ಕೂದಲು ಉದರುವಿಕೆ ತಡೆಗೆ ದುಬಾರಿ ಸಿರಮ್..ಹೇರ್​ ಮಾಸ್ಕ್​ ಪರಿಹಾರವಲ್ಲ; ದೇಹದಲ್ಲಿ ಇವುಗಳ ಕೊರತೆಯೇ ಅಸಲಿ ಕಾರಣ.. Hair fall Reasons

How to stop hair fall naturally
How to stop hair fall naturally
Published on

ಪ್ರಮುಖ ಮುಖ್ಯಾಂಶಗಳು

  • ದುಬಾರಿ ಸೀರಮ್ ಮತ್ತು ಎಣ್ಣೆಗಳಿಂದ ಕೂದಲು ಉದುರುವುದು ನಿಲ್ಲುವುದಿಲ್ಲ ಎಂದ ಪೌಷ್ಟಿಕತಜ್ಞೆ
  • ಫೆರಿಟಿನ್, ಪ್ರೊಟೀನ್, ಜಿಂಕ್ ಮತ್ತು ಕಾಪರ್ ಕೊರತೆಯೇ ಕೂದಲು ಉದುರಲು ಅಸಲಿ ಕಾರಣ.
  • ದೇಹದ ಪ್ರಮುಖ ಅಂಗಗಳನ್ನು ರಕ್ಷಿಸಲು ನೆತ್ತಿಗೆ ಪೋಷಕಾಂಶಗಳ ಪೂರೈಕೆ ಸ್ಥಗಿತಗೊಳ್ಳುತ್ತದೆ.
How to stop hair fall naturally:

ಆಧುನಿಕ ಕಾಲಘಟ್ಟದಲ್ಲಿ ತಲೆ ಕೂದಲಿನ ಆರೈಕೆ ಮಾಡಿಕೊಳ್ಳುವುದು ಕಷ್ಟದ ಕೆಲಸವಾಗಿ ಮಾರ್ಪಟ್ಟಿದೆ. ಹೀಗಾಗಿ ಹಲವರು ಹೇರ್​ ಸಿರಮ್​ ಹಾಗೂ ದುಬಾರಿ ಶಾಂಪುಗಳನ್ನು ಕೊಂಡುಕೊಳ್ಳುತ್ತಾರೆ.

ಹಣವನ್ನು ಖರ್ಚು ಮಾಡುತ್ತಾರೆ.

ಆದರೆ, ನಿಜಕ್ಕೂ ಕೂದಲಿನ ಆರೋಗ್ಯಕ್ಕೆ ಬೇಕಾಗಿರುವುದು ಸರಿಯಾದ ಆಹಾರ.

ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಸಿರಮ್, ಶಾಂಪು, ಮಾಸ್ಕ್​ ಖರೀದಿಸಲು ಸುರಿಯುವ ಹಣವನ್ನು ಪೌಷ್ಟಿಕ ಆಹಾರ ತಿನ್ನಲು ಬಳಕೆ ಮಾಡಬೇಕು ಎಂದು ಪೌಷ್ಟಿಕತಜ್ಞೆ ಲೊವ್ನೀತ್ ಬಾತ್ರಾ ​ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಕೂದಲು ಉದುರುವಿಕೆಗೆ ಫೆರಿಟಿನ್, ಪ್ರೋಟೀನ್​, ಕಾಪರ್​ ಹಾಗೂ ಸತು ಕೊರತೆ ಇರುವುದೇ ಕಾರಣ.
ಹೃದಯ ಮತ್ತು ಶ್ವಾಸಕೋಶದಂತಹ ಪ್ರಮುಖ ಅಂಗಗಳನ್ನು ರಕ್ಷಿಸಲು ದೇಹವು ನೆತ್ತಿಗೆ ಪೋಷಕಾಂಶಗಳು ಪೂರೈಕೆಯಾಗುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ. ಹೀಗಾಗಿ ಬಾಹ್ಯದಿಂದ ನೀವು ನಿಮ್ಮ ಕೂದಲಿಗೆ ಬಳಿದುಕೊಳ್ಳುವ ಎಣ್ಣೆ, ಮಾಸ್ಕ್​​, ವಿಟಮಿನ್​ಗಳು ಎಂದಿಗೂ ನಿಮ್ಮ ಕೂದಲಿನ ಆರೋಗ್ಯವನ್ನು ಸರಿಪಡಿಸೋದಿಲ್ಲ ಬದಲಾಗಿ ಈ ಆಹಾರಗಳನ್ನು ತಿನ್ನಬೇಕು ಎಂದು ಲಿಸ್ಟ್ ಹಂಚಿಕೊಂಡಿದ್ದಾರೆ.

ಯಾವೆಲ್ಲ ಕೊರತೆಗೆ ಏನೆಲ್ಲ ತಿನ್ಬೇಕು??

ದೇಹದಲ್ಲಿ ಫೆರಿಟಿನ್​ ಅಂದರೆ ಕಬ್ಬಿಣಾಂಶ ಕಡಿಮೆಯಾದಗಾ...ನಿಮ್ಮ ದೇಹದಲ್ಲಿರುವ ಪ್ರಮುಖ ಅಂಗಗಳನ್ನು ರಕ್ಷಣೆ ಮಾಡಲು ನಿಮ್ಮ ನೆತ್ತಿಯಿಂದ ಆಮ್ಲಜನಕವನ್ನು ದೇಹ ಎಳೆದುಕೊಳ್ಳುತ್ತದೆ. ಹೀಗಾಗಿ ಹೆಚ್ಚು ಕಬ್ಬಿಣಾಂಶ ಇರುವ ಅಳವಿ ಬೀಜಗಳು, ಅಮರಾಂತ್ ಎಲೆಗಳು, ಸಜ್ಜೆ ಮತ್ತು ಎಳ್ಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ.
ಸತು ಕೊರತೆ
ದೇಹದಲ್ಲಿರುವ ಸತು ಇದು ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೂದಲಿನ ಅಂಗಾಂಶ ಹಾಗೂ ಕೋಶಗಳ ವಿಭಜನೆಗೆ ಹಾಗೆಯೇ ಕೂದಲಿನ ಕಿರುಚೀಲ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ಇವುಗಳ ಪೋಷಣೆಗೆ ಜಿಂಕ್ ಹೆಚ್ಚಿರುವ ಕುಂಬಳಕಾಯಿ ಬೀಜಗಳು, ಕಲ್ಲಂಗಡಿ ಬೀಜಗಳು, ಕಡಲೆ ಮತ್ತು ಗೋಡಂಬಿ ಬೀಜಗಳನ್ನು ತಿನ್ನಬೇಕು ಎಂದಿದ್ದಾರೆ ಲೊವ್ನೀತ್ ಬಾತ್ರಾ.

ಕಾಪರ್ ಅಂಶದ ಕೊರತೆ

ಕೂದಲನ್ನು ಬಲಗೊಳಿಸಲು ಈ ಅಂಶವು ಬೆಂಬಲ ನೀಡುತ್ತದೆ. ಇಷ್ಟೇ ಅಲ್ಲದೇ ಹದಿಹರೆಯದಲ್ಲೇ ಕಾಡುವ ಬಿಳಿ ಕೂದಲನ್ನು ಹೋಗಲಾಡಿಸಲು ಇವು ಸಹಕಾರಿ. ಹೀಗಾಗಿ ನಿಮ್ಮ ಆಹಾರದ ಭಾಗವಾಗಿ ಕಪ್ಪು ಎಳ್ಳು, ಬಾದಾಮಿ, ಗಸಗಸೆ, ರಾಜ್ಮಾ, ಬಾದಾಮಿ ತಿನ್ನಬೇಕು ಎಂದಿದ್ದಾರೆ ವೈದ್ಯರು.

ಪ್ರೋಟಿನ್​ ಕೊರತೆ

ಪ್ರೋಟಿನ್​ ಕೊರತೆ ಉಂಟಾದಾಗ ಕೂದಲು ಉದರುವಿಕೆ ಹೆಚ್ಚಾಗುರತ್ತದೆ. ಹೀಗಾಗಿ ಪನೀರ್, ಹೆಸರು ಕಾಳು ಹಾಗೂ ಮೊಟ್ಟೆ ಸೇರಿದಂತೆ ಪ್ರೋಟಿನ್​ ಭರಿತ ಆಹಾರವನ್ನು ತಿನ್ನಲು ರೂಢಿಸಿಕೊಳ್ಳಿ ಎನ್ನುತ್ತಾರೆ ಪೌಷ್ಟಿಕತಜ್ಞೆ ಲೊವ್ನೀತ್ ಬಾತ್ರಾ .

ಇದು ನೆನಪಿಡಿ

ದುಬಾರಿ ಸಿರಮ್​, ರಾಸಾಯನಿಕ ವಸ್ತುಗಳು, ಹೇರ್​ ಮಾಸ್ಕ್​​ಗಳನ್ನು ಖರೀದಿ ಮಾಡುವುದುನ್ನು ಇಂದಿನಿಂದ ಬಿಟ್ಟುಬಿಡಿ ಎಂದು ಪೌಷ್ಟಿಕತಜ್ಞೆ ಲೊವ್ನೀತ್ ಬಾತ್ರಾ ಸಲಹೆ ನೀಡಿದ್ದಾರೆ, (ಏಜೆನ್ಸೀಸ್).

ಗಮನಿಸಿ: ಈ ಮಾಹಿತಿಯು ಜಾಗೃತಿ ಉದ್ದೇಶಕ್ಕಾಗಿ ಮಾತ್ರ. ನೀವು ಯಾವುದೇ ಸಮಸ್ಯೆಗಳನ್ನು ಅನುಭವಿಸಿದರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net