More

    ಐಎಎಸ್​ ಅಧಿಕಾರಣಿ ಪತ್ನಿಯ ಕೊಲ್ಲಲು ಯತ್ನಿಸಿ ಜೈಲು ಸೇರಿದ ಕಾರ್ಮಿಕ ಇಲಾಖೆ ಆಯುಕ್ತ

    ಮುಜಫರ್​ನಗರ: ಉತ್ತರ ಪ್ರದೇಶದ ಮುಜಫರ್​ನಗರದಲ್ಲಿರುವ ತನ್ನ ತವರುಮನೆಯ ಬಾಗಿಲು ಮುರಿದು ಒಳನುಗ್ಗಿದ ಪತಿ ತನ್ನ ಪಾಲಕರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ತನ್ನನ್ನು ಕೊಲ್ಲಲು ಯತ್ನಿಸಿದ್ದಾಗಿ ಐಎಎಸ್​ ಅಧಿಕಾರಿಣಿಯೊಬ್ಬರು ದೂರು ದಾಖಲಿಸಿದ್ದಾರೆ.

    2013ರ ತಂಡದ ಐಎಎಸ್​ ಅಧಿಕಾರಿಣಿ ಶೈಲಜಾ ಶರ್ಮ ದೂರು ದಾಖಲಿಸಿದವರು. ಸದ್ಯ ಅವರು ಬಿಹಾರದ ರಸ್ತೆ ನಿರ್ಮಾಣ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಮುಂಬೈನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಇವರಿಗೆ ಇ-ಕಾಮರ್ಸ್​ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರ ಪತಿ ರಾಜೀವ್​ ನಯನ್​ ಹರಿಯಾಣದ ಗುರುಗ್ರಾಮದಲ್ಲಿ ಕಾರ್ಮಿಕ ಇಲಾಖೆಯಲ್ಲಿ ಪ್ರಾದೇಶಿಕ ಆಯುಕ್ತರಾಗಿದ್ದು, ಸದ್ಯ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ.

    ನಾನು ಮುಜಫರ್​ನಗರದಲ್ಲಿರುವ ನನ್ನ ತವರು ಮನೆಗೆ ಜು.31ರಂದು ಬಂದಿದ್ದೆ. ವಿಷಯ ತಿಳಿದು ಮರುದಿನ ಅಲ್ಲಿಗೆ ಬಂದ ನನ್ನ ಪತಿ ರಾಜೀವ್​ ನಯನ್​, ಮನೆಯ ಮುಖ್ಯದ್ವಾರ ಮುರಿದು ಬಲವಂತವಾಗಿ ಒಳನುಗ್ಗಿದ್ದಲ್ಲದೆ, ತಡೆಯಲು ಬಂದ ನನ್ನ ಪಾಲಕರು ಮತ್ತು ಕುಟುಂಬಸ್ಥರನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಹಲ್ಲೆ ಮಾಡಲು ಯತ್ನಿಸಿದರು. ಇದನ್ನು ನಿಲ್ಲಿಸಿ, ಶಾಂತವಾಗಿ ಕುಳಿತು ಮಾತನಾಡುವಂತೆ ನನ್ನ ತಂದೆ ಹೇಳಿದಾಗ, ಅವರ ಮಾತನ್ನು ಕೇಳದೆ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ, ಕೊಲೆ ಮಾಡಲು ಯತ್ನಿಸಿದರು ಎಂದು ಮುಜಫರ್​ನಗರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

    ಇದನ್ನೂ ಓದಿ: ಪತ್ನಿಯ ರಕ್ತದ ಕಲೆ ಬಟ್ಟೆ ಮೇಲೆ ಹೇಗೆ ಬಂತು? ಉತ್ತರ ಹೇಳಲಾಗದೆ ಜೈಲು ಸೇರಿದ ಪತಿ

    ಮದುವೆಯಾದಾಗಿನಿಂದಲೂ ಅವರು ನನಗೆ ನಿರಂತರವಾಗಿ ಕಿರುಕುಳ ಕೊಡುತ್ತಿದ್ದರು. ಅಲ್ಲದೆ, ಅವರು ಬೇರೊಬ್ಬಳೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಾರೆ ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

    ಶೈಲಜಾ ಅವರ ದೂರನ್ನು ಆಧರಿಸಿ ಮುಜಫರ್​ಪುರ ಪೊಲೀಸರು ರಾಜೀವ್​ ನಯನ್​ ವಿರುದ್ಧ ಕೊಲೆ ಯತ್ನ, ಪ್ರಚೋದೆನ ಇಲ್ಲದೆ ಹಲ್ಲೆ, ಮನೆಗೆ ಬಲವಂತವಾಗಿ ನುಗ್ಗಿ ಮನೆಯಲ್ಲಿದ್ದವರ ಮೇಲೆ ದೈಹಿಕ ಹಲ್ಲೆ, ಗೌರವಕ್ಕೆ ಧಕ್ಕೆ ತರಲೆಂದೇ ಉದ್ದೇಶಪೂರ್ವಕವಾಗಿ ಅವಮಾನಿಸುವುದು, ಜೀವಕ್ಕೆ ಬದರಿಕೆ ಹಾಕಿರುವುದಲ್ಲದೆ, ಐಟಿ ಕಾಯ್ದೆಯ 66ನೇ ವಿಧಿ ಪ್ರಕಾರ ಅವರ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡಿರುವ ಮುಜಫರ್​ಪುರ ಪೊಲೀಸರು ರಾಜೀವ್​ ನಯನ್​ ಅವರನ್ನು ಬಂಧಿಸಿದ್ದಾರೆ.

    ಈ ವಿಷಯವನ್ನು ಖಚಿತಪಡಿಸಿರುವ ಡಿವೈಎಸ್​ಪಿ (ನ್ಯೂ ಮಂಡಿ) ಧನಂಜಯ್​ ಖುಶ್ವಾ, ಪ್ರಕರಣದ ತನಿಖೆ ಕೈಗೊಳ್ಳಲಾಗಿದೆ. ತನಿಖೆಯ ವೇಳೆ ಲಭಿಸುವ ಸಾಕ್ಷ್ಯಾಧಾರಗಳನ್ನು ಆಧರಿಸಿ, ರಾಜೀವ್​ ನಯನ್​ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಜೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನಿಂದ ರವಾನೆಯಾಯ್ತು ಪ್ಲಾಸ್ಮಾ: ದೇಶದಲ್ಲೇ ಮೊದಲ ಪ್ರಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts