More

    15 ವರ್ಷದಿಂದ ನನೆಗುದಿಗೆ ಬಿದ್ದ ಕೊಠಡಿಗಳು

    ಕವಿತಾಳ: ಸಮೀಪದ ಹಿರೇಹಣಗಿಯಲ್ಲಿ ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ 2007-08ನೇ ಸಾಲಿನಲ್ಲಿ ನಿರ್ಮಿಸಿದ್ದ ಮೂರು ಕೊಠಡಿಗಳು ಕಳೆದ 15 ವರ್ಷಗಳಿಂದ ಉದ್ಘಾಟನೆಗೊಳ್ಳದೆ ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

    ಅನೈತಿಕ ಚಟುವಟಿಕೆಗಳ ತಾಣ

    ಅಂದಾಜು 12 ಲಕ್ಷ ರೂ.ದಲ್ಲಿ ಗ್ರಾಮದ ಜನತಾ ಕಾಲನಿಯ ಮುಖ್ಯ ರಸ್ತೆ ಪಕ್ಕದಲ್ಲಿ 8ನೇ ತರಗತಿ ನಡೆಸುವ ಉದ್ದೇಶದಿಂದ ಮೂರು ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಕೆಯಾಗಬೇಕಿದ್ದ ಕೊಠಡಿಗಳು ಈಗ ದುರ್ಬಳಕೆಯಾಗುತ್ತಿವೆ. ಶಾಲಾ ಆವರಣದಲ್ಲಿ ಜಾಲಿ ಗಿಡಗಳು ಆವರಿಸಿಕೊಂಡಿದ್ದು, ಕೊಠಡಿಗಳಿಗೆ ಹೋಗಲು ದಾರಿಯಿಲ್ಲದಂತಾಗಿದೆ. ಇಡೀ ಕಟ್ಟಡಗಳು ಬೇಲಿಯಲ್ಲಿ ಮರೆಯಾಗಿರುವುದು ದುರಂತವೇ ಸರಿ.

    ಇದನ್ನೂ ಓದಿ: ಆರ್‌ಎಫ್‌ಒ ಮನೆ, ಕಚೇರಿ ಸೇರಿ 10 ಕಡೆ ದಾಳಿ; ಅಕ್ರಮ ಆಸ್ತಿ ಗಳಿಕೆ ಆರೋಪ; ಲೋಕಾ ಸುಳಿಯಲ್ಲಿ ಮಹಾಂತೇಶ ನ್ಯಾಮತಿ, ಪರಮೇಶ ಪೇಲನವರ

    ಹಿರೇಹಣಗಿ ಗ್ರಾಮ ಪಂಚಾಯಿತಿ ಕೇಂದ್ರವಾಗಿದೆ. ಹಣಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 8ನೇ ತರಗತಿಯನ್ನು ನಡೆಸುವ ಉದ್ದೇಶದಿಂದ ಅಂದಿನ ಜಿಪಂ ಸದಸ್ಯ ಶಿವಬಸನಗೌಡ ಹಣಗಿ ಮತ್ತು ಮಾನ್ವಿ ಶಾಸಕರಾಗಿದ್ದ ಎನ್.ಎಸ್ ಬೋಸರಾಜು ಆಡಳಿತ ಅವಧಿಯಲ್ಲಿ ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಈಗ ಕಟ್ಟಡ ಉಪಯುಕ್ತ ಇಲ್ಲದಿರುವದರಿಂದ ಅನೈತಿಕ ಚಟುವಟಿಗಳು ತಾಣವಾಗಿದೆ.

    ಸಂಜೆಯಾದರೆ ಸಾಕು ಯುವಕರು ಶಾಲಾ ಕೊಠಡಿಯಲ್ಲಿ ಮದ್ಯ ಸೇವನೆಮಾಡಿ ಎಲ್ಲೆಂದರಲ್ಲಿ ಬಾಟಲಿಯನ್ನು ಎಸೆಯುತ್ತಿದ್ದಾರೆ. ಹಗಲೊತ್ತಿನಲ್ಲಿ ಇಸ್ಪೀಟ್ ಆಡುವುದು ಸರ್ವೇ ಸಾಮಾನ್ಯವಾಗಿದೆ. 15 ವರ್ಷದ ಹಿಂದೆ ನಿರ್ಮಿಸ ಲಾದ ಕಟ್ಟಡಗಳು ಬಳಕೆಯಾಗಿರುವುದು ಅಧಿಕಾರಿಗಳ ನಿರ್ಲಕ್ಷೃಕ್ಕೆ ಸಾಕ್ಷಿಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅನೈತಿಕ ಚಟುವಟಿಕೆಗಳನ್ನು ತಡೆದು, ಕಟ್ಟಡವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಗ್ರಾಮಸ್ಥರಾದ ಮಾಂತೇಶ, ರಾಮಣ್ಣ, ಅಮರೇಗೌಡ, ಕೃಷ್ಣ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts