More

    ಕೌಟೆಕಾಯಿ ಜಾತ್ರೆ ಸಂಪನ್ನ

    ಶನಿವಾರಸಂತೆ: ಸಕಲೇಶಪುರ ತಾಲೂಕಿಗೆ ಸೇರಿದ ಹೊಸೂರು ಗ್ರಾಮದಲ್ಲಿ ಬೆಟ್ಟದ ಶ್ರೀ ಬಸವೇಶ್ವರ ಸ್ವಾಮಿಯ ಕೌಟೆಕಾಯಿ ಜಾತ್ರೆ ಸೋಮವಾರ ನಡೆಯಿತು.

    ಜಿಲ್ಲೆಯ ಗಡಿಭಾಗದಲ್ಲಿರುವ ಹೊಸೂರು ಗ್ರಾಮಸ್ಥರು ಶನಿವಾರಸಂತೆಯಲ್ಲಿ ಪ್ರತಿದಿನ ಸಂಪರ್ಕದಲ್ಲಿರುತ್ತಾರೆ. ಈ ಹಿನ್ನೆಲೆಯಲ್ಲಿ ಕೊಡಗು ಭಾಗದ ಜನರು ಹೊಸೂರು ಕೌಟೆಕಾಯಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ದೀಪಾವಳಿ ನಂತರ ಬೆಟ್ಟದ ಮೇಲಿರುವ ಶ್ರೀ ಬಸವೇಶ್ವರ ದೇವರ ಹೆಸರಿನಲ್ಲಿ ಕೌಟೆಕಾಯಿ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಜಾತ್ರೆಯಲ್ಲಿ ಕೌಟೆಕಾಯಿಯನ್ನು ಎರಡು ಭಾಗವನ್ನಾಗಿ ಮಾಡಿ ಅದರ ತಿರುಳು ತೆಗೆದು ಅದರಲ್ಲಿ ಹಣತೆಯನ್ನು ಹಚ್ಚುವುದು ಜಾತ್ರೆಯ ವಿಶೇಷ.

    ಸೋಮವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಹೊಸೂರು ಗ್ರಾಮದ ಬೆಟ್ಟದ ಮೇಲಿರುವ ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನಲ್ಲಿ ಅರ್ಚಕರು ವಿಶೇಷ ಪೂಜಾ ವಿಧಿವಿಧಾನ ನೆರವೇರಿಸಿದರು. ಕೊಡಗು ಭಾಗದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ಮಧ್ಯಾಹ್ನ 1 ಗಂಟೆಗೆ ದೇವಸ್ಥಾನದ ವೇದಿಕೆಯಲ್ಲಿ ಕೌಟೆಕಾಯಿ ಜಾತ್ರೆ ಅಂಗವಾಗಿ ಸಮಾರಂಭ ಏರ್ಪಡಿಸಲಾಗಿತ್ತು. ಹೊಸೂರು ಗ್ರಾಮದ ಹಿರಿಯ ಮತ್ತು ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಬೆಳ್ಳಿಗೌಡ ಅವರು ಕೌಟೆಕಾಯಿ ಹಣತೆಯ ದೀಪ ಹಚ್ಚಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಬೆಂಗಳೂರಿನ ಯುವ ಉದ್ದಿಮಿ ಕೀರ್ತಿ ಮಾತನಾಡಿ, ಹಿಂದೆ ಸಾವಯವ ಕೃಷಿಗೆ ಉತ್ತೇಜನ ನೀಡಲು ಅದೇ ಹೆಸರಿನಿಂದ ಜಾತ್ರೆ ನಡೆಸಲು ನಾಂದಿ ಹಾಡಿದ್ದರು. ಬದಲಾದ ಕಾಲಮಾನದಲ್ಲಿ ಸಾವಯವ ಕೃಷಿ ಪದ್ಧ್ದತಿ ಬದಲಾಗುತ್ತಿದ್ದು, ಕೌಟೆಕಾಯಿ ಬೆಳೆಯುವುದು ಬರಿದಾಗುತ್ತಿದೆ. ಈ ನಿಟ್ಟಿನಲ್ಲಿ ಸಾವಯವ ಕೃಷಿಯನ್ನು ಅವಲಂಬಿಸುವಂತೆ ಸಲಹೆ ನೀಡಿದರು.

    ಜಾತ್ರಾ ಸಮಿತಿಯಿಂದ ಉದ್ದಿಮಿಗಳಾದ ಬೆಳ್ಳಿಗೌಡ, ಕೀರ್ತಿ, ಪತ್ರಕರ್ತ ದಿನೇಶ್ ಮಾಲಂಬಿ, ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಸಹಕಾರಿ ಧುರಿಣ ಸ್ವಾಮಿಗೌಡ, ದಾನಿ ವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು. ಜಾತ್ರೆ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು. ಸಕಲೇಶಪುರ ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ, ಜಾತ್ರಾ ಸಮಿತಿ ಕಾರ್ಯದರ್ಶಿ ಹೊಸೂರು ರಮೇಶ್, ಜಾತ್ರಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts