More

    ನರಕ ಸದೃಶವಾಗುತ್ತಿರುವ ಬಿಮ್ಸ!

    ಬೆಳಗಾವಿ: ಜಿಲ್ಲಾಸ್ಪತ್ರೆ (ಬಿಮ್ಸ್)ಯು ಕರೊನಾ ಸೋಂಕಿತರ ಪಾಲಿಗೆ ನರಕ ಸದೃಶವಾಗಿ ಪರಿಣಮಿಸಿದೆ. ಆಸ್ಪತ್ರೆ ಸಿಬ್ಬಂದಿ, ಕರೊನಾ ಸೋಂಕಿತ ವೃದ್ಧೆಯೊಬ್ಬರಿಗೆ ಆಹಾರ ನೀಡದೆ ಹಸಿವಿನಿಂದ ನರಳುವಂತೆ ಮಾಡಿದ್ದಾರೆ ಎಂದು ಸಂಬಂಧಿಗಳು ಆರೋಪಿಸಿದ್ದಾರೆ.

    ಬೈಲಹೊಂಗಲದ ಸೋಂಕಿತ ವೃದ್ಧೆಯೋರ್ವಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಆಕೆ ಹಸಿವಿನಿಂದ ಬಳಲುತ್ತಿದ್ದರೂ ಆಸ್ಪತ್ರೆ ಸಿಬ್ಬಂದಿ ಗಮನ ವಹಿಸಿರಲಿಲ್ಲ. ಆಸ್ಪತ್ರೆಯ ಅವ್ಯವಸ್ಥೆ, ಸಮಸ್ಯೆ ಕುರಿತು ಮಗಳಿಗೆ ಫೋನ್ ಮಾಡಿ ವೃದ್ಧೆ ಅಳಲು ತೋಡಿಕೊಂಡಿದ್ದಾಳೆ.

    ಇತ್ತ ವೃದ್ಧೆಯ ಸಂಬಂಧಿಕರೂ ಕ್ವಾರಂಟೈನ್‌ನಲ್ಲಿರುವುದರಿಂದ ಸಮಸ್ಯೆಯಾಗಿದೆ. ಊಟ ನೀಡುವ ವಾಹನ ಬರುತ್ತದೆ. ಆದರೆ, ಸೋಂಕಿತರ ಬಳಿ ಊಟ ಬರುವುದಿಲ್ಲ. ಎಲ್ಲೋ ನಿಂತು ಊಟ ತೆಗೆದುಕೊಂಡು ಹೋಗಿ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಇದರಿಂದ ಸೋಂಕಿತ ವೃದ್ಧರು ಅಸಹಾಯಕರಾಗಿದ್ದಾರೆ ಎಂದು ವೃದ್ಧೆಯ ಸಂಬಂಧಿಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳು ಬಾಯಿ ಬಿಟ್ಟು ಮಾತ್ರೆ ನೀಡಿ, ಇಂಜಕ್ಷನ್ ನೀಡಿ ಎಂದು ಹೇಳಿಸಿಕೊಳ್ಳುವ ಮಟ್ಟಿಗೆ ಆಸ್ಪತ್ರೆ ಸಿಬ್ಬಂದಿ ಅಲಕ್ಷೃವಹಿಸುತ್ತಿದ್ದಾರೆ ಎಂದು ರೋಗಿಯ ಸಂಬಂಧಿಕರು ದೂರಿದ್ದಾರೆ.

    ಚಿಕಿತ್ಸೆಗಾಗಿ ಪರದಾಟ: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧನೊಬ್ಬ ಚಿಕಿತ್ಸೆಗಾಗಿ ಪರದಾಡಿದ ಘಟನೆ ನಡೆದಿದೆ.

    ಗಾಂಧಿನಗರದ ವೃದ್ಧನಿಗೆ ಶನಿವಾರ ರಾತ್ರಿ ಉಸಿರಾಟ ಸಮಸ್ಯೆ ಆಗಿದೆ. ಈ ವೇಳೆ ರೋಗಿಯ ಪುತ್ರಿ ಸ್ಕೂಟಿ ಮೇಲೆಯೇ ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ಆಸ್ಪತ್ರೆಯ ಸಿಬ್ಬಂದಿ ಮಾತ್ರ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವ ಫಾರ್ಮ್ ತುಂಬಿಕೊಂಡು ಬನ್ನಿ ಎಂದು ವೃದ್ಧನನ್ನು ಆಸ್ಪತ್ರೆ ಒಳಗೆ ಸೇರಿಸಿಕೊಂಡಿಲ್ಲ. ಸ್ಕೂಟಿ ಮೇಲೆಯೇ ಕೂತು ಕೂತು ಸುಸ್ತಾದರೂ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆಗೆ ದಾಖಲಿಸಿಕೊಳ್ಳಲಿಲ್ಲ ಎಂದು ವೃದ್ಧೆಯ ಪುತ್ರಿ ಆರೋಪಿಸಿದ್ದಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts