More

    ಸುರಂಗ ಮಾರ್ಗದಲ್ಲಿ ನಡೆಯಿತು ದರೋಡೆ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ!

    ನವದೆಹಲಿ: ಸುರಂಗ ಮಾರ್ಗದ ರಸ್ತೆಯಲ್ಲಿ ಚಲಿಸುತ್ತಿದ್ದ ಡೆಲಿವರಿ ಏಜೆಂಟ್​ಗೆ ಬಂದೂಕು ತೋರಿಸಿದ ಅಪರಿಚಿತ ವ್ಯಕ್ತಿಗಳು, ಅವರಿಂದ ಬರೋಬ್ಬರಿ 2 ಲಕ್ಷ ರೂ. ಕಸಿದು ಸ್ಥಳದಿಂದ ಪರಾರಿಯಾದ ಘಟನೆ ದೆಹಲಿಯಲ್ಲಿ ನಡೆದಿದೆ.

    ಇದನ್ನೂ ಓದಿ: ವಿದ್ಯಾರ್ಥಿಗೆ ಮನಬಂದಂತೆ ಥಳಿಸಿ ಪ್ರಾಣ ತೆಗೆದ ಶಿಕ್ಷಕರು: ತಾಯಿ-ಸಹೋದರಿಯ ಆರೋಪ

    ಘಟನೆಯ ವಿವರ: ಶನಿವಾರ ನವದೆಹಲಿಯ ಪ್ರಗತಿ ಮೈದಾನದ ಸುರಂಗದೊಳಗೆ ನಾಲ್ವರು ಅಪರಿಚಿತ ವ್ಯಕ್ತಿಗಳು ಬಂದೂಕು ತೋರಿಸಿ ಡೆಲಿವರಿ ಏಜೆಂಟ್​ನಿಂದ 2 ಲಕ್ಷ ರೂ. ಕಳ್ಳತನ(Robbery) ಮಾಡಿದ್ದಾರೆ. ಖದೀಮರ ಕೈಚಳಕ ಸಿಸಿಟಿವಿಯಲ್ಲಿ(CCTV) ಸೆರೆಯಾಗಿದ್ದು, ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಈ ವಿಡಿಯೋ ಭಾರಿ ವೈರಲ್(Viral) ಆದ ಹಿನ್ನೆಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Aravind Kejrival) ಪ್ರತಿಕ್ರಿಯಿಸಿದ್ದು, ಈ ಘಟನೆ ನೋಡಿದ ಬಳಿಕ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ರಾಜೀನಾಮೆ ನೀಡಬೇಕು ಎಂದು ಹೇಳಿದರು.

    ದೆಹಲಿಯ ಜನರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸಲು ಮುಂದಾಗುವರಿಗೆ ಅನುಕೂಲ ಮಾಡಿ ಕೊಡಿ. ದೆಹಲಿಯನ್ನು ಸುರಕ್ಷಿತವಾಗಿಡಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ಅದನ್ನು ನಮಗೆ ಒಪ್ಪಿಸಿ. ನಗರದ ನಾಗರಿಕರಿಗೆ ರಕ್ಷಣೆಯನ್ನು ಹೇಗೆ ಒದಗಿಸುವುದು ಎಂಬುದನ್ನು ನಾವು ನಿಮಗೆ ತೋರಿಸುತ್ತೇವೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಚಾಕೊಲೇಟ್ ಕೊಡುವುದಾಗಿ ನಂಬಿಸಿ ಮಕ್ಕಳ ಕಳ್ಳತನಕ್ಕೆ ಯತ್ನ; ಯುವಕ ಪೊಲೀಸ್ ಸುಪರ್ಧಿಗೆ

    ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್(IPC Section) 397 (ದರೋಡೆ, ಅಥವಾ ಸಾವು ಅಥವಾ ಘೋರವಾದ ಗಾಯವನ್ನು ಉಂಟುಮಾಡುವ ಪ್ರಯತ್ನದೊಂದಿಗೆ ಡಕಾಯಿತಿ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ದೆಹಲಿ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ,(ಏಜೆನ್ಸೀಸ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts