More

    ಗಮನಸೆಳೆದ ಸಂಕ್ರಾಂತಿ ಉತ್ಸವ

    ತಿ.ನರಸೀಪುರ: ತಾಲೂಕಿನ ಕಂಚನಹಳ್ಳಿ ಗ್ರಾಮದ ಪ್ರಜ್ಞಾಗುರುಕುಲ ಐಸಿಎಸ್ಸಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮ ಗಮನಸೆಳೆಯಿತು.

    ಶಾಲೆಯ ಆವರಣದಲ್ಲಿ ಸುಗ್ಗಿಯ ವಾತಾವರಣ ಕಂಡುಬಂದಿತು. ಭತ್ತದ ರಾಶಿ, ರಾಗಿಯ ಕಣಜಕ್ಕೆ ಶ್ರದ್ಧಾಭಕ್ತಿಯಿಂದ ಮುತ್ತೈದೆಯರು ಪೂಜೆ ಸಲ್ಲಿಸಿದರು. ಬಳಿಕ ಗೋವುಗಳಿಗೆ ಪೂಜೆ ಸಲ್ಲಿಸಿ ಸಿಹಿ ಪೊಂಗಲ್, ಬೆಲ್ಲ, ಅಕ್ಕಿ ನೀಡಲಾಯಿತು. ಹಸಿರು ತೋರಣದ ಹುಲ್ಲಿನ ಮನೆಯಲ್ಲಿ ಮಡಕೆಯಲ್ಲಿ ಹಾಲು ಉಕ್ಕಿಸಿ ಪೂಜೆ ಸಲ್ಲಿಸಲಾಯಿತು. ರಾಸುಗಳ ಕಿಚ್ಚು ಹಾಯಿಸುವಿಕೆ ಗಮನಸೆಳೆಯಿತು.

    ಗ್ರಾಮೀಣ ಸೊಗಡಿನ ರೈತರ ಹಬ್ಬ ಎಂದೇ ಖ್ಯಾತಿ ಪಡೆದ ಸಂಕ್ರಾಂತಿಯ ವೈಭವ ಕಳೆಗಟ್ಟಲು ಶಾಲೆಯ ಆಡಳಿತ ಮಂಡಳಿಯವರು ಸಹಕಾರ ನೀಡಿದ್ದರು. ಸಂಕ್ರಾಂತಿ ವೈಭವ ಕಾರ್ಯಕ್ರಮವನ್ನು ಉಪನ್ಯಾಸಕ ಎಂ.ಮಹದೇವ್ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಟ್ರಸ್ಟಿ ಚಿರಾಗ್ ಉದ್ಘಾಟಿಸಿ ಶುಭ ಕೋರಿದರು.

    ವಿದ್ಯಾರ್ಥಿಗಳಿಗೆ ತರಗತಿವಾರು ಸ್ಪರ್ಧೆ ಏರ್ಪಡಿಸಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಆಡಳಿತ ಮಂಡಳಿಯ ಟ್ರಸ್ಟಿ ಭಗತ್, ಪ್ರಾಂಶುಪಾಲ ಮುತ್ತುರಾಜು, ಹೊಂಬೇಗೌಡ, ಸಿಬ್ಬಂದಿ, ಪಾಲಕರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts