More

    ಇನ್ಮುಂದೆ ನಾಗಶ್ರೀ ವಿದ್ಯಾಸಂಸ್ಥೆಯಲ್ಲಿ ಸಿಬಿಎಸ್‌ಇ ಪಠ್ಯ

    ಚನ್ನರಾಯಪಟ್ಟಣ : 24 ವರ್ಷಗಳಿಂದ ವಿದ್ಯಾಕ್ಷೇತ್ರದಲ್ಲಿ ಶಿಕ್ಷಣ ಸೇವೆ ನೀಡುತ್ತಿರುವ ಪಟ್ಟಣದ ಪ್ರತಿಷ್ಠಿತ ನಾಗಶ್ರೀ ವಿದ್ಯಾಸಂಸ್ಥೆಯೂ 2024ನೇ ಶೈಕ್ಷಣಿಕ ವರ್ಷದಿಂದ ಸಿಬಿಎಸ್‌ಇ ಪಠ್ಯಕ್ರಮ ಅಳವಡಿಕೆಗೆ ಮುಂದಾಗಿದ್ದು, ಈಗಾಗಲೇ ದಾಖಲಾತಿ ಆರಂಭವಾಗಿದೆ ಎಂದು ಹೇಮಾವತಿ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಎಚ್.ಎಸ್.ವಿಜಯ್‌ಕುಮಾರ್ ತಿಳಿಸಿದ್ದಾರೆ.

    ಪಟ್ಟಣದ ಮೈಸೂರು ರಸ್ತೆಯಲ್ಲಿನ ಆದಿಚುಂಚನಗಿರಿ ಕ್ಯಾಂಪಸ್‌ನಲ್ಲಿ ಆರಂಭಗೊಂಡ ಶಾಲೆ, ಕಳೆದ ಮೂರ‌್ನಾಲ್ಕು ವರ್ಷಗಳ ಹಿಂದೆ ಪಟ್ಟಣದ ಸಮೀಪವಿರುವ ಜನಿವಾರ ಗ್ರಾಮದ ಬಳಿ 6 ಎಕರೆ ವಿಶಾಲವಾದ ಜಾಗದಲ್ಲಿ ನೂತನ ಕಟ್ಟಡದೊಂದಿಗೆ ಆರಂಭಗೊಂಡಿದೆ. ಅದರ ಮುಂದುವರಿದ ಭಾಗವಾಗಿ ಪ್ರಸಕ್ತ ಸಾಲಿನಿಂದ ಸಿಬಿಎಸ್‌ಇ ಪಠ್ಯಕ್ರಮ ಅಳವಡಿಕೆಗೆ ಮುಂದಾಗುತ್ತಿದ್ದೇವೆ ಎಂದು ಕಾರ್ಯದರ್ಶಿ ಎಚ್.ಎಸ್.ವಿಜಯ್‌ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    24 ವರ್ಷಗಳಿಂದ ರಾಜ್ಯ ಪಠ್ಯಕ್ರಮದಲ್ಲಿ ಶಿಕ್ಷಣ ನೀಡುತ್ತಿದ್ದ ನಮ್ಮ ಸಂಸ್ಥೆ ಈಗ ಸಿಬಿಎಸ್‌ಇ ಪಠ್ಯಕ್ರಮ ಅಳವಡಿಕೆಗೆ ಮುಂದಾಗಿದೆ. ರಾಜ್ಯ ಸರ್ಕಾರ ಗ್ರಾಮೀಣ ಮಕ್ಕಳ ಅನುಕೂಲಕ್ಕಾಗಿ ಪ್ರತಿ ಪಂಚಾಯಿತಿಗೊಂದು ಸಿಬಿಎಸ್‌ಇ ಶಾಲೆ ತೆರೆಯುವ ಯೋಜನೆಗೆ ನಮ್ಮ ಸಂಸ್ಥೆ ಪೂರಕವಾಗಿ ಆರಂಭಗೊಳ್ಳುತ್ತಿದೆ. ಕೇಂದ್ರೀಯ ಮಂಡಳಿಯ ಎಲ್ಲ ನಿಯಮಾವಳಿಗಳನ್ನು ಪೂರೈಸಿ ಇನ್ನೊಂದು ವರ್ಷದಲ್ಲಿ ಸಂಯೋಜನೆ ಪಡೆಯಲಿದ್ದು, ಈಗಾಗಲೇ ದಾಖಲಾತಿಗೆ ಡಿಡಿಪಿಐ ಕಚೇರಿಯೂ ನಿರಾಪೇಕ್ಷಣ ಪತ್ರ ನೀಡಿದೆ. ಮುಂದಿನ ವರ್ಷ ಮಾಜಿ ಸಚಿವ ದಿ.ಎಚ್.ಸಿ.ಶ್ರೀಕಂಠಯ್ಯ ಅವರಿಗೆ 100 ವಸಂತಗಳು ತುಂಬುವ ಹಿನ್ನೆಲೆಯಲ್ಲಿ ಪಿಯು ಕಾಲೇಜು ಆರಂಭ ಮಾಡುವುದಾಗಿ ತಿಳಿಸಿದರು.

    ನಾಗಶ್ರೀ ಸಂಸ್ಥೆಗೆ ನೂತನ ಆಡಳಿತಾಧಿಕಾರಿ ಪ್ರೊ.ಆಸ್ಟೀನ್ ಮಾತನಾಡಿ, ನಾಗಶ್ರೀ ಶಾಲೆ ನನ್ನ ಕನಸಿನ ಕೂಸು. ಗ್ರಾಮೀಣ ಭಾಗದ ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಉದ್ದೇಶದೊಂದಿಗೆ ಶಾಲೆ ಪ್ರಾರಂಭಿಸಲಾಯಿತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ಸಿಬಿಎಸ್‌ಇ ಅಳವಡಿಕೆಗೆ ಮುಂದಾಗಿದ್ದೇವೆ. ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ವಿದೇಶಗಳಲ್ಲಿ, ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಸಾಧನೆ ಮಾಡಿದ್ದಾರೆ ಎಂದರು.

    ನಾಗಶ್ರೀ ಸಂಸ್ಥೆಗೆ ಶೈಕ್ಷಣಿಕ ನಿರ್ದೇಶಕಿ ಶೈಲಿನಿ ಆಸ್ಟೀನ್ ಮಾತನಾಡಿ, ಬೆಂಗಳೂರಿನಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ತಾವು ಕಲಿತಿದ್ದನ್ನು ಇಲ್ಲಿ ಸಾಕಾರಗೊಳಿಸುವ ನಿಟ್ಟಿನಲ್ಲಿ, ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಉದ್ದೇಶ ಹೊಂದಿದ್ದೇವೆ. ಇಲ್ಲಿನ ಸುಂದರ ಕಟ್ಟಡ, ವಿಶಾಲವಾದ ಮೈದಾನ, ಕಲಿಕೆಗೆ ಉತ್ತಮ ವಾತಾವರಣ ನಮ್ಮನ್ನು ಆಕರ್ಷಿಸುತ್ತದೆ. ವಿಭಿನ್ನ ರೀತಿಯ ಆಲೋಚನೆ, ಶಿಕ್ಷಣ ಪದ್ಧತಿ ಅಳವಡಿಕೆ ಮುಂದೆ ಹಂತ, ಹಂತವಾಗಿ ಪಾಲಕರಿಗೆ ತಿಳಿಯುತ್ತದೆ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದರು.

    ಇದೇ ಸಂದರ್ಭದಲ್ಲಿ ಪ್ರಾಂಶುಪಾಲ ಶಿವರಾಂ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts