More

    ಈಶ್ವರಪ್ಪ ಯಾರು ನನಗೆ ಗೊತ್ತಿಲ್ಲ

    ಬಾಗಲಕೋಟೆ: ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧವೇ ಬಂಡಾಯ ಎದ್ದಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರನ್ನು ಯಾರು? ಆ ಹೆಸರಿನ ಯಾವುದೇ ವ್ಯಕ್ತಿ ನನಗೆ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನದಾಸ್ ಅಗರವಾಲ್ ಕಿಚಾಯಿಸಿದ್ದಾರೆ.

    ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಈಶ್ವರಪ್ಪ ಕುರಿತು ಎದುರಾದ ಪ್ರಶ್ನೆಗೆ ಉತ್ತರಿಸಿದ ವ್ಯಂಗ್ಯಭರಿತ ಹಾಗೂ ಈಶ್ವರಪ್ಪ ನಡೆ ಬಗ್ಗೆ ಅಸಮಧಾನ ಹೊರಹಾಕಿದ ಅವರು, ನಮಗೆ ಯಾರ ಬಗ್ಗೆ ಗೊತ್ತಿರಲ್ಲವೋ ಅವರ ಬಗ್ಗೆ ಟಿಪ್ಪಣಿ ಮಾಡುವುದು ಸರಿಯಲ್ಲ ಎಂದು ಮಾಜಿ ಡಿಸಿಎಂ ಬಗ್ಗೆ ನಿರ್ಲಕ್ಷೃ ಎನ್ನುವ ದಾಟಿಯಲ್ಲಿ ಮಾತನಾಡಿದರು.

    ಬಿಜೆಪಿ ಮುಖಂಡರು, ಮಾಜಿ ಡಿಸಿಎಂ ಆಗಿದ್ದವರ ಬಗ್ಗೆ ಗೊತ್ತಿಲ್ಲ ಎಂದರೆ ಅವರಿಗೆ ಮಾಡುವ ಅಪಮಾನ ಅಲ್ಲವೆ ಎಂದಾಗ, ವ್ಯಕ್ತಿಯ ಅಪಮಾನ ಹೆಸರಿನಿಂದ ಆಗುವುದಿಲ್ಲ. ಅವರು ಮಾಡುವ ಕೆಲಸದಿಂದ ಆಗುತ್ತದೆ. ಬಿಜೆಪಿ ಕಾರ್ಯಕರ್ತ ಯಾವುದೇ ಸಮಯದಲ್ಲೂ ಬಿಜೆಪಿ ಜತೆ ಇರುತ್ತಾರೆ ಎಂದರು.
    ಮೋದಿ ಅವರ ಭಾವಚಿತ್ರ ಈಶ್ವರಪ್ಪ ಬಳಕೆ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ರಾಧಾಮೋಹನದಾಸ್, ಇದು ಚುನಾವಣಾ ಆಯೋಗದ ಕೆಲಸ. ಚುನಾವಣೆಯಲ್ಲಿ ಮೋಸ ನಡೆಯುವುದಿಲ್ಲ. ಜನರಿಗೆ ಮೋಸ ಮಾಡಿ, ಕಪಟ ಮಾಡಿ ಮತ ಪಡೆಯುವುದು ಅಸಾಧ್ಯ. ಅದು ಕರ್ನಾಟಕದಂತಹ ಸುಶಿಕ್ಷಿತ ರಾಜ್ಯದಲ್ಲಿ ನಡೆಯಲ್ಲ ಎಂದರು.

    ಚುನಾವಣೆಯಲ್ಲಿ ಮೋದಿ ಅವರ ಫೋಟೋ ಬಿಜೆಪಿಯವರು ಮಾತ್ರ ಬಳಕೆ ಮಾಡಬೇಕು. ಇತರರು ಬಳಿಸಿದರೆ ಅಂತವರಿಗೆ ಶಿಕ್ಷೆ ಆಗುತ್ತದೆ. ಇದು ಶೋಭೆ ತರುವುದಿಲ್ಲ ಎಂದು ಈಶ್ವರಪ್ಪ ವಿರುದ್ಧ ಪರೋಕ್ಷವಾಗಿ ಚಾಟಿ ಬೀಸಿದರು. ಬಿಜೆಪಿ ಅಭ್ಯರ್ಥಿ, ಸಂಸದ ಪಿ.ಸಿ.ಗದ್ದಿಗೌಡರ, ಲೋಕಸಭೆ ಕ್ಷೇತ್ರದ ಉಸ್ತುವಾರಿ ಲಿಂಗರಾಜ ಪಾಟೀಲ, ಶಾಸಕರಾದ ಮಹೇಶ ಟೆಂಗಿನಕಾಯಿ, ಸಿ.ಸಿ.ಪಾಟೀಲ, ಸಿದ್ದು ಸವದಿ, ಜಗದೀಶ ಗುಡಗುಂಟಿ, ಪಿ.ಎಚ್.ಪೂಜಾರ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಎಂ.ಕೆ.ಪಟ್ಟಣಶೆಟ್ಟಿ, ದೊಡ್ಡನಗೌಡ ಪಾಟೀಲ, ಜಿ.ಎಸ್.ನ್ಯಾಮಗೌಡ, ಶ್ರೀಕಾಂತ ಪಾಟೀಲ ಮತ್ತಿತರರು ಇದ್ದರು.

    ಜೋಷಿ ಯುದ್ಧ ಜೋಷಿ ಜೊತೆಗೆ

    ಧಾರವಾಡ ಕ್ಷೇತ್ರದಲ್ಲಿ ಸಚಿವ ಪ್ರಲ್ಹಾದ್ ಜೋಷಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಬಗ್ಗೆ, ಮೋದಿ ಎದುರು ಯಾರೂ ಇಲ್ಲ. ಮೋದಿ ಎದುರು ಮೋದಿ ಮಾತ್ರ ಇರುತ್ತಾರೆ. ಮೋದಿ ಯುದ್ಧ ಮೋದಿ ಜೊತೆ ಎಂದು ಅವರೇ ಹೇಳಿದ್ದಾರೆ. ಹಾಗೆಯೇ ಪ್ರಲ್ಹಾದ್ ಜೋಷಿ ಯುದ್ಧ ಜೋಷಿ ಜತೆಗೆ ಇರುತ್ತದೆ. 2019 ಹಾಗೂ 2024ರ ಪ್ರಲ್ದಾದ್ ಜೋಷಿ ಮಧ್ಯ ಸಂಘರ್ಷ ನಡೆಯುತ್ತಿದೆ. 2024ರ ಜೋಷಿ ಅವರು 2019ರ ಜೋಷಿ ಅವರನ್ನು ಸೋಲಿಸಬೇಕಿದೆ. ಅಧಿಕ ಮತಗಳಿಂದ ಗೆಲ್ಲಬೇಕಿದೆ ಎಂದ ರಾಧಾಮೋಹನದಾಸ್ ಅವರು, ಧಾರ್ಮಿಕ ವ್ಯಕ್ತಿಗಳ ಬಗ್ಗೆ ಹೆಚ್ಚು ಮಾತನಾಡುವುದು ನಮಗೆ ಶೋಭೆ ತರುವುದಿಲ್ಲ. ಧಾರವಾಡ ಕ್ಷೇತ್ರದಲ್ಲಿ ಜೋಷಿ ಅವರು ಇನ್ನಷ್ಟು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ರಾಜ್ಯದಲ್ಲಿ 28 ಸ್ಥಾನ ಗೆಲ್ಲುತ್ತೇವೆ

    ಜೂನ್ 4 ರಂದು ರಾಜ್ಯದ ಎಲ್ಲ 28 ಲೋಕಸಭೆ ಕ್ಷೇತ್ರಗಳಲ್ಲೂ ಬಿಜೆಪಿ ವಶವಾಗಲಿವೆ. 2019ರಲ್ಲಿ ಹಣಬಲದಿಂದ ರಾಜ್ಯದಲ್ಲಿ ಕಾಂಗ್ರೆಸ್ ಒಂದು ಸ್ಥಾನ ಗೆದ್ದಿತ್ತು. ಈ ಸಲ ಅದನ್ನೂ ಗೆಲ್ಲುವುದಿಲ್ಲ. ಸದ್ಯ ಬಾಗಲಕೋಟೆ ಜಿಲ್ಲೆಯ ನಿರ್ಮಾತೃ ಪಿ.ಸಿ.ಗದ್ದಿಗೌಡರ ಈ ಸಲ ಐತಿಹಾಸಿಕ ಮತಗಳ ಅಂತರದಲ್ಲಿ ಗೆಲುತ್ತಾರೆ. ಗದ್ದಿಗೌಡರ ಒಬ್ಬ ಅಜಾತಶತ್ರು, ಅವರು ಈಗಾಗಲೇ ಗೆದ್ದಾಗಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಖುಷಿ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts