More

    ಹೆಚ್ಚು ನೀರು ಬಿಟ್ಟರೆ ಹೋರಾಟ

    ಹಿರಿಯೂರು: ವಿವಿ ಸಾಗರ ಜಲಾಶಯದಿಂದ ವೇದಾವತಿ ನದಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಹರಿಸಿದರೆ ರೈತರ ಜತೆಗೂಡಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಮುಖಂಡ ಡಿ.ಟಿ.ಶ್ರೀನಿವಾಸ್ ಎಚ್ಚರಿಸಿದ್ದಾರೆ.

    ನದಿ ಪಾತ್ರಕ್ಕೆ 0.25 ಟಿಎಂಸಿ ಅಡಿ ನೀರು ಹರಿಸಲು ನಮ್ಮ ತಕರಾರಿಲ್ಲ, ನೀರು ರಾಷ್ಟ್ರೀಯ ಸಂಪತ್ತು, ಮಾನವೀಯ ದೃಷ್ಟಿಯಿಂದ ಚಳ್ಳಕೆರೆ ತಾಲೂಕಿಗೆ ನೀರು ಹರಿಸಲು ನಮ್ಮ ವಿರೋಧವಿಲ್ಲ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟರೆ ಹೋರಾಟ ಅನಿವಾರ್ಯ.

    ಬಿಜೆಪಿ ಸರ್ಕಾರದ ಇಚ್ಛಾಶಕ್ತಿ ಫಲವಾಗಿ ಮತ್ತು ವರುಣನ ಕೃಪೆಯಿಂದ ಜಲಾಶಯಕ್ಕೆ 102 ಅಡಿ ನೀರು ಬಂದಿದೆ, ಈಗಾಗಲೇ ತಾಲೂಕಿನ ಅಚ್ಚುಕಟ್ಟು ಪ್ರದೇಶಕ್ಕೆ 1.27 ಟಿಎಂಸಿ ಅಡಿ ನೀರು ಹರಿಸುತ್ತಿದ್ದು, ನಮ್ಮ ತಾಲೂಕಿನ ರೈತರ ಹಿತ ಕಾಯುವುದು ನಮ್ಮ ಮೊದಲ ಆದ್ಯತೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಚಳ್ಳಕೆರೆ ತಾಲೂಕಿನ ಪರಶುರಾಮಪುರ ಹೋಬಳಿ ನದಿ ಪಾತ್ರದಲ್ಲಿ ಜನ-ಜಾನುವಾರುಗಳ ಕುಡಿವ ನೀರಿಗೆ ಹಾಹಾಕಾರ ಎದುರಾಗಿದ್ದು, ಶಾಸಕ ರಘುಮೂರ್ತಿ ಮತ್ತು ರೈತರ ಕೋರಿಕೆ ಮೇರೆಗೆ ಸರ್ಕಾರ ವಿವಿ ಸಾಗರದಿಂದ 0.25 ಟಿಎಂಸಿ ಅಡಿ ನೀರು ಹರಿಸಲು ಆದೇಶಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts