More

    ತೇರುಮಲ್ಲೇಶ್ವರ ಜಾತ್ರೋತ್ಸವಕ್ಕೆ ಚಾಲನೆ

    ಹಿರಿಯೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ತೇರುಮಲ್ಲೇಶ್ವರ ಸ್ವಾಮಿ ಜಾತ್ರೆ ಅಂಗವಾಗಿ ಶನಿವಾರ ಗಿಳಿ ವಾಹನೋತ್ಸವ ಹಾಗೂ ವಾರದ ಸಂತೆ ನೆರವೇರಿತು.

    ಜ.30ರಂದು ಉತ್ಸವ ಆರಂಭವಾಗಿದ್ದು, ಫೆ.14ರ ವರೆಗೆ ಜರುಗಲಿದೆ. ಫೆ.2-ಗಂಡಭೇರುಂಡ ವಾಹನೋತ್ಸವ, 3-ನವಿಲು ವಾಹನೋತ್ಸವ, 4-ಸಿಂಹ ವಾಹನೋತ್ಸವ, 5-ನಂದಿ ವಾಹನೋತ್ಸವ, 6-ಸರ್ಪ ವಾಹನೋತ್ಸವ, 7-ಅಶ್ವ ವಾಹನೋತ್ಸವ, 8-ಗಜ ವಾಹನೋತ್ಸವ, ಮೂರು ಕಳಸ ಸ್ಥಾಪನೆ, 9-ದೊಡ್ಡ ಉತ್ಸವ, ಅಕ್ಕಿ ತಂಬಿಟ್ಟಿನ ಆರತಿ, ಬಸವ ವಾಹನೋತ್ಸವ ನೆರವೇರಲಿವೆ.

    10-ಬೀರೇನಹಳ್ಳಿ ಮಜುರೆ ಕರಿಯಣ್ಣಹಟ್ಟಿ ಗ್ರಾಮದ ಶ್ರೀವೀರ ಕರಿಯಣ್ಣ ದೇವರ ನೇತೃತ್ವದಲ್ಲಿ ಶಿವ ಧನಸ್ಸಿನ ಗಂಗಾಸ್ನಾನ, ತೇರುಮಲ್ಲೇಶ್ವರ ಬ್ರಹ್ಮರಥೋತ್ಸವ, ಶ್ರೀ ಚಂದ್ರ ಮೌಳೇಶ್ವರ, ಶ್ರೀಉಮಾಮಹೇಶ್ವರ ರಥೋತ್ಸವ, 11-ಮದಕರಿ ಯುವಕ ಸಂಘದಿಂದ ಜಂಗಿ ಕುಸ್ತಿ, ರಂಗೋಲಿ ಸ್ಪರ್ಧೆ ನಡೆಯಲಿವೆ.

    12-ಕರ್ಪೂರದಾರತಿ, 13-ಉಯ್ಯಲೋತ್ಸವ, ವಸಂತೋತ್ಸವ, ಓಕಳಿ, 14ರಂದು ಕಂಕಣ ವಿಸರ್ಜನೆ ಇತರ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.

    ಸಂಭ್ರಮದ ಆಚರಣೆ: ದೇವರ ಕೃಪೆಯಿಂದ ವಿವಿ ಸಾಗರ ಜಲಾಶಯದ ನೀರಿನ ಮಟ್ಟ ನೂರು ಅಡಿ ದಾಟಿದ್ದು, ತಾಲೂಕಿನ ಜನರಲ್ಲಿ ಸಂತಸ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುವುದು ಎಂದು ಶಾಸಕಿ ಕೆ.ಪೂರ್ಣಿಮಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts