More

    ಅಕ್ರಮ ಮರಳು ಗಣಿಗಾರಿಕೆ ತಡೆಗೆ ಆಗ್ರಹ

    ಹೊಸದುರ್ಗ: ತಾಲೂಕಿನ ಕನ್ನಾಗೊಂದಿ ಹಾಗೂ ಬಲ್ಲಾಳಸಮುದ್ರ ಕಾವಲು ಬಳಿಯ ವೇದಾವತಿ ನದಿ ಪಾತ್ರದಲ್ಲಿ ಸರ್ಕಾರದ ಲೀಸ್ ಹೆಸರಿನಲ್ಲಿ ನಡೆಸುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಗೆ ಆಗ್ರಹಿಸಿ ರೈತರು ರೈತ ಸಂಘದ ನೇತೃತ್ವದಲ್ಲಿ ಸೋಮವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ನಂತರ ವೇದಾವತಿ ನದಿಗಿಳಿದು ಪ್ರತಿಭಟನೆ ನಡೆಸಿದರು.

    ತಾಲೂಕಿನ ಪ್ರಮುಖ ಜಲಮೂಲವಾದ ವೇದಾವತಿ ನದಿಪಾತ್ರದಲ್ಲಿ ಸರ್ಕಾರ ಮರಳು ಬ್ಲಾಕ್ ಗುರುತಿಸಿ ಗುತ್ತಿಗೆದಾರರಿಗೆ ಹರಾಜಿನಲ್ಲಿ ನೀಡಿದೆ. ಗುತ್ತಿಗೆದಾರರು ಸರ್ಕಾರದ ನಿಯಮ ಗಾಳಿಗೆ ತೂರಿ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ. ಬಲ್ಲಾಳಸಮುದ್ರ ಕಾವಲು ಪ್ರದೇಶದಲ್ಲಿ 1 ಅಡಿ ಆಳದಷ್ಟು ಮರಳು ತೆಗೆಯಲು ಅನುಮತಿ ನೀಡಿದೆ. ಆದರೆ 20 ರಿಂದ 30 ಆಡಿ ಆಳದವರೆಗೆ ಮರಳು ತೆಗೆಯಲಾಗಿದೆ.

    ಕನ್ನಾಗುಂದಿ ಬಳಿಯ ಸರ್ವೇ ನಂ 9, 10 ಹಾಗೂ 11ರಲ್ಲಿ ಮರಳು ಗಣಿಗಾರಿಕೆಗೆ ಪರವಾನಗಿ ಪಡೆದು, ನದಿಪಾತ್ರದ ಬೇರೆ ಪ್ರದೇಶದಲ್ಲಿ ಬೃಹತ್ ಯಂತ್ರಗಳನ್ನು ಬಳಸಿ ಮರಳು ಬಗೆಯುತ್ತಿದ್ದಾರೆ ಎಂದು ದೂರಿದರು.

    ರೈತ ಮಹಿಳೆಯರು ನದಿಗಿಳಿದು ಬಿಸಿಲಿನಲ್ಲಿ ಪ್ರತಿಭಟನೆ ನಡೆಸಿದರೂ ಸ್ಥಳಕ್ಕೆ ಬಾರದ ತಹಸೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯ ರೈತಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ, ತಾಲೂಕಾಧ್ಯಕ್ಷ ಮಹೇಶ್ವರಪ್ಪ, ಕಾರ್ಯದರ್ಶಿ ನಾಗಲಿಂಗಮೂರ್ತಿ, ರಮೇಶ್, ಬಯಲಪ್ಪ, ಸದಾಶಿವಪ್ಪ, ಬಸವರಾಜು, ಲಿಂಗರಾಜು ಇತರರಿದ್ದರು.

    ನನ್ನೊಬ್ಬನಿಂದಲೇ ಸಾಧ್ಯವಿಲ್ಲ: ಗಣಿಗಾರಿಕೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕೆಂಬ ರೈತರ ಒತ್ತಾಸೆಯನ್ನು ತಳ್ಳಿಹಾಕಿದ ತಹಸೀಲ್ದಾರ್ ತಿಪ್ಪೇಸ್ವಾಮಿ, ಸರ್ಕಾರ ಮರಳು ಬ್ಲಾಕ್ ಹರಾಜು ಹಾಕಿದೆ. ಅದನ್ನು ತಡೆಯಲು ಟಾಸ್ಕ್‌ಫೋರ್ಸ್ ಹಾಗೂ ಗಣಿ ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಅವಶ್ಯಕತೆಯಿದೆ. ಅವರ ಸಮಕ್ಷಮದಲ್ಲಿ ಪರಿಶೀಲನೆ ನಡೆಸಬೇಕು. ಅದಕ್ಕಾಗಿ ದಿನಾಂಕ ಗೊತ್ತುಪಡಿಸಿ ಕೆಲಸ ಮಾಡೋಣ ಎಂದು ತಿಳಿಸಿ ಸ್ಥಳದಿಂದ ತೆರಳಿದರು.19 ಪಿ1)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts