More

    ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಸಸಿಗಳನ್ನು ಬೆಳೆಸಿ ಪೋಷಿಸಿ

    ತುಮಕೂರು: ನಗರದ 31ನೇ ವಾರ್ಡ್‌ನಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ‘ಸ್ವಾತಂತ್ರ್ಯ ಉದ್ಯಾನವನ’ಕ್ಕೆ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಭಾನುವಾರ ಚಾಲನೆ ನೀಡಿದರು. ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಗಿಡಮರಗಳನ್ನು ಬೆಳೆಸಿ ಪೋಷಿಸಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಸಲಹೆ ನೀಡಿದರು.

    ಸ್ವಾತಂತ್ರ್ಯ ಹೋರಾಟಗಾರರ ಹೆಸರಲ್ಲಿ ಬೆಳೆಸಿದ ಮರಗಳನ್ನು ಪೋಷಿಸಲು ದತ್ತು ನೀಡಬೇಕು, ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿಯನ್ನು ಮಕ್ಕಳಿಗೆ ತಿಳಿಸಲು ಮಾಹಿತಿ ಫಲಕ ಅಳವಡಿಸಬೇಕು. ಮರಗಳ ಬಳಿ ಮಕ್ಕಳು ಬಂದಾಗ ಆ ಮರದ ಮೂಲಕ ಸ್ವಾತಂತ್ರ್ಯೋತ್ಸವದ ಬಗ್ಗೆ ಜ್ಞಾನ ಮೂಡಿಸುವಂತಿರಬೇಕು ಎಂದರು.

    ನಗರ ಬೆಳೆಯುವುದರ ಜತೆಗೆ ಆಮ್ಲಜನಕಕ್ಕೆ ಪೂರಕವಾದ ಮರಗಳನ್ನು ಹೆಚ್ಚಾಗಿ ಬೆಳೆಸಬೇಕು, ನಗರೀಕರಣ ವ್ಯವಸ್ಥೆಯಡಿ ಕಾಂಕ್ರೀಟ್ ಕಾಡು ನಿಮಾಣವಾಗದಂತೆ ಹಸಿರು ಬೆಳೆಸಬೇಕು ಎಂದು ಸಲಹೆ ನೀಡಿದರು.

    ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ನಗರ ಪ್ರದೇಶ ಬೆಳೆದಂತೆ ಸಾರ್ವಜನಿಕರ ಮೂಲ ಸೌಕರ್ಯಗಳು ಹೆಚ್ಚಬೇಕು. ಒಂದೂವರೆ ಎಕರೆಯಲ್ಲಿ ನಿರ್ಮಿಸಲಾಗುತ್ತಿರುವ ಉದ್ಯಾನವನದಲ್ಲಿ ಗಿಡ ಮರಗಳನ್ನು ಹೆಚ್ಚು ಬೆಳೆಸುವ ಕಾರ್ಯವಾಗಬೇಕು. ನಗರದಲ್ಲಿ 800ಕ್ಕೂ ಹೆಚ್ಚು ಉದ್ಯಾನವನಗಳಿದ್ದು 555 ಉದ್ಯಾನವನ ಗುರುತಿಸಲಾಗಿದೆ ಎಂದರು.

    ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಪಾರ್ಕ್‌ಗಳನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಿದ್ದು, ಪ್ರಾಧಿಕಾರ ಕೂಡ ಕೆಲವು ಪಾರ್ಕ್‌ಗಳ ನಿರ್ವಾಣ ಸ್ಥಳವನ್ನು ಗುರ್ತಿಸಿ ಪಾಲಿಕೆಗೆ ಹಸ್ತಾಂತರಿಸಿದೆ. ಈ ಪಾರ್ಕ್‌ಗಳನ್ನು ಆಧುನಿಕರಣಗೊಳಿಸಿ ಆಸ್ತಿ ರಕ್ಷಣೆಗೆ ಮುಂದಾಗಬೇಕು ಎಂದರು.

    ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಮೇಯರ್ ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯ ಚಿದಾನಂದಗೌಡ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts