More

    ಭಾಷಣದಲ್ಲಿ ಮಹಾತ್ಮ ಗಾಂಧಿ ಬಗ್ಗೆ ಏನೂ ಹೇಳೇ ಇಲ್ಲ: ಪಕ್ಷದ ಶೋಕಾಸ್ ನೋಟಿಸ್​ಗೆ ಸಂಸದ ಅನಂತ ಕುಮಾರ್ ಹೆಗಡೆ ಉತ್ತರ

    ನವದೆಹಲಿ: ಬೆಂಗಳೂರಿನಲ್ಲಿ ಶನಿವಾರ ವೀರ ಸಾವರ್ಕರ್​ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದಲ್ಲಿ ಮಹಾತ್ಮ ಗಾಂಧಿ ಅವರ ಹೆಸರನ್ನು ಎಲ್ಲೂ ಹೇಳಿಯೇ ಇಲ್ಲ. ಅವರ ಬಗ್ಗೆ ಏನೂ ಹೇಳಿಲ್ಲ ಎಂದು ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಸ್ಪಷ್ಟೀಕರಣ ನೀಡಿದ್ದು, ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ.

    ಅನಂತ ಕುಮಾರ್ ಅವರ ಭಾಷಣದ ಅಂಶಗಳು ಸೋಮವಾರ ರಾಷ್ಟ್ರಮಟ್ಟದಲ್ಲಿ ವಿವಾದಕ್ಕೀಡಾಗಿದ್ದು, ಈ ಸಂಬಂಧ ಶೋಕಾಸ್ ನೋಟಿಸ್ ಜಾರಿಗೊಳಿಸಿರುವುದಾಗಿ ಪಕ್ಷದ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದರು.ಅದಕ್ಕೆ ಉತ್ತರ ನೀಡಿರುವ ಅನಂತ ಕುಮಾರ್ ಹೆಗಡೆ, ನನ್ನ ಭಾಷಣದುದ್ದಕ್ಕೂ ಎಲ್ಲಿಯೂ ಮಹಾತ್ಮ ಗಾಂಧಿ ಅವರ ಹೆಸರನ್ನಾಗಲೀ, ಅವರನ್ನು ಅವಹೇಳನ ಮಾಡುವುದನ್ನಾಗಲೀ ಮಾಡಿಲ್ಲ. ಸುದ್ದಿ ಮಾಧ್ಯಮಗಳು ಭಾಷಣದ ವರದಿಯನ್ನು ತಪ್ಪಾಗಿ ಬರೆದಿವೆ. ಗಾಂಧಿ ನೇತೃತ್ವದ ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದಂತೆ ನೌಟಂಕಿ ಅಥವಾ ಡ್ರಾಮಾ, ನಾಟಕ ಎಂಬ ಪದ ಬಳಕೆ ನನ್ನ ಭಾಷಣದಲ್ಲಿ ಆಗಿಲ್ಲ.

    ಅನಂತ ಕುಮಾರ್ ಹೆಗಡೆ ಅವರು ಶೋಕಾಸ್ ನೋಟಿಸ್​ಗೆ ಉತ್ತರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಶಿಸ್ತು ಪಾಲನಾ ಸಮಿತಿಗೆ ಸಲ್ಲಿಸಿದ್ದಾರೆ. ಭಾಷಣದ ವಿಷಯವನ್ನು ಗಮನಿಸಿದ ಬಳಿಕ ಪಕ್ಷ ಮುಂದಿನ ತೀರ್ಮಾನವನ್ನು ಕೈಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಬಿಜೆಪಿಯ ಹಿರಿಯ ನಾಯಕರೊಬ್ಬರ ಹೇಳಿಕೆಯನ್ನು ಪಿಟಿಐ ಉಲ್ಲೇಖಿಸಿದ್ದು, ಪಕ್ಷದೊಳಗೆ ಒಂದು ದೃಷ್ಟಿಕೋನವಿದೆ. ಅದನ್ನು ಮಾಜಿ ಕೇಂದ್ರ ಮಂತ್ರಿ ಕೆಟ್ಟ ಅಭಿರುಚಿಯೊಂದಿಗೆ ಪ್ರಸ್ತುತ ಪಡಿಸಿರಲೂ ಬಹುದು. ಅದನ್ನು ಕೆಲವು ಮಾಧ್ಯಮಗಳು ತಿರುಚಿ ವರದಿ ಮಾಡಿವೆ ಎಂಬ ಅಂಶ ಆ ಹೇಳಿಕೆಯಲ್ಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts