More

    ಭೂಲೋಕದಲ್ಲಿ ಯಮ, ಚಿತ್ರಗುಪ್ತರು; ಗಮನ ಸೆಳೆದ ಶಹರ ಠಾಣೆ ಪೊಲೀಸರ ಹೆಲ್ಮೆಟ್ ಜಾಗೃತಿ

    ರಾಣೆಬೆನ್ನೂರ: ಇಲ್ಲಿಯ ಶಹರ ಪೊಲೀಸ್ ಠಾಣೆ ವತಿಯಿಂದ ಸೋಮವಾರ ನಗರದಲ್ಲಿ ಭೂಲೋಕದಲ್ಲಿ ಯಮ ಎನ್ನುವ ಸನ್ನಿವೇಶದ ಮೂಲಕ ಹೆಲ್ಮೆಟ್ ಕಡ್ಡಾಯ ಜಾಗೃತಿ ಮೂಡಿಸಿರುವುದು ಎಲ್ಲರ ಗಮನ ಸೆಳೆಯಿತು.
    ನಗರದ ಬಸ್ ನಿಲ್ದಾಣದ ವೃತ್ತದಲ್ಲಿ ಯಮ, ಚಿತ್ರಗುಪ್ತ ಹಾಗೂ ಯಮಕಿಂಕರ್‌ನ ಪಾತ್ರದಲ್ಲಿ ಪೊಲೀಸರು ವೇಷ ಧರಿಸಿಕೊಂಡು ನಿಂತು ಹೆಲ್ಮೆಟ್ ಧರಿಸದೆ ಬರುವ ವಾಹನ ಸವಾರರ ಕುತ್ತಿಗೆಗೆ ಹಗ್ಗ ಹಾಕಿ ಎಳೆಯುವ ಮೂಲಕ ಯಮಲೋಕದ ದರ್ಶನ ಮಾಡಿಸಿದರು.
    ಅಲ್ಲದೆ ಹೆಲ್ಮೆಟ್ ಧರಿಸದ ವಾಹನ ಸವಾರರಿಗೆ ದಂಡ ವಿಧಿಸಿ ಕಳುಹಿಸಲಾಯಿತು. ಜತೆಗೆ ಹೆಲ್ಮೆಟ್ ಧರಿಸಿ ಬಂದ ಬೈಕ್ ಸವಾರರಿಗೆ ಶಹರ ಠಾಣೆ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಗುಲಾಬಿ ಹೂವು ನೀಡಿ ಸ್ವಾಗತಿಸಿದರು. ಹೆಲ್ಮೆಟ್ ಇಲ್ಲದ ಸಂಚಾರ ಸಾವಿಗೆ ಕಾರಣವಾಗಲಿದೆ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಜಾಗೃತಿ ಮೂಡಿಸಿದರು.
    ಯಮಧರ್ಮನ ರೂಪದಲ್ಲಿ ಹೆಡ್ ಕಾನ್ಸಸ್ಟೇಬಲ್ ವಿ.ಜಿ. ಹಿರೇಮಠ, ಚಿತ್ರಗುಪ್ತನ ಪಾತ್ರದಲ್ಲಿ ವಿಠ್ಠಲ ಡಿ.ಬಿ., ಯಮಕಿಂಕರ್‌ನ ಪಾತ್ರದಲ್ಲಿ ಬಾಲಕ ಗೋಕುಲ ಕೃಷ್ಣರೆಡ್ಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಸಿಪಿಐ ಶಂಕರ ಕೆ.ಎಸ್., ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ನೇತೃತ್ವ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts