More

    ಪಿಎಫ್‌ಐ-ಎಸ್‌ಡಿಪಿಐ ನಿಷೇಧಕ್ಕೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ

    ಶಿವಮೊಗ್ಗ: ಪಿಎಫ್‌ಐ, ಎಸ್‌ಡಿಪಿಐನಂತಹ ದೇಶ ವಿರೋಧಿ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಹಿಂದು ಜನ ಜಾಗೃತಿ ಸಮಿತಿ ಕಾರ್ಯಕರ್ತರು ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
    ದೇಶದಲ್ಲಿ ಜಿಹಾದಿ ಚಟುವಟಿಕೆಗಳು ಹೆಚ್ಚುತ್ತಿವೆ. ಇದಕ್ಕೆಂದೇ ವಿದೇಶದಿಂದ ಆರ್ಥಿಕ ಬಲ ಸಿಗುತ್ತಿದೆ. ಜಿಹಾದಿ ಮನಸ್ಥಿತಿಯರುವ ಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇವರಿಂದ ಹಿಂದು ಕಾರ್ಯಕರ್ತರ ಹತ್ಯಗೆಳಾಗುತ್ತಿವೆ. ಹೀಗಾಗಿ ಇಂತಹ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.
    ತೆಲಂಗಾಣ ಶಾಸಕ ಟಿ. ರಾಜಾಸಿಂಹ ಅವರಿಗೆ ಕೊಲೆ ಬೆದರಿಕೆಯನ್ನೊಡ್ಡುವವರ ಮೇಲೆ ಕಠೋರ ಕಾರ್ಯಾಚರಣೆ ನಡೆಸಬೇಕು. ರಾಜಾಸಿಂಹ ಅವರನ್ನು ಉದ್ದೇಶಪೂರ್ವಕವಾಗಿ ಬಂಧಿಸಲಾಗಿದೆ. ಈ ಘಟನೆಯಲ್ಲಿ ತೆಲಂಗಾಣ ಸರ್ಕಾರದಿಂದ ನ್ಯಾಯ ಸಿಗುವ ಸಾಧ್ಯತೆ ಕಡಿಮೆಯಿದೆ. ಈ ಪ್ರಕರಣದ ವಿಚಾರಣೆಯನ್ನು ನೆರೆ ರಾಜ್ಯಕ್ಕೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿದರು.
    ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿರುವ ಮುಸ್ಲಿಂ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಾನೂನು ಸುವ್ಯವಸ್ಥೆ ಹಾಳು ಮಾಡುವ ಜಿಹಾದಿ ಮನಸ್ಥಿತಿಯವರ ವಿರುದ್ಧ ಯುಎಪಿಎ ಮೂಲಕ ಪ್ರಕರಣ ದಾಖಲಿಸಬೇಕು. ಹಿಂದುಗಳ ಹತ್ಯೆ ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಪ್ರಕರಣದಲ್ಲಿ ವಿದೇಶಿ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
    ಜಿಲ್ಲಾ ಸಮನ್ವಯಕಾರ ವಿಜಯ ರೇವಣಕರ್, ಪ್ರಮುಖರಾದ ವಿಶ್ವನಾಥ್, ಶ್ರೀಪಾದ, ಮಹೇಶ್, ಗಂಗಾಧರ, ಲಲಿತಾ, ಸುನಿತಾ, ಸೌಮ್ಯಾ ಮುಂತಾದವರು ಪ್ರತಿಭಟನೆಯಲ್ಲಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts