More

    ಶೀಲ ಶಂಕಿಸಿ ಪತ್ನಿಯನ್ನೇ ಕೊಂದ ಪಾಪಿ ಪತಿ: ತಾಯಿಯನ್ನು ಕಳೆದುಕೊಂಡ ಎರಡು ಪುಟ್ಟ ಮಕ್ಕಳ ಗೋಳು ಕೇಳೋರಿಲ್ಲ

    ಚಿಕ್ಕಬಳ್ಳಾಪುರ: ಸಣ್ಣ ಸಣ್ಣ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳ ನಡೆಯವುದು ಸಾಮಾನ್ಯ. ಅದು ಅಲ್ಲಿಗೇ ಬಿಟ್ಟು ಜೀವನವನ್ನು ಮುನ್ನಡೆಸುವುದೇ ಒಳಿತು. ಆದರೆ ಇಲ್ಲೊಬ್ಬ ದುರುಳ ಪತ್ನಿ ಮೇಲಿನ ಅನುಮಾನದಿಂದ ಸಣ್ಣ ಮಗುವನ್ನು ನೋಡಿಕೊಳ್ಳುವರು ಯಾರು ಎಂಬುದನ್ನೂ ಯೋಚಿಸದ ಪಾಪಿ ಆಕೆಯನ್ನೇ ಹತ್ಯೆ ಮಾಡಿದ್ದಾನೆ. ಎರಡು ಪುಟ್ಟ ಮಕ್ಕಳಿದ್ದು ತಾಯಿ ಕಳೆದುಕೊಂಡ ಪುಟ್ಟ ಮಕ್ಕಳ ಪಾಡು ಹೇಳತೀರದು.

    ಚಿಕ್ಕಬಳ್ಳಾಪುರ ನಗರದ ಟಿ ಜಿ ಟ್ಯಾಂಕ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮಮತ(೩೦) ಮೃತ ದುರ್ದೈವಿ. ಗಂಡ ಅರವಿಂದ್ ನನ್ನ ವಶಕ್ಕೆ ಪಡೆದ ಚಿಕ್ಕಬಳ್ಳಾಪುರ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಆ ದಂಪತಿ ಹೊಟ್ಟೆ ಪಾಡಿಗೆ ರಾಜ್ಯದಿಂದ ರಾಜ್ಯಕ್ಕೆ ಬಂದು ಬದುಕುತ್ತಿದ್ರು. ಅವರಿಬ್ಬರ ಸುಂದರ ಸಂಸಾರಕ್ಕೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದರು. ಆದ್ರೆ ಇಬ್ಬರ ಮದ್ಯೆ ಉಂಟಾದ ಸಣ್ಣದೊಂದು ವೈನಸ್ಸಿನಿಂದ, ಗಂಡ ಹೆಂಡತಿಯನ್ನು ಹೊಡೆದು ಕೊಲೆ ಮಾಡಿದ್ದಾನೆ.

    ಸ್ವತಃ ಗಂಡನ ಕೈಯಲ್ಲಿ ಹೆಣವಾಗಿರುವ ಈಕೆಯ ಹೆಸರು ಮಮತಾ. ಇನ್ನೂ ಈಗ ತಾನೆ 30 ವರ್ಷ ವಯಸ್ಸು. ಉತ್ತರ ಪ್ರದೇಶದ ಈಕೆ ಅಲ್ಲೆ.. ಅರವಿಂದ್ ಅನ್ನೊನ ಜೊತೆ ಮದುವೆ ಮಾಡಿಕೊಂಡಿದ್ದಳು. ಮದುವೆಯಾಗಿ ಬರೋಬ್ಬರಿ 8 ವರ್ಷಗಳೆ ಕಳೆದಿವೆ, ಆದ್ರೆ ಇತ್ತಿಚಿಗೆ ಹೊಟ್ಟೆ ಪಾಡಿಗೆ ಅಂತ ಸಂಬಂಧಿಗಳ ಮೂಲಕ ಚಿಕ್ಕಬಳ್ಳಾಪುರ ನಗರಕ್ಕೆ ಆಗಮಿಸಿ, ಸಂಬಂಧಿಗಳ ಪಾನಿ ಪುರಿ ಅಂಗಡಿಯಲ್ಲಿ ಕೆಲಸ ಮಾಡ್ತಿದ್ರು. ಚಿಕ್ಕಬಳ್ಳಾಫುರ ನಗರದ ಟಿ.ಜಿ.ಟ್ಯಾಂಕ್ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ರು, ಆದ್ರೆ ನಿನೆ ತಡರಾತ್ರಿ, ಅರವಿಂದ್, ಪತ್ನಿಗೆ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

    ಇನ್ನೂ ಪತ್ನಿಯನ್ನೆ ಕತ್ತು ಹಿಸುಕಿ ಕೊಂದ ಮೇಲೆ, ಆರೋಪಿ ಅರವಿಂದ್,, ಇಬ್ಬರು ಮಕ್ಕಳನ್ನು ಎತ್ತಿಕೊಂಡು ಹೋಗಿ ಸ್ನೇಹಿತನ ಮನೆಯಲ್ಲಿ ಬಿಟ್ಟು ವಾಪಸ್ ಮನೆಗೆ ಬಂದಿದ್ದಾನೆ, ಅಷ್ಟರಲ್ಲಿ ಮನೆಯ ಮಾಲಿಕರು ಹಾಗೂ ಅರವಿಂದ್ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ರು. ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೆ.ತನ್ನ ಹೆಂಡತಿಯ ನಡತೆ ಸರಿ ಇರಲಿಲ್ಲ ಅಂತ ಅಪವಾದ ಮಾಡಿದ್ದಾನೆ. ಆದ್ರೆ ಮನೆ ಮಾಲಿಕರು ಹಾಗೂ ಅಕ್ಕ ಪಕದ ಜನ ಹೇಳೋದೆ ಬೇರೆ, ಮೃತ ಮಮತಾ ಅಪರಂಜಿಯಂತೆ ಹೆಣ್ಣು ಮಗಳು , ಪತ್ನಿಯ ಬಗ್ಗೆ ಅಪವಾದ ಮಾಡಿದ ಅವಳ ಗಂಡನ ಬಾಯಲ್ಲಿ ಹುಳ ಬಿಳಲಿ ಅಂತ ಶಾಪ ಹಾಕಿದರು.

    ಸಂಬಂಧಿಗಳ ಪಾನಿ ಪುರಿ ಅಂಗಡಿಯಲ್ಲಿ ಕೆಲಸಕ್ಕೆ ಅಂತ ಬಂದ ಜೋಡಿಯೊಂದು, ಮಿಸ್ ಅಂಡರ್ ಸ್ಟ್ಯಾಂಡ್ ನಿಂದ ಸಂಸಾರದಲ್ಲಿ ಏರು ಪೇರು ಆಗಿ, ಕೊನೆಗೆ ಸ್ವತಃ ಗಂಡನೆ ಹೆಂಡತಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಕೊಂದು ಹಾಕಿದ್ದಾನೆ. ಆದ್ರೆ ತಂದೆಯ ಕೃತ್ಯದಿಂದ, ಹಾಲು ಕುಡಿಯುವ ಮಗು ಸೇರಿ 7 ವರ್ಷದ ಬಾಲಕ ಅನಾಥರಾಗಿದ್ದಾರೆ. ತಾಯಿ ಸಾವಿನ ಮನೆ ಸೇರಿದ್ರೆ ತಂದೆ ಜೈಲು ಪಾಲಾಗಲಿದ್ದಾನೆ. (ದಿಗ್ವಿಜಯ ನ್ಯೂಸ್​)

    48 ವರ್ಷದ ಬಳಿಕ ಬಾಲ್ಯದ ದಿನಗಳನ್ನು ಕಳೆದ ಮನೆ ತೊರೆದ ಗಂಗೂಲಿ: ದುಬಾರಿ ಬೆಲೆಯಲ್ಲಿ ಹೊಸ ಮನೆ ಖರೀದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts