More

    ಜಮೀರ್ ರೇಷನ್ ಹಂಚಿಕೆ ವೇಳೆ ಜನಜಾತ್ರೆ; ಮಾಸ್ಕು, ದೈಹಿಕ ಅಂತರ ಮಸುಕು

    ಬೆಂಗಳೂರು: ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಅವರು ಹೊಸ ಹೊಸ ಕಾರಣಗಳಿಗಾಗಿ ವಿವಾದಕ್ಕೆ ಒಳಗಾಗುತ್ತಿರುತ್ತಾರೆ.

    ಅವರು ತಮ್ಮ ಕ್ಷೇತ್ರದ ಅಂದಾಜು 50 ಸಾವಿರ ಜನರಿಗೆ ಶನಿವಾರ ಆಹಾರದ ಕಿಟ್‌ಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಲ್ಲಿ ಸಾವಿರಾರು ಜನ ಸೇರಿದ್ದರು.

    ಇದನ್ನೂ ಓದಿ: ಆಪರೇಷನ್​ ಜ್ಯಾಕ್​ಬೂಟ್​ ಭಾರಿ ಹಿನ್ನಡೆ: ಉಗ್ರನ ಹೇಳಿಕೆ

    ಆದರೆ ಅಲ್ಲಿ ದೈಹಿಕ ಅಂತರ ಕಾಯ್ದುಕೊಂಡಿದ್ದಾಗಲಿ, ಮುಖಕ್ಕೆ ಮಾಸ್ಕ್ ಹಾಕಿದ್ದಾಗಲಿ ಕಂಡುಬರಲಿಲ್ಲ. ಜನ ಗುಂಪುಗುಂಪಾಗಿ ಆಗಮಿಸಿ, ರೇಷನ್ ತೆಗೆದುಕೊಂಡು ಹೋಗುತ್ತಿದ್ದುದು ಕಂಡುಬಂತು. ಪಾದರಾಯನಪುರ ಘಟನೆಯ ನಂತರವೂ ಜನ ಪಾಠ ಕಲಿತಿಲ್ಲ ಎಂಬುದು ಇಲ್ಲಿ ಮತ್ತೊಮ್ಮೆ ಸಾಬೀತಾಯಿತು.

    ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಪಾಲ್ಗೊಂಡಿದ್ದರು. ನಂತರ ಅವರು ಸುದ್ದಿಗಾರರ ಜತೆ ಮಾತನಾಡಿ, ಕರೊನಾ ಪ್ರಕರಣಗಳು ಹೆಚ್ಚಳಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ. ಕರೊನಾ ನಿಯಂತ್ರಣಕ್ಕೆ ಬಾರದೆ ಲಾಕ್‌ಡೌನ್ ಸಂಪೂರ್ಣ ಸಡಿಲಿಕೆ ಮಾಡುವುದು ಸರಿಯಲ್ಲ. ಇದರಿಂದಾಗಿಯೇ ಪ್ರಕರಣಗಳು ಹೆಚ್ಚಾಗುತ್ತಿವೆ. ದೈಹಿಕ ಅಂತರದ ಬಗ್ಗೆ ಇನ್ನೂ ಜನರಲ್ಲಿ ಅರಿವು ಬಂದಿಲ್ಲ’ ಎಂದು ಹೇಳಿದರು.

    ಪಿಯುಸಿವರೆಗಿನ ಪಾಠ ಇನ್ಮುಂದೆ ಮನೆಯಲ್ಲಿಯೇ ಉಚಿತವಾಗಿ ಕಲಿಯಬಹುದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts