More

    ಹಳೇ ದರಕ್ಕೆ ರಸಗೊಬ್ಬರ ಪೂರೈಸುವಂತೆ ವಿಜಯನಗರ ನಾಗರೀಕ ವೇದಿಕೆ ಆಗ್ರಹ

    ಹೊಸಪೇಟೆ: ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಆರಂಭವಾಗುತ್ತಿದ್ದು, ಕೃಷಿ ಇಲಾಖೆ ಆದೇಶದಂತೆ ರಸಗೊಬ್ಬರವನ್ನು ಹಳೇ ದರಕ್ಕೆ ಮಾರಾಟ ಮಾಡಬೇಕೆಂದು ಒತ್ತಾಯಿಸಿ ವಿಜಯನಗರ ನಾಗರೀಕ ವೇದಿಕೆ ಸದ್ಯರು ಸೋಮವಾರ ನಗರದಲ್ಲಿ ಎಸಿ ಕಚೇರಿ ಸಿಬ್ಬಂದಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

    ಕಳೆದ ಸಾಲಿನ 11.55 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಗೋದಾಮಿನಲ್ಲಿ ದಾಸ್ತಾನಿದೆ. ಪ್ರಾಥಮಿಕ ಕೃಷಿ ಸಹಕಾರ ಸಂಘ, ಖಾಸಗಿ ಮಾರಾಟಗಾರರು ಸೇರಿದಂತೆ ರಾಜ್ಯದಲ್ಲಿ 11 ಸಾವಿರ ರಸಗೊಬ್ಬರ ಮಳಿಗೆಗಳ ಮೂಲಕ ಹಳೇ ದರದಲ್ಲಿ ರಸಗೊಬ್ಬರ ಪೂರೈಕೆಯಾಗಲಿದೆ ಎಂದು ಕೃಷಿ ಇಲಾಖೆ ಆಯುಕ್ತ ಹೇಳಿಕೆ ನೀಡಿದ್ದಾರೆ. ಆದರೆ, ಜಿಲ್ಲೆ ಸೇರಿದಂತೆ ವಿವಿಧೆಡೆ ಹೊಸ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಇಫ್ಕೋ ಡಿಎಪಿ ಗೊಬ್ಬರದ ಹಳೇ ದರ 1300 ರೂ. ಇದ್ದು, ಪ್ರಸ್ತುತ 1900 ರೂ.ಗೆ ಮಾರಾಟ ಮಾಡಲಾಗುತ್ತಿದೆ ಆರೋಪಿಸಿದರು. ಪದಾಧಿಕಾರಿಗಳಾದ ಮೆಹಬೂಬ್ ಭಾಷಾ, ಶ್ರೀಧರ, ಎ.ಪ್ರಸಾದ್, ಕೆ.ಸುರೇಶ್, ಜೆ.ರಾಘವೇಂದ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts