More

    ಹೊನ್ನಾಳಿ ಹೊಳೆಯಲ್ಲಿ ಮೊಸಳೆ ಪ್ರತ್ಯಕ್ಷ

    ಹೊನ್ನಾಳಿ: ತಾಲೂಕಿನ ಗೊಲ್ಲರಹಳ್ಳಿ-ಹಳೇ ದೇವರ ಹೊನ್ನಾಳಿ ಗ್ರಾಮಗಳ ವ್ಯಾಪ್ತಿಯ ತುಂಗಭದ್ರಾ ನದಿಯಲ್ಲಿ ಬೃಹತ್ ಮೊಸಳೆಯೊಂದು ಎರಡು ಮರಿಗಳೊಂದಿಗೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿವೆ.

    ಅ.1ರಂದೂ ಇದೇ ಭಾಗದಲ್ಲಿ ಮೊಸಳೆ ಕಾಣಿಸಿಕೊಂಡಿದ್ದಾಗಿ ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ನೀರಿನಿಂದ ಹೊರಬಂದು ಬಾಯಿ ತೆರೆದುಕೊಂಡು ಮರಳಿನ ಮೇಲೆ ಮಲಗಿರುವ ಮೊಸಳೆಯ ದೃಶ್ಯ ಹಾಗೂ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ.

    ಟೀಥ್ ಕ್ಲೀನಿಂಗ್: ಸಾಮಾನ್ಯವಾಗಿ ಮೊಸಳೆಗಳು ಆಹಾರ ಸೇವಿಸಿದ ಬಳಿಕ ಹಲ್ಲುಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಹೀಗೆ ದಂಡೆಗೆ ಬಂದು ಬಾಯಿ ತೆರೆದುಕೊಂಡು ಮಲಗುತ್ತವೆ. ಮೊಸಳೆಯ ಹಲ್ಲುಗಳಲ್ಲಿ ಸಿಲುಕಿಕೊಂಡಿರುವ ಆಹಾರದ ಕಣಗಳನ್ನು ವಿವಿಧ ಪಕ್ಷಿಗಳು ತಿನ್ನುತ್ತವೆಂದು ರೈತರೊಬ್ಬರು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts