆ ಎಂಬ ಧೈರ್ಯ ಕೆಲವರಿಗಿದೆ. ಇದರ ಪರಿಣಾಮವೇ ಹುಬ್ಬಳ್ಳಿಯ ನೇಹಾ ಹತ್ಯೆ. ಹಿಂದು ಸಮಾಜ ಜಾಗೃತವಾದರೆ ಈ ಸರ್ಕಾರ ಉಳಿಯುವುದಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಎಚ್ಚರಿಸಿದರು.

    ರಾಜ್ಯದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲವಾಗಿದೆ. ಹುಬ್ಬಳ್ಳಿ ಯುವತಿ ಹತ್ಯೆ ವಿಷಯದಲ್ಲಿ ಸರ್ಕಾರ ನಿರ್ಲಕ್ಷೃದ ಉತ್ತರ ನೀಡಿದೆ. ಕಾಲೇಜು ಆವರಣದಲ್ಲಿ ಬರ್ಬರ ಹತ್ಯೆ ಮಾಡಿರುವ ಯುವಕನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
    ದುರ್ಘಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಿಂದು ವಿರೋಧಿ ಎಂಬಂತೆ ವರ್ತಿಸುತ್ತಿದೆ. ಹಿಂದುಗಳ ಪರವಾಗಿ ನಿಂತು ಅವರಿಗೆ ಧೈರ್ಯ ತುಂಬುವ ಕೆಲಸವಾಗಬೇಕು. ಹಿಂದು ಸಮಾಜದವರು ಹರಿಸುವ ಒಂದು ಹನಿ ರಕ್ತವೂ ನಿಮ್ಮ ಅಧಿಕಾರವನ್ನೇ ಕಿತ್ತುಕೊಳ್ಳಬಹುದು ಎಂದು ಕಾಂಗ್ರೆಸ್ ನಾಯಕರನ್ನು ಎಚ್ಚರಿಸಿದರು.
    ನೇಹಾ ಹತ್ಯೆಯ ವಿಷಯದಲ್ಲಿ ನಾನು ರಾಜಕಾರಣ ಮಾಡಲ್ಲ. ಕಾಂಗ್ರೆಸ್‌ನವರು ರಾಜಕೀಯ ಮಾಡುತ್ತಿದ್ದಾರೆ. ಗೃಹ ಸಚಿವ ಜಿ.ಪರಮೇಶ್ವರ್ ತನಿಖೆಗೂ ಮುನ್ನವೇ ಲವ್ ಜಿಹಾದ್ ಅಲ್ಲ ಎಂದು ಹೇಳಿದರು. ಮತ್ತೋರ್ವ ಸಚಿವ ಎಂ.ಬಿ.ಪಾಟೀಲ್ ಪ್ರಕರಣಕ್ಕೆ ಧರ್ಮದ ಬಣ್ಣ ಹಚ್ಚಬೇಡಿ ಎಂದರು. ಇವರ ಮನೆ ಮಗಳಿಗೆ ಯಾರಾದರೂ ಚಾಕು ಹಾಕಿದ್ದರೆ ಸುಮ್ಮನಿರುತ್ತಿದ್ದರೇ? ಎಂದು ಪ್ರಶ್ನಿಸಿದರು. ಕೊಲೆಗಾರನನ್ನು ಬಂಧಿಸಿದರೆ ಸಾಲದು. ಕೊಲೆಗಳೇ ನಡೆಯದಂತೆ ನೋಡಿಕೊಳ್ಳಿ ಎಂಬುದು ಸರ್ಕಾರಕ್ಕೆ ನನ್ನ ಆಗ್ರಹವಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts