More

    ಕದ್ರಾ ಅಣೆಕಟ್ಟೆಯಿಂದ ನೀರು ಹೊರಕ್ಕೆ

    ಕಾರವಾರ: ಜಿಲ್ಲೆಯ ಮಲೆನಾಡು ಈಗ ಮಳೆನಾಡಾಗಿ ಬದಲಾಗಿದೆ. ಕೆಲ ದಿನಗಳಿಂದ ಘಟ್ಟದ ಮೇಲೆ ಉತ್ತಮ ಮಳೆಯಾಗುತ್ತಿವೆ. ಕದ್ರಾ ಅಣೆಕಟ್ಟೆಗೆ ಭಾರಿ ಪ್ರಮಾಣದ ನೀರು ಹೊರ ಬರುತ್ತಿದ್ದು, ಎರಡು ಕ್ರಸ್ಟಲ್‌ ಗೇಟ್‌ಗಳನ್ನು ತೆರೆದು ಅಲ್ಪ ಪ್ರಮಾಣದ ನೀರನ್ನು ಹೊರ ಬಿಡಲಾಗಿದೆ.
    ಅಣಶಿ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಕದ್ರಾ ಅಣೆಕಟ್ಟೆಗೆ ಶುಕ್ರವಾರ ಸಾಯಂಕಾಲ 6 ಗಂಟೆಯ ಹೊತ್ತಿಗೆ 31,470 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಣೆಕಟ್ಟೆಯ ಗರಿಷ್ಠ ಸಂಗ್ರಹಣಾ ಸಾಮರ್ಥ್ಯ 34.50 ಮೀಟರ್ ಇದ್ದರೂ. ಅಣೆಕಟ್ಟೆಯ ಕೆಳಭಾಗದಲ್ಲಿ ನೆರೆ ಪರಿಸ್ಥಿತಿ ಉಂಟಾಗುವುದನ್ನು ತಡೆಗಟ್ಟಲು ಗರಿಷ್ಠ 31 ಮೀವರೆಗೆ ನೀರು ಸಂಗ್ರಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

    ಅಣೆಕಟ್ಟೆಯ ಇಂದಿನ ನೀರಿನ ಮಟ್ಟ 30.90 ಮೀಟರ್ ಆಗಿರುವುದರಿಂದ ಶುಕ್ರವಾರ ಸಾಯಂಕಾಲ 6 ಗಂಟೆಯ ಸುಮಾರಿಗೆ 11 ರಲ್ಲಿ ಎರಡು ಗೇಟ್‌ಗಳನ್ನು ಅಲ್ಪ ಪ್ರಮಾಣದಲ್ಲಿ ಎತ್ತಿ 5,296 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ವಿದ್ಯುತ್ ಉತ್ಪಾದನೆ ಮಾಡಿ 21,416 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಒಟ್ಟಾರೆ ಕಾಳಿ ನದಿಗೆ 26,712 ಕ್ಯೂಸೆಕ್ ನೀರು ಹೊರ ಹೋಗುತ್ತಿದೆ.

    ಇದನ್ನೂ ಓದಿ:ಮುಂಡಗೋಡ ತಾಲೂಕಿನ 3 ಶಾಲೆಗಳಿಗೆ ರಜೆ ಘೋಷಣೆ

    ಕೆಪಿಸಿ ಪ್ರವಾಹದ ಮೊದಲ ಮುನ್ಸೂಚನೆ ನೀಡಿದೆ. ಅದ್ರಾ ಅಣೆಕಟ್ಟೆಯಿಂದ ನೀರು ಹೊರ ಬಿಟ್ಟಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದ್ದು, ಜನರು ಮುನ್ನೆಚ್ಚರಿಕೆಯಿಂದ ಇರಬೇಕು ಎಂದು ಕೆಪಿಸಿ ಪ್ರಕಟಣೆ ಇಳಿಸಿದೆ. ಸೂಪಾ ಜಲಾಶಯಕ್ಕೆ 35,712 ಕ್ಯೂಸೆಕ್, ಕೊಡಸಳ್ಳಿಗೆ 11,228 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
    ಮಳೆಯ ಪ್ರಮಾಣ
    ಶುಕ್ರವಾರ ಬೆಳಗಿನ ವರದಿಯಂತೆ ಅಂಕೋಲಾ-61.5, ಭಟ್ಕಳ-6, ದಾಂಡೇಲಿ-62, ಹಳಿಯಾಳ-52.2, ಹೊನ್ನಾವರ-66.9, ಜೊಯಿಡಾ-69, ಕಾರವಾರ-58.3, ಕುಮಟಾ-67.9, ಮುಂಡಗೋಡ-21.6, ಸಿದ್ದಾಪುರ-98.2, ಶಿರಸಿ-82.5, ಯಲ್ಲಾಪುರ-97.6 ಮಿಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಜು.22 ಹಾಗೂ 23 ರಂದು ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಜು. 24 ಕ್ಕೆ ಮಳೆ ಹೆಚ್ಚಲಿದ್ದು, ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಮಳೆಯಿಂದ ಹೊನ್ನಾವರದ 2 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹೊನ್ನಾವರ, ಶಿರಸಿಯಲ್ಲಿ ತಲಾ-3, ಹಳಿಯಾಳ, ಕುಮಟಾ, ಸಿದ್ದಾಪುರ, ಯಲ್ಲಾಪುರದ ತಲಾ 1 ಮನೆಗಳಿಗೆ ಅಲ್ಪ ಹಾನಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts