More

    ನಿರಂತರ ಅಧ್ಯಯನದಿಂದ ಉನ್ನತ ಸ್ಥಾನ

    ಸಿದ್ದಾಪುರ: ಶಿಕ್ಷಕರು ವೃತಿಯಲ್ಲಿ ಕ್ರೀಯಾಶೀಲರಾಗಿ ಮತ್ತು ಪರಿಣಾಮಕಾರಿಯಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ನಿರಂತರ ಓದು ಮತ್ತು ಸ್ವ ಅಧ್ಯಯನ ಶಿಕ್ಷಕರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಬಿಇಒ ಜಿ.ಐ.ನಾಯ್ಕ ಹೇಳಿದರು.

    ಪಟ್ಟಣದ ಬಾಲಿಕೊಪ್ಪ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

    ಶಿಕ್ಷಕರು ಶಾಲಾ ಕರ್ತವ್ಯವದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.

    ಕ್ಷೇತ್ರಸಮನ್ವಯಾಧಿಕಾರಿ ಚೈತನ್ಯಕುಮಾರ್ ಕೆ.ಎಂ. ಮಾತನಾಡಿ, ಇಂದಿನ ತರಬೇತಿಯ ಪೂರ್ಣ ಪ್ರಯೋಜನ ತರಗತಿ ಕೋಣೆಗಳಲ್ಲಿ ಆಗಬೇಕು. ತಾಲೂಕಿನ ಶೈಕ್ಷಣಿಕ ಪ್ರಗತಿಗೆ ನಿಮ್ಮ ಜತೆ ಇಲಾಖೆ ಸದಾ ಸಹಕಾರಿಯಾಗಿರುತ್ತದೆ ಎಂದು ಹೇಳಿದರು.

    ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಖಾಯಂ ಶಿಕ್ಷಕರ ಜತೆ ಅತಿಥಿ ಶಿಕ್ಷಕರ ಪಾತ್ರವೂ ಬಹಳ ಮುಖ್ಯ. ನಿಮ್ಮ ಸಮಸ್ಯೆಗಳಿಗೂ ಸ್ಪಂದಿಸುವ ಮೂಲಕ ಸಂಘವು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಕೆಲಸಮಾಡುತ್ತದೆ ಎಂದು ಹೇಳಿದರು.

    ಶಿಕ್ಷಕರ ಸಂಘದ ಕಾರ್ಯದರ್ಶಿ ಗುರುರಾಜ ನಾಯ್ಕ, ಬಿಆರ್​ಪಿ ಕೃಷ್ಣಮೂರ್ತಿ, ಮಂಜುನಾಥ ಚಂದಾವರ, ಶಿಕ್ಷಕ ಅರ್ಜುನ ಚವ್ಹಾಣ ಇತರರಿದ್ದರು.

    ಸಂಪನ್ಮೂಲವ್ಯಕ್ತಿಗಳಾದ ಸಿಆರ್​ಪಿಗಳಾದ ಗಣೇಶ ಕೊಡಿಯಾ ಹಾಗೂ ಚಂದ್ರೇಗೌಡ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts