More

    Samantha Brand Value: ಜಾಹೀರಾತಿಗೆ, ಒಂದು ಇನ್​ಸ್ಟಾಗ್ರಾಮ್​ ಪೋಸ್ಟ್​ಗೆ ಪಡೆಯೋದು ಎಷ್ಟು ಲಕ್ಷ?

    ಸಿನಿತಾರೆಯರು ತಮ್ಮ ಸಿನಿಮಾ ಸಂಭಾವನೆಯ ಜತೆಗೆ ಅನೇಕ ಜಾಹೀರಾತುಗಳಲ್ಲಿ ನಟಿಸುತ್ತಾರೆ. ಅಷ್ಟೇ ಅಲ್ಲ, ಹಲವು ಬ್ರ್ಯಾಂಡ್ ಕಂಪನಿಗಳಿಗೆ ರಾಯಭಾರಿ ಸಹ ಆಗಿರುತ್ತಾರೆ. ಇನ್ನು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಾವು ಅಭಿನಯಿಸಿದ ಜಾಹೀರಾತುಗಳ ವಿಡಿಯೋಗಳನ್ನು, ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಹಾಗಾಗಿ, ಸಿನಿಮಾಗಳ ಜೊತೆಗೆ ಸಿನಿತಾರೆಯರಿಗೆ ಜಾಹೀರಾತುಗಳು ಮತ್ತು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್​ಗಳು, ಬ್ರ್ಯಾಂಡ್ ಕಂಪನಿಗಳಿಗೆ ರಾಯಭಾರಿಯಾಗುವುದರ ಮೂಲಕ ಕೂಡಾ ವರಮಾನ ಪಡೆಯುವುದು ಸಹಜ ಎಂದೇ ಹೇಳಬೇಕು. ಇನ್ನು, ಇದಕ್ಕೆ ಇತ್ತೀಚೆಗೆ ವಿಚ್ಛೇದನ ಪಡೆದ ನಟಿ ಸಮಂತಾ ರುತ್ ಪ್ರಭು ಕೂಡಾ ಹೊರತಾಗಿಲ್ಲ. ನಟಿ ಸಮಂತಾ ಹಲವು ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿದ್ದಾರೆ. ಸಿನಿಮಾಗಳಿಗೆ ಅಂತೂ ನಟಿ ಸಮಂತಾ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.
    ಇದರ ಜತೆಗೆ ಕೆಲ ದಿನಗಳಿಂದ ನಟಿ ಸಮಂತಾ ತುಂಬಾ ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ. ಹೌದು, ಇತ್ತೀಚೆಗೆ ಅವರು ಡ್ರೀಮ್​ 11 ಕಂಪನಿಯ ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಹೀಗೆ, ಹಲವಾರು ಕಂಪನಿಗಳ ಜಾಹೀರಾತುಗಳಲ್ಲಿ ನಟಿ ಸಮಂತಾ ಅಭಿನಯಿಸುತ್ತಿದ್ದಾರೆ. ಹೀಗೆ ಜಾಹೀರಾತುಗಳಲ್ಲಿ ನಟಿಸಲು ಸ್ಯಾಮ್ ಒಂದು ಜಾಹೀರಾತಿಗೆ ಬರೋಬ್ಬರಿ 40 ರಿಂದ 50 ಲಕ್ಷ ಸಂಭಾವನೆ ಪಡೆಯುತ್ತಾರಂತೆ. ಹಾಗೆಯೇ, ಇನ್​ಸ್ಟಾಗ್ರಾಂನಲ್ಲಿ ಬರೋಬ್ಬರಿ 22 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಸಮಂತಾ ತಾವೇ ಕಾಣಿಸಿಕೊಂಡಿರುವ ಜಾಹೀರಾತಿನ ವಿಡಿಯೋವನ್ನು ತಮ್ಮದೇ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳಲು ಕೂಡಾ ಒಂದು ಪೋಸ್ಟ್​ಗೆ ಅಥವಾ ಒಂದು ಫೋಟೋ, ವಿಡಿಯೋ ಶೇರ್ ಮಾಡಲು ಬರೋಬ್ಬರಿ 10 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.
    ಈ ಮೂಲಕ ಬ್ರ್ಯಾಂಡ್​ಗಳಿಗೆ ನಟಿ ಸಮಂತಾ ಒಂದು ಬ್ರ್ಯಾಂಡ್ ಆಗಿದ್ದಾರೆ ಎಂದರೇ ತಪ್ಪಾಗುವುದಿಲ್ಲ. ಹೌದು, ಜಾಹೀರಾತಿನಲ್ಲಿ ನಟಿಸುವುದರ ಜತೆಗೆ ಆ ಫೋಟೋ ಅಥವಾ ವಿಡಿಯೋ ಪೋಸ್ಟ್ ಮಾಡಲು ಹೆಚ್ಚು ಕಡಿಮೆ 10 ಲಕ್ಷ ರೂಪಾಯಿ ಪಡೆಯುತ್ತಾರಂತೆ. ಹಾಗಾಗಿಯೇ, ನಟಿ ಸಮಂತಾ ಅವರ ಇನ್​ಸ್ಟಾಗ್ರಾಂ ನೋಡಿದರೆ ಹೆಚ್ಚು ಜಾಹೀರಾತಿನ ಫೋಟೋ ಮತ್ತು ವಿಡಿಯೋಗಳೇ ಕಾಣಿಸುತ್ತವೆ. ಇದಿಷ್ಟೇ ಅಲ್ಲದೇ, ಸಮಂತಾಗೆ ಹಲವು ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಸಹ ಆಹ್ವಾನಗಳು ಬರುತ್ತವೆ. ಇನ್ನು, ಹಾಗೆ ಅತಿಥಿಯಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೂಡಾ ಸಮಂತಾ 10 ರಿಂದ 15 ಲಕ್ಷ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ. ನಟಿ ಸಮಂತಾ ಮಾಲ್, ಆಭರಣ ಹೀಗೆ ಹಲವು ಅಂಗಡಿಗಳ ಉದ್ಘಾಟನಾ ಸಮಾರಂಭಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾ ಇರುತ್ತಾರೆ

    ಸಿದ್ದಗಂಗಾ ಶ್ರೀಗಳ ಮೇಲೆ ಮಿನಿ ಸಿನಿ ಸಿರೀಸ್! ಶ್ರೀಗಳ ಪಾತ್ರದಲ್ಲಿ ಬಿಗ್ ಬಿ?

    ಪತ್ರಕರ್ತನ ಕೆನ್ನೆಗೆ ಬಾರಿಸಿದ್ದ ವಿಲ್​ ಸ್ಮಿತ್​ ಹಳೆಯ ವಿಡಿಯೋ ಈಗ ವೈರಲ್! ನೆಟ್ಟಿಗರು ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts