More

    ಬೇವಿನಳ್ಳಮ್ಮ ದೇವಿ ಜಾತ್ರಾ ಮಹೋತ್ಸವ

    ಹಿರಿಯೂರು: ನಗರದ ಶಕ್ತಿ ದೇವತೆ ಶ್ರೀ ರಾಜಾದುರ್ಗಾ ಪರಮೇಶ್ವರಿ ದೇವಿ ದೇವಾಲಯದಲ್ಲಿ ಅನಾದಿಕಾಲದಿಂದ ನೆಲೆಗೊಂಡಿರುವ ಶ್ರೀ ಬೇವಿನಳ್ಳಮ್ಮ ದೇವಿಯ 37ನೇ ವರ್ಷದ ಜಾತ್ರಾ ಮಹೋತ್ಸವ ಫೆ.8 ರಿಂದ 10ರ ವರೆಗೆ ನಡೆಯಲಿದೆ.

    ಜಾತ್ರೆ ಅಂಗವಾಗಿ ಫೆ.8ರ ಬೆಳಗ್ಗೆ 7ರಿಂದ ಪುಣ್ಯಾಹ, ಗಂಗಾಪ್ರವೇಶ, ನಂದಾದೀಪ ಪೂಜೆ, ಕಳಸ ಸ್ಥಾಪನೆ, ಧ್ವಜಾರೋಹಣ, ಕಂಕಣೋತ್ಸವ, ಮಡ್ಲಕ್ಕಿ, ಉಡಿ ತುಂಬುವುದು, ಅರ್ಚನೆ, ಅಭಿಷೇಕ ಪೂಜೆ, ಸಂಜೆ 7ಕ್ಕೆ ಅಮ್ಮನವರ ಪಲ್ಲಕ್ಕಿ ಉತ್ಸವದ ಸಹಿತ ಅನ್ನಶಾಂತಿ ಮಹಾಮಂಗಳಾರತಿ ಇತರ ಧಾರ್ಮಿಕ ಕಾರ್ಯಗಳು ಜರುಗಲಿವೆ.

    ಫೆ.9ರ ಬೆಳಗ್ಗೆ 7ರಿಂದ ನಗರದ ಸುಮಂಗಲೆಯರಿಂದ ಶ್ರೀ ರಾಜಾದುರ್ಗಾಪರಮೇಶ್ವರಿ ಮತ್ತು ಬೇವಿನಳ್ಳಮ್ಮ ತಾಯಿಗೆ ಅಕ್ಕಿ ತಂಬಿಟ್ಟಿನ ಆರತಿ, ಸಂಜೆ 5ರಿಂದ ಬೇವಿನಳ್ಳಮ್ಮ ದೇವಿ ರಥೋತ್ಸವ ನೆರವೇರಲಿದೆ.

    ಫೆ.10ರ ಮಧ್ಯಾಹ್ನ 12 ಗಂಟೆಯಿಂದ ದೊಡ್ಡ ಎಡೆ ಪೂಜೆ, ಅಲಗುಸೇವೆ, ಭಂಡಾರದ ಪೂಜೆ, ಸಂಜೆ 7ರಿಂದ ಓಕಳಿ ಸೇವೆ ಮತ್ತು ಕಂಕಣ ವಿಸರ್ಜನೆ ನಡೆಯಲಿದೆ ಎಂದು ದೇವಸ್ಥಾನ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts